ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಸಿಕೊಂಡ ವಿರಾಟ್ ಕೊಹ್ಲಿ-ರಿಷಬ್ ಪಂತ್!

ನವದೆಹಲಿ, ಮೇ 17: ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಮತ್ತು ಬ್ಯಾಟ್ಸ್ಮ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, ಹೊಸ ಟಿವಿ ಕಮರ್ಷಿಯಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಗೇಲಿಗೊಳಗಾಗಿದ್ದಾರೆ.
ಕೊಹ್ಲಿ-ಪಂತ್ ಇಬ್ಬರೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಈ ವಿಡಿಯೋವನ್ನು ಮೊದಲು ಕೊಹ್ಲಿ ತನ್ನ ಟ್ವಿಟರ್ ಅಕೌಂಟ್‌ಗೆ ಅಪ್‌ಲೋಡ್ ಮಾಡಿದ್ದರು. ಅನಂತರ ರಿಷಬ್ ಪಂತ್ ಕೂಡ ತನ್ನ ಟ್ವಿಟರ್ ಖಾತೆಗೆ ಹಾಕಿಕೊಂಡಿದ್ದರು.
ಜಾಹೀರಾತಿಗೆ ಅಭಿಮಾನಿಗಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಬಹುದು ಎಂದು ಬಹುಶಃ ಪಂತ್-ಕೊಹ್ಲಿ ಇಬ್ಬರೂ ಅಂದುಕೊಂಡಿದ್ದರು ಅನ್ನಿಸುತ್ತೆ. ಆದರೆ ಸಾಮಾಜಿಕ ಜಾಲತಾಣಿಗರು ಸುಮ್ಮನೆ ಒಪ್ಪಿಕೊಳ್ಳುವ ಬದಲು ಕಾಲೆಳೆದಿದ್ದಾರೆ.
ಹೊಸ ಜಾಹೀರಾತಿನಲ್ಲಿ ಕೊಹ್ಲಿ-ಪಂತ್
ಹಿಮಾಲಯ ಮೆನ್ ಫೇಸ್ ವಾಷ್ ಕ್ರೀಮಿನ ಜಾಹೀರಾತಿನಲ್ಲಿ ಕೊಹ್ಲಿ ಮತ್ತು ಪಂತ್ ಇಬ್ಬರೂ ಹೆಜ್ಜೆ ಹಾಕಿದ್ದರು. ಆ ವಿಡಿಯೋವನ್ನು ಹಾಕಿಕೊಂಡಿದ್ದ ಕೊಹ್ಲಿ, 'ಪಿಂಪಲ್ (ಮೊಡವೆ) ಸಮಸ್ಯೆ ಬಗೆ ಹರಿಸಲು ನಾನು ಮತ್ತು ಪಂತ್ ಜೊತೆಯಾಗಿದ್ದೇವೆ ನೋಡಿ' ಎಂಬರ್ಥದಲ್ಲಿ ಬರೆದುಕೊಂಡಿದ್ದರು.
ಸ್ಟುವರ್ಟ್ ಬ್ರಾಡ್ ಟ್ವೀಟ್
ಟ್ವಿಟರ್ ಮೂಲಕ ಪಂತ್-ಕೊಹ್ಲಿ ಕಾಲೆಳೆದವರಲ್ಲಿ ಇಂಗ್ಲೆಂಡ್ ಕ್ರಿಕೆಟರ್ ಸ್ಟುವರ್ಟ್ ಬ್ರಾಡ್ ಕೂಡ ಸೇರಿಕೊಂಡಿದ್ದಾರೆ. 'ನಾನು ಬಲವಾಗಿ ನಂಬಿರುವಂತೆ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಈ ಬ್ರ್ಯಾಂಡಿಗೆ ಉತ್ತಮ ರಾಯಭಾರಿಗಳು' ಎಂದು ಬ್ರಾಡ್ ಬರೆದುಕೊಂಡಿದ್ದಾರೆ.
ಹಲ್ಲು ಕಿಸಿಯುವ ಜಿಫ್ ಅಂಟಿಸಿದ ಅಭಿಜಿತ್
ಪಂತ್-ಕೊಹ್ಲಿ ಕಾಣಿಸಿಕೊಂಡಿರುವ ಈ ಜಾಹೀರಾತಿನ ವಿಡಿಯೋಗೆ ಅಭಿಜಿತ್ ಎಂಬವರು ವ್ಯಕ್ತಿಯೊಬ್ಬರು ಹಲ್ಲು ಕಿಸಿಯುತ್ತಿರುವ ಗ್ರಾಫಿಕ್ಸ್ ಇಂಟರ್ಚೇಂಜ್ ಫಾರ್ಮ್ಯಾಟ್ ಅನ್ನು ಹಾಕಿ ಟ್ವಿಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೊಡವೆ ಮಾಯ?!
'ಕುಣಿತಾ ಕುಣಿತಾ ಮೊಡವೆ ಮಾಯವಾಗಿಬಿಟ್ಟಿತು. ಎಷ್ಟೊಂದು ವೇಗದಲ್ಲಿ ಪರಿಹಾರ' ಎಂಬರ್ಥದಲ್ಲಿ ಇಂಡಿಯನ್ ಭಕ್ತ್ ಹೆಸರಿನ ಟ್ವಿಟರ್ ಖಾತೆಯಿಂದ ಒಬ್ಬರು ತಮಾಷೆ ಮಾಡಿದ್ದಾರೆ. ಇನ್ನೂ ಸಾಮಾಜಿಕ ತಾಲತಾಣಗಳಲ್ಲಿ ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಸಾಕಷ್ಟು ಮಂದಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications