Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ಆಯ್ಕೆಯಲ್ಲಿ ಐಪಿಎಲ್‌ ಪ್ರಭಾವ: ವಿರಾಟ್ ಕೊಹ್ಲಿ ಏನಂತಾರೆ?

Virat Kohli reveals how IPL 2019 will influence India’s World Cup selection

ನವದೆಹಲಿ, ಮಾರ್ಚ್ 1: ವಿಶ್ವಕಪ್ ಗಾಗಿ ತಂಡ ಆರಿಸುವಾಗ ಐಪಿಎಲ್ ಪ್ರದರ್ಶನ ಯಾವುದೇ ರೀತಿಯಲ್ಲಿ ಪ್ರಭಾವ ಬೀರಲಾರದು ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಐಪಿಎಲ್ ಸಾಧನೆಯನ್ನು ವಿಶ್ವಕಪ್ ಆಯ್ಕೆಯಲ್ಲಿ ಪರಿಗಣಿಸಬೇಕು ಎಂಬುದು ಸರಿಯಲ್ಲ ಎಂಬರ್ಥದಲ್ಲಿ ಕೊಹ್ಲಿ ಮಾತನಾಡಿದ್ದಾರೆ.

ಮಾರ್ಚ್ 2ರಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 5 ಏಕದಿನ ಪಂದ್ಯಗಳ ಸರಣಿಯನ್ನು ಎದುರುಗೊಳ್ಳಲಿದೆ. ವಿಶ್ವಕಪ್‌ಗೂ ಮುನ್ನ ಭಾರತ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುತ್ತಿರುವ ಕೊನೆಯ ಸರಣಿಯಿದು. ಇದರ ಬಳಿಕ ಐಪಿಎಲ್ ಮತ್ತು ಆ ಬಳಿಕ ವಿಶ್ವಕಪ್‌ ನಲ್ಲಿ ಭಾರತ ಮೈದಾನಕ್ಕಿಳಿಯುವುದರಲ್ಲಿದೆ.

'ಇಲ್ಲ, ವಿಶ್ವಕಪ್‌ನಲ್ಲಿ ಐಪಿಎಲ್ ಪ್ರಭಾವ ಬೀರೋದನ್ನು ನಾನು ನೋಡಬಯಸುವುದಿಲ್ಲ. ಅದು ತುಂಬಾ ತುಂಬಾ ಮೂಲಭೂತ ರೀತಿಯ ವಿಶ್ಲೇಷಣೆ ಎಂದು ನಾನು ಭಾವಿಸುತ್ತೇನೆ' ಎಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಕೊಹ್ಲಿ ಹೇಳಿದರು.

'ಭಾರತ ತಂಡಕ್ಕೆ ಎರಡನೇ ಕೀಪರ್ ಆರಿಸಲು ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್‌ಗೆ ಐಪಿಎಲ್ ಪ್ರದರ್ಶನ ಮಾನದಂಡವಾಗಲಿದೆ' ಎಂಬ ಮಾತುಗಳು ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, 'ಐಪಿಎಲ್ ಯಾವತ್ತಿಗೂ ವಿಶ್ವಕಪ್ ಆಯ್ಕೆಯಲ್ಲಿ ವ್ಯತ್ಯಾಸ ತರಲಾರದು' ಎಂದು ಖಾತ್ರಿಪಡಿಸಿದ್ದಾರೆ. ಮೇ 30ರಿಂದ ವಿಶ್ವಕಪ್ ಪಂದ್ಯ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭಗೊಳ್ಳಲಿದೆ.

Story first published: Friday, March 1, 2019, 16:22 [IST]
Other articles published on Mar 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+