Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಂಕ್ ಬಾಲ್ ಅನುಭವ ಹಂಚಿಕೊಂಡ ನಾಯಕ ಕೊಹ್ಲಿ

Virat Kohli Reveals His First Experience With Pink Cricket Ball

ಭಾರತ-ಬಾಂಗ್ಲಾದೇಶ ವಿರುದ್ಧ ನಾಳೆಯಿಂದ ಮೊದಲ ಟೆಸ್ಟ್‌ ಪಂದ್ಯ ಇಂದೋರ್‌ನಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್‌ಕೋಹ್ಲಿ ಪಿಂಕ್ ಬಾಲ್ ಕುರಿತಾಗಿನ ತಮ್ಮ ಮೊದಲ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತ -ಬಾಂಗ್ಲಾ ನಡುವಿನ ಎರಡನೇ ಪಂದ್ಯ ಡೇ&ನೈಟ್ ಪಂದ್ಯವಾಗಿರಲಿದ್ದು ಐತಿಹಾಸಿಕವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ನಾಳೆಯಿಂದ ಮೊದಲ ಪಂದ್ಯ ಆರಂಭವಾಗಲಿದ್ದು ಅದಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಪ್ರತಿಕ್ರಿಯಿಸಿದ್ರು. ಈ ಸಂದರ್ಭದಲ್ಲಿ ಕೋಹ್ಲಿ ಪಿಂಕ್ ಬಾಲ್ ಅನುಭವ ಹಂಚಿಕೊಂಡರು

ಟೀಮ್ ಇಂಡಿಯಾ ಆಟಗಾರು ಪಿಂಕ್ ಬಾಲ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅಭ್ಯಾಸವನ್ನು ನಡೆಸಿದ್ದಾಗಿ ತಿಳಿಸಿದರು. 'ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ನಲ್ಲಿ ಆಡಿದ್ದೇನೆ. ಚೆಂಡನ್ನು ಪಿಕ್ ಮಾಡಲು ಸ್ವಲ್ಪ ಹೆಚ್ಚಿನ ಏಕಾಗ್ರತೆಯ ಅವಶ್ಯಕತೆಯಿದೆ' ಎಂದು ತಮ್ಮ ಅನುಭವ ಹಂಚಿಕೊಂಡರು.

ಕೆಂಪು ಬಾಲ್‌ನಲ್ಲಿ ಆಡಿದ ಬಳಿಕ ಪಿಂಕ್ ಬಾಲ್‌ನಲ್ಲಿ ಆಡಿದರೆ ಸ್ವಲ್ಪ ಹೆಚ್ಚಿನ ಏಕಾಗ್ತತೆಯನ್ನು ನೀಡಬೇಕಾಗುತ್ತದೆ. ಮಾತ್ರವಲ್ಲ ಕೆಂಪುಬಾಲ್‌ಗೆ ಹೋಲಿಸಿದರೆ ಪಿಂಕ್ ಬಾಲ್ ಹೆಚ್ಚೇ ಸ್ವಿಂಗ್ ಆಗುತ್ತದೆ. ವೇಗದ ಎಸೆತಗಳು ಹೆಚ್ಚಿನ ಸ್ವಿಂಗ್ ಪಡೆಯುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಭಾರತ ಬಾಂಗ್ಲಾದೇಶ ನಡುವಿನ ಡೇ&ನೈಟ್ ಪಂದ್ಯ ನವೆಂಬರ್ 22ನೇ ತಾರೀಕು ಈಡನ್ ಗಾರ್ಡನ್ ಮೈದಾನದಲ್ಲಿ ಆರಂಭವಾಗಲಿದೆ.

Story first published: Wednesday, November 13, 2019, 18:03 [IST]
Other articles published on Nov 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+