Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: 2023ರ ವಿಶ್ವಕಪ್‌ ಸೋಲಲ್ಲ; ಕ್ರಿಕೆಟ್ ವೃತ್ತಿಜೀವನದ 2 ನೋವಿನ ಕ್ಷಣ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ

ಮೇ 18 ಶನಿವಾರ, ಟೀಮ್‌ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್‌ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ತಮ್ಮ ಆಟದಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಹೊಡೆದಿರುವ ದಾಖಲೆಯನ್ನು ವಿರಾಟ್‌ ಕೊಹ್ಲಿ ಹೊಂದಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿಯೂ ಈವರೆಗೂ ಯಾರು (973 ರನ್‌) ಮುರಿಯಲಾಗದ ದಾಖಲೆಯನ್ನು ಸೃಷ್ಟಿಸಿದ್ದಾರೆ.

Virat Kohli Reveals 2 Painful Moments in Cricket Career

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡುವ ಪ್ರತಿಷ್ಠ ಪ್ರಶಸ್ತಿಗಳಿಗೂ ಕೊಹ್ಲಿ ಭಾಜನರಾಗಿರುವುದು ವಿಶೇಷ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ಇಷ್ಟೊಂದು ದಾಖಲೆ ಮಾಡಲು ಕೊಹ್ಲಿ ನಾಯಕತ್ವವೂ ಒಂದು ಕಾರಣ ಎಂದರೆ ತಪ್ಪಗಲಾರದು.

ಇಷ್ಟೊಂದು ಯಶಸ್ಸು ಸಾಧಿಸಿರುವು ವಿರಾಟ್‌ ಕೊಹ್ಲಿ 2011ರ ಏಕದಿನ ವಿಶ್ವಕಪ್‌ ಮತ್ತು 2013ರ ಚಾಂಪಿಯನ್‌ ಟ್ರೋಫಿ ಗೆದ್ದಿರುವುದು ಬಿಟ್ಟರೆ, ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿಯೂ ಕೊಹ್ಲಿ ಇನ್ನೂ ಒಂದು ಕಪ್‌ ಗೆದ್ದಿಲ್ಲ.

ಕಳೆದ ವರ್ಷ ಕೂಡ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್‌ ಇಂಡಿಯಾ ಸೋತಿತ್ತು. ಇದರಿಂದ ವಿರಾಟ್‌ ಕೊಹ್ಲಿ ತುಂಬ ಬೇಸರಗೊಂಡಿದ್ದಾರೆ, ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದೀಗ ವಿರಾಟ್‌ ಕೊಹ್ಲಿ ತಮ್ಮ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ವೃತ್ತಿಜೀವನದ 2 ನೋವಿನ ಕ್ಷಣ ಬಹಿರಂಗಪಡಿಸಿದ್ದಾರೆ.

Virat Kohli Reveals 2 Painful Moments in Cricket Career

ನಾನು 2016ರಲ್ಲಿ ಎರಡು ಹೃದಯಾಘಾತಗಳನ್ನು ಅನುಭವಿಸಿದೆ. 2016 ರಲ್ಲಿ ಮೊದಲು ಟಿ20 ವಿಶ್ವಕಪ್‌ ಅನ್ನು ಗೆಲ್ಲಬಹುದೆಂದು ನಾನು ಭಾವಿಸಿದೆ.
ಆದರೆ ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲಬೇಕಾಯಿತು.

ಬಳಿಕ ಐಪಿಎಲ್‌ ಫೈನಲ್ ಸೋಲು ನನ್ನ ಹೃದಯವನ್ನು ಮುರಿದಿತ್ತು. ಇದರಿಂದ ಚೇತರಿಸಿಕೊಳ್ಳಲು ನನಗೆ ಕೆಲ ದಿನಗಳು ಬೇಕಾಯಿತು ಎಂದು ವಿರಾಟ್ ಕೊಹ್ಲಿ ಜಿಯೋ ಸಿನಿಮಾಗೆ ತಿಳಿಸಿದ್ದಾರೆ.

2016ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರೂ, ಆದರೆ ಟೀಮ್‌ ಇಂಡಿಯಾವನ್ನು ಫೈನಲ್‌ಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ.

ಐಪಿಎಲ್‌ನಲ್ಲಿಯೂ ಅದೇ ಫಾರ್ಮ್‌ ಮುಂದುವರೆಸಿದ ವಿರಾಟ್‌ ಕೊಹ್ಲಿ, 4 ಶತಕಗಳು ಮತ್ತು 7 ಅರ್ಧಶತಕಗಳೊಂದಿಗೆ ದಾಖಲೆಯ 973 ರನ್‌ಗಳನ್ನು ಕಲೆಹಾಕಿದ್ದರು. ಕೊಹ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧದ ಫೈನಲ್‌ನಲ್ಲಿ ಆರ್‌ಸಿಬಿ ಪಂದ್ಯ ಗೆಲ್ಲುವಲ್ಲೊ ವಿಫಲವಾಗಿತ್ತು.

Story first published: Saturday, May 18, 2024, 19:34 [IST]
Other articles published on May 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+