Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಮೇಜರ್ ಸರ್ಜರಿ: ಟೀಮ್ ಇಂಡಿಯಾ ಸ್ಟಾರ್ಸ್‌ ವಿರಾಟ್ ಕೊಹ್ಲಿ, ರೋಹಿತ್‌ಗೆ ಡಿಮೋಷನ್, ವೇತನ ಕಡಿತ ಸಾಧ್ಯತೆ

BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ಒಪ್ಪಂದದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದೆ. ಪ್ರಮುಖ ಆಟಗಾರರ ವೇತನ ಶ್ರೇಣಿಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಹೇಳಲಾಗಿದೆ. ಇದು ಜಾರಿಯಾದ್ರೆ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಡಿಮೋಷನ್, ವೇತನ ಕಡಿತ ಆಗಲಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ವಾರ್ಷಿಕ ರಿಟೇನರ್‌ಶಿಪ್ ಒಪ್ಪಂದಗಳಿಂದ ಉನ್ನತ ಶ್ರೇಣಿ ಆಗಿರುವ A ಪ್ಲಸ್ ವರ್ಗವನ್ನು ತೆಗೆದುಹಾಕುವಂತೆ ಶಿಫಾರಸು ಮಾಡಿದೆ. ಇದರ ಅಡಿಯಲ್ಲಿ ಗ್ರೇಡ್ ಎ ವರ್ಗವನ್ನು ನಿಲ್ಲಿಸಲಾಗುತ್ತಿದೆ. ಈ ನಿರ್ಧಾರದ ಪರಿಣಾಮ ಟೀಮ್ ಇಂಡಿಯಾದ ಅನುಭವಿ ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬಿ ವರ್ಗಕ್ಕೆ ಇಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Virat Kohli Rohit Sharma May Face Demotion as BCCI Plans Contract Changes

ರೋಹಿತ್, ವಿರಾಟ್ ಕೊಹ್ಲಿ ವೇತನ ಕಡಿತ: ಇದು ಜಾರಿಯಾದ್ರೆ, ಜನವರಿ 2025ರಿಂದ ಒಂದೇ ಅಂತಾರಾಷ್ಟ್ರೀಯ ಕ್ರಿಕೆಟ್ ಫಾರ್ಮ್ಯಾಟ್‌ನಲ್ಲಿ ಮಾತ್ರ ಆಡಿರುವ ಕಾರಣ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಬಿ ವರ್ಗಕ್ಕೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೇಂದ್ರ ಒಪ್ಪಂದ ಸಮಿತಿ ಈ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಸಮಿತಿಯು ಎ+ ವರ್ಗವನ್ನು (7 ಕೋಟಿ ರೂಪಾಯಿ) ರದ್ದುಗೊಳಿಸಿ, ಎ, ಬಿ ಹಾಗೂ ಸಿ ಎಂಬ ಮೂರು ವರ್ಗಗಳನ್ನು ಮಾತ್ರ ಉಳಿಸಿಕೊಳ್ಳಲು ಶಿಫಾರಸು ಮಾಡಿದೆ.

ಬಿಸಿಸಿಐ ತೆಗೆದುಕೊಂಡಿರುವ ಈ ಹೊಸ ಮಾದರಿಯನ್ನು ಅನುಮೋದಿಸುತ್ತದೆಯೇ ಎಂಬುದರ ಕುರಿತು ಮಾಹಿತಿ ಮುಂದಿನ ಸುಪ್ರೀಂ ಕೌನ್ಸಿಲ್ ಸಭೆಯಲ್ಲಿ ತಿಳಿದುಬರಲಿದೆ. ಒಂದು ವೇಳೆ ಇದಕ್ಕೆ ಅನುಮೋದನೆ ಸಿಕ್ಕರೆ, ಪ್ರಸ್ತುತ ಏಕದಿನ ಆಟಗಾರರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬಿ ವರ್ಗಕ್ಕೆ ಇಳಿಸುವ ಸಾಧ್ಯತೆಯಿದೆ.

ಬಿಸಿಸಿಐ ಕೇಂದ್ರ ಒಪ್ಪಂದಗಳು ಭಾರತೀಯ ಕ್ರಿಕೆಟಿಗರಿಗೆ ವಾರ್ಷಿಕ ರಿಟೈನರ್‌ಗಳಾಗಿದ್ದು, ಎ+, ಎ, ಬಿ ಮತ್ತು ಸಿ ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ. ಪಂದ್ಯ ಶುಲ್ಕದ ಜೊತೆಗೆ ಗಣನೀಯ ವಾರ್ಷಿಕ ಶುಲ್ಕವನ್ನು ವರ್ಗದ ಆಧಾರದ ಮೇಲೆ ನೀಡಲಾಗುತ್ತಿತ್ತು. ಹಾಗಾದ್ರೆ ಯಾವ ವರ್ಗಕ್ಕೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಯಾವ ವರ್ಗಕ್ಕೆ ಎಷ್ಟು?

* ಎ+ - 7,00,00,000 ಕೋಟಿ ರೂಪಾಯಿ
* ಎ - 5,00,00,000 ಕೋಟಿ ರೂಪಾಯಿ
* ಬಿ - 3,00,00,000 ಕೋಟಿ ರೂಪಾಯಿ
* ಸಿ - 1,00,00,000 ಕೋಟಿ ರೂಪಾಯಿ

ಎ+ ಹಾಗೂ ಎ ವರ್ಗದ ಆಟಗಾರರು: ಏಪ್ರಿಲ್ 2025ರಲ್ಲಿ ಪ್ರಕಟಿಸಲಾದ 2024-25ರ ಪಟ್ಟಿಯಲ್ಲಿ ರೋಹಿತ್, ವಿರಾಟ್, ರವೀಂದ್ರ ಜಡೇಜಾ ಮತ್ತು ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಎ+ ವರ್ಗದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್, ಕೆ.ಎಲ್.ರಾಹುಲ್, ಟೀಮ್ ಇಂಡಿಯಾ ಪುರುಷರ ODI ಹಾಗೂ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಿಷಬ್ ಪಂತ್ ಎ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿ ಮತ್ತು ಸಿ ವರ್ಗದ ಆಟಗಾರರು: ಟಿ-20ಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಗ್ರೇಡ್ ಬಿ ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್.

Story first published: Tuesday, January 20, 2026, 15:14 [IST]
Other articles published on Jan 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+