2017ರ ನಂತರ ಬೌಲಿಂಗ್ ಮಾಡದ್ದಕ್ಕೆ ಸ್ವಾರಸ್ಯಕರ ಕಾರಣ ನೀಡಿದ ಕೊಹ್ಲಿ!

ಲಂಡನ್, ಜೂನ್ 3: ಬ್ಯಾಟಿಂಗ್‌ಗಾಗಿ ಅನೇಕ ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿ ಮಧ್ಯಮ ವೇಗಿಯೂ ಹೌದು. ಈವರೆಗೆ ಕೊಹ್ಲಿ 8 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ತಾನು 2017ರ ನಂತರ ಯಾಕೆ ಬೌಲಿಂಗ್ ಮಾಡುತ್ತಿಲ್ಲ ಎಂಬುದನ್ನು ಟೀಮ್ ಇಂಡಿಯಾ ನಾಯಕ ಕೊಹ್ಲಿ ತಿಳಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬೌಲಿಂಗ್ ನಿಲ್ಲಿಸಿದ್ದರ ಕಾರಣ ಹೇಳುತ್ತ ಕೊಹ್ಲಿ, '2017ರ ಡಿಸೆಂಬರ್ ನಲ್ಲಿ ಶ್ರೀಲಂಕಾದಲ್ಲಿ ಏಕದಿನ ಸರಣಿ ನಡೆಯುತ್ತಿತ್ತು. ಅವತ್ತು ನಾವು ಬಹುತೇಕ ಪಂದ್ಯವನ್ನು ಗೆದ್ದಿದ್ದೆವು. ಹೀಗಾಗಿ ನಾನು ಬೌಲಿಂಗ್ ಮಾಡಲಾ ಅಂತ ಧೋನಿಯಲ್ಲಿ ಕೇಳಿದೆ. ಅದಕ್ಕೆ ಧೋನಿ ಒಪ್ಪಿಗೆಯೂ ನೀಡಿದ್ದರು' ಎಂದರು.
ಮಾತು ಮುಂದುವರೆಸಿದ ಕೊಹ್ಲಿ, 'ಬೌಲಿಂಗ್ ಮಾಡಲು ಧೋನಿಯಿಂದ ಗ್ರೀನ್ ಸಿಗ್ನಲ್ ಬಂದ ಕೂಡಲೇ ನಾನು ಚೆಂಡು ಎಸೆಯಲು ಸಜ್ಜಾದೆ. ಆಗ ಬೌಂಡರಿ ಲೈನ್ ಸಮೀಪ ನಿಂತಿದ್ದ (ಜಸ್‌ಪ್ರೀತ್) ಬೂಮ್ರಾ, ಗ್ರೌಂಡ್‌ನಲ್ಲಿ ತಮಾಷೆ ಆಡಬೇಡ; ಇದು ಅಂತಾರಾಷ್ಟ್ರೀಯ ಪಂದ್ಯ ಎಂದು ಕಿರುಚಿದ' ಎಂದು ವಿವರಿಸುತ್ತ ನಗು ಚೆಲ್ಲಿದರು.
'ತಂಡದಲ್ಲಿರುವ ಯಾರೂ ನಾನು ಬೌಲಿಂಗ್ ಮಾಡೋದನ್ನು ನಂಬಲಾರರು. ಆದರೆ ನನಗೆ ನನ್ನ ಬೌಲಿಂಗ್ ಬಗ್ಗೆ ನಂಬಿಕೆಯಿದೆ. 2017ರ ಆ ಘಟನೆಯ ಬಳಿಕ ಮತ್ತೆ ನಾನು ಬೌಲಿಂಗ್ ಗೋಜಿಗೆ ಹೋಗಲಿಲ್ಲ' ಎಂದು ವಿಶ್ವಕಪ್ ನಿಮಿತ್ತ ಸಂದರ್ಶನವೊಂದರಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದರು.
ಇತ್ತೀಚೆಗೆ ವಿಶ್ವಕಪ್ ಅಭ್ಯಾಸ ವೇಳೆ ಕೊಹ್ಲಿ ಬೌಲಿಂಗ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂದ್ಹಾಗೆ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಮತ್ತು ಟಿ20ಯಲ್ಲಿ ತಲಾ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ನಲ್ಲಿ ಒಟ್ಟು 163 ಎಸೆತಗಳನ್ನು ಎಸೆದಿದ್ದರಾದರೂ ಕೊಹ್ಲಿಗೆ ಒಂದೂ ವಿಕೆಟ್ ಲಭಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications