ಅನುಷ್ಕಾ ಬೆಂಗಳೂರಿನ ಹುಡುಗಿ ಎಂಬುದು ತುಂಬಾ ಜನಕ್ಕೆ ತಿಳಿದಿಲ್ಲ ಎಂದ ವಿರಾಟ್ ಕೊಹ್ಲಿ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಮತ್ತು ಟೀಕೆಗೊಳಗಾಗಿರುವ ಆಟಗಾರ ಯಾರು ಎಂದರೆ ಎಲ್ಲರ ಬಾಯಲ್ಲಿಯೂ ಬರುವ ಏಕೈಕ ಉತ್ತರ ವಿರಾಟ್ ಕೊಹ್ಲಿ ಎಂದು. ಹೌದು, ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲ್ಪಟ್ಟರು. ಹೀಗೆ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದರ ಮೂಲಕ ಭಾರೀ ವಿವಾದ ಹಾಗೂ ಟೀಕೆಗಳಿಗೆ ಒಳಗಾದರು.
ಹೀಗೆ ಕಳೆದ ವರ್ಷ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ ಈ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಕೂಡ ರಾಜೀನಾಮೆಯನ್ನು ಸಲ್ಲಿಸಿದ್ದರು. ಈ ಮೂಲಕ ಎಲ್ಲಾ ಮಾದರಿಯ ಭಾರತ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ವಿರಾಟ್ ಕೊಹ್ಲಿ ಸದ್ಯ ಟೀಮ್ ಇಂಡಿಯಾದ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಹೀಗೆ ನಾಯಕತ್ವವನ್ನು ತ್ಯಜಿಸಿದ ನಂತರ ಸಾಕಷ್ಟು ಚರ್ಚೆಗಳು ಹಾಗೂ ಟೀಕೆಗಳಿಗೆ ಕಾರಣರಾದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ತಮ್ಮ ಮಗಳಾದ ವಾಮಿಕಾಳ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದವರ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದರು. ವಿರಾಟ್ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಮಗಳ ಚಿತ್ರಗಳನ್ನು ಹಂಚಿಕೊಂಡಿದ್ದವರ ವಿರುದ್ಧ ಕಿಡಿಕಾರಿದ್ದರು. ಹಾಗೂ ಈ ವಿಷಯಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಸಹ ಭಾರೀ ವಿರೋಧವನ್ನು ಎದುರಿಸಿದರು.
ಹೀಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ವಿರುಷ್ಕಾ ಜೋಡಿ ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಕುರಿತು ಮಾತನಾಡಿದ್ದು ಅನುಷ್ಕಾ ಶರ್ಮಾಗೂ ಬೆಂಗಳೂರಿಗೂ ಇರುವ ನಂಟನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ..

ಅನುಷ್ಕಾ ಶರ್ಮಾ ಬೆಂಗಳೂರಿನ ಹುಡುಗಿ
ಅನುಷ್ಕಾ ಶರ್ಮಾ ಓರ್ವ ಬೆಂಗಳೂರಿನ ಹುಡುಗಿ, ಆಕೆ ಬೆಳೆದದ್ದು ಬೆಂಗಳೂರಿನಲ್ಲಿಯೇ, ಆಕೆ ನನಗಿಂತ ಹೆಚ್ಚು ಬಾರಿ ಬೆಂಗಳೂರು ಪ್ರವಾಸವನ್ನು ಕೈಗೊಂಡಿದ್ದಾಳೆ ಹಾಗೂ ಈಕೆ ಬೆಂಗಳೂರು ನಗರದ ಜತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾಳೆ ಮತ್ತು ಈ ವಿಷಯ ಹಲವಾರು ಜನರಿಗೆ ತಿಳಿದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದು ಅನುಷ್ಕಾ ಶರ್ಮಾಗೆ ಅಚ್ಚುಮೆಚ್ಚು
ಹೀಗೆ ಅನುಷ್ಕಾ ಶರ್ಮಾ ಬೆಂಗಳೂರಿನ ಹುಡುಗಿ ಎಂದಿರುವ ವಿರಾಟ್ ಕೊಹ್ಲಿ ಈ ಕಾರಣದಿಂದಾಗಿಯೇ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುವುದು ಅನುಷ್ಕಾ ಶರ್ಮಾಗೆ ನೆಚ್ಚಿನ ವಿಷಯ ಎಂದಿದ್ದಾರೆ. ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನವನ್ನು ನೀಡದೇ ಇದ್ದಾಗ ಅನುಷ್ಕಾ ಶರ್ಮಾ ಮುಖದಲ್ಲಿ ಬೇಸರ ಮೂಡುತ್ತದೆ ಎಂದು ಕೂಡ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇನ್ನು ತನ್ನ ಜೊತೆ ಬೆಂಗಳೂರಿಗೆ ಆಗಮಿಸಿದಾಗಲೆಲ್ಲಾ ತನ್ನ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಅನುಷ್ಕಾ ಶರ್ಮಾ ಖುಷಿ ಪಡುವ ಸಂಗತಿಯನ್ನು ಕೂಡ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಮನೆ ಇದ್ದಂತೆ
ಇನ್ನು ಬೆಂಗಳೂರು ನಗರದ ಕುರಿತು ತನ್ನ ಅನುಭವವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ ಬೆಂಗಳೂರಿಗೆ ಬಂದಾಗಲೆಲ್ಲ ಸ್ವಂತ ಮನೆಗೆ ಬಂದಂತಹ ಅನುಭವವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಹಿಂದೆ ಅಂಡರ್ 14 ಕ್ರಿಕೆಟ್ ಹಾಗೂ ಅಂಡರ್ 15 ಕ್ರಿಕೆಟ್ ಆಡುತ್ತಿದ್ದಾಗ ಬೆಂಗಳೂರಿಗೆ ಹೆಚ್ಚಾಗಿ ಆಗಮಿಸುತ್ತಿದ್ದ ವಿರಾಟ್ ಕೊಹ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications