Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಏಕದಿನ ರ್‍ಯಾಂಕಿಂಗ್ಸ್: ಟಾಪ್ 2ರಲ್ಲಿ ರನ್ ಮಷಿನ್, ಹಿಟ್‌ಮ್ಯಾನ್!

Virat Kohli, Rohit Sharma maintain top spots in ODIs

ಬೆಂಗಳೂರು: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿ ಬುಧವಾರ (ಆಗಸ್ಟ್ 26) ನೂತನ ರ್‍ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಒಡಿಐ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಬೆನ್ನಲ್ಲೇ ಪಾಕಿಸ್ತಾನದ ಅಪಾಯಕಾರಿ ಬ್ಯಾಟ್ಸ್‌ಮನ್, ನಾಯಕ ಬಾಬರ್ ಅಝಾಮ್ ಇದ್ದಾರೆ.

ವಿಶೇಷವೆಂದರೆ ವಿಶ್ವಕಪ್‌ನಲ್ಲಿ ಬಹಳಷ್ಟು ಸಾರಿ ಕಾದಾಡಿ, ಬಲಿಷ್ಠ ತಂಡಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಟಗಾರರ ಶ್ರೇಯಾಂಕ ತೀರಾ ಕುಸಿದಿದೆ. ಏಕದಿನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ 2ನೇ ಶ್ರೇಯಾಂಕದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ನೂತನ ರ್‍ಯಾಂಕ್ ಪಟ್ಟಿಯಲ್ಲಿ ಭಾರತೀಯ ಆಟಗಾರರ ಸ್ಥಾನ, ತಂಡಗಳ ಶ್ರೇಯಾಂಕದ ಮಾಹಿತಿ ಕೆಳಗಿದೆ.

ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್

ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್

1. ವಿರಾಟ್ ಕೊಹ್ಲಿ (ಭಾರತ, 871 ರೇಟಿಂಗ್ ಪಾಯಿಂಟ್ಸ್‌), 2. ರೋಹಿತ್ ಶರ್ಮಾ (ಭಾರತ, 855), 3. ಬಾಬರ್ ಅಝಾಮ್ (ಪಾಕಿಸ್ತಾನ, 829), 4. ರಾಸ್ ಟೇಲರ್ (ನ್ಯೂಜಿಲೆಂಡ್), 5. ಫಾ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), 6. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 7. ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), 8. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), 9. ಜೋ ರೂಟ್ (ಇಂಗ್ಲೆಂಡ್), 10. ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ).

ಬೌಲಿಂಗ್ ಶ್ರೇಯಾಂಕ

ಬೌಲಿಂಗ್ ಶ್ರೇಯಾಂಕ

1. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್, 722 ರೇಟಿಂಗ್), 2. ಜಸ್‌ಪ್ರೀತ್ ಬೂಮ್ರಾ (ಭಾರತ, 719), 3. ಮುಜೀಬ್ ಉರ್ ರಹ್ಮಾನ್ (ಅಫ್ಘಾನಿಸ್ತಾನ, 701), 4. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), 5. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), 6. ಮೊಹಮ್ಮದ್ ಅಮೀರ್ (ಪಾಕಿಸ್ತಾನ), 7. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 8. ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್), 9. ರಶೀದ್ ಖಾನ್ (ಅಫ್ಘಾನಿಸ್ತಾನ), 10 ಲಾಕಿ ಫಾರ್ಗುಸನ್ (ನ್ಯೂಜಿಲೆಂಡ್).

ಏಕದಿನ ಆಲ್ ರೌಂಡರ್‌ಗಳು

ಏಕದಿನ ಆಲ್ ರೌಂಡರ್‌ಗಳು

1. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), 2. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 3. ಇಮಾದ್ ವಾಸಿಮ್ (ಪಾಕಿಸ್ತಾನ), 4. ಕಾಲಿನ್ ಡೆ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), 5. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 6. ರಶೀದ್ ಖಾನ್ (ಅಫ್ಘಾನಿಸ್ತಾನ), 7. ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್), 8. ರವೀಂದ್ರ ಜಡೇಜಾ (ಭಾರತ), 9. ಸಿಕಂದರ್ ರಾಝಾ (ಜಿಂಬಾಬ್ವೆ), 10. ಸೀನ್ ವಿಮಿಯಮ್ಸ್ (ಜಿಂಬಾಬ್ವೆ).

ಏಕದಿನ ಟಾಪ್ 10 ತಂಡಗಳು

ಏಕದಿನ ಟಾಪ್ 10 ತಂಡಗಳು

1. ಇಂಗ್ಲೆಂಡ್ (127 ರೇಟಿಂಗ್), 2. ಭಾರತ (119), 3. ನ್ಯೂಜಿಲೆಂಡ್ (116), 4. ದಕ್ಷಿಣ ಆಫ್ರಿಕಾ, 5. ಆಸ್ಟ್ರೇಲಿಯಾ, 6. ಪಾಕಿಸ್ತಾನ, 7. ಬಾಂಗ್ಲಾದೇಶ, 8. ಶ್ರೀಲಂಕಾ, 9. ವೆಸ್ಟ್ ಇಂಡೀಸ್, 10. ಅಫ್ಘಾನಿಸ್ತಾನ.

Story first published: Thursday, August 27, 2020, 10:40 [IST]
Other articles published on Aug 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+