ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!

ನವದೆಹಲಿ, ಜುಲೈ 26: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಮಧ್ಯೆ ಏನೋ ಸರಿಯಿಲ್ಲ ಎಂಬ ಗಾಳಿ ಸುದ್ದಿಗಳು ಕೇಳಿಬರುತ್ತಲೇಯಿದೆ. ಇಚ್ಚೀಚೆಗೆ ವಿಶ್ವಕಪ್‌ನಲ್ಲೂ ಮತ್ತೆ ಈ ಗಾಳಿಸುದ್ದಿ ಹಬ್ಬಿತ್ತು. ಕೊಹ್ಲಿ-ರೋಹಿತ್ ಈಗೀಗಿನ ವರ್ತನೆ ಇಬ್ಬರ ಬಗೆಗಿನ ಸುದ್ದಿಗೆ ಪುಷ್ಟಿ ನೀಡುವಂತಿವೆ.
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ ವೇಳೆಯೂ ಕೊಹ್ಲಿ-ರೋಹಿತ್ ಮಧ್ಯೆ ಬಾಂಧವ್ಯ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಅದರಲ್ಲೂ ಜುಲೈ 9-10ರಂದು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಹೊರ ಬಿದ್ದಾಗ ಇಬ್ಬರ ಬಗೆಗಿನ ಗುಸುಗುಸು ಜೋರಾಗಿದ್ದವು.
ಕೊಹ್ಲಿ-ರೋಹಿತ್ ನಡುವೆ ವೈಮನಸ್ಸಿದೆ ಅಂತ ಬಿಂಬಿಸೋದು ಉದ್ದೇಶವಲ್ಲ. ಆದರೆ ದೇಸಿ ತಂಡವನ್ನು ಗಣನೆಗೆ ತೆಗೆದುಕೊಂಡಾಗ ಆಟಗಾರ ನಡುವಿನ ಮುನಿಸು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ರೋಹಿತ್-ಕೊಹ್ಲಿ ಮಧ್ಯೆ ಏನೋ ಸರಿಯಿಲ್ಲ ಅನ್ನೋದಕ್ಕೆ ಇಲ್ಲೊಂದಿಷ್ಟು ನಿದರ್ಶನಗಳಿವೆ.

ಅನುಷ್ಕಾ ಅನ್‌ಫಾಲೋ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಈ ಹಿಂದೆಯೇ ವಿರಾಟ್ ಕೊಹ್ಲಿ ಅವರನ್ನು ಟ್ವಿಟರ್‌ನಿಂದ ಅನ್ ಫಾಲೋ ಮಾಡಿದ್ದರು. ಅದಕ್ಕೆ, ಕೊಹ್ಲಿ ಆ್ಯಡ್ ಸಂಬಂಧಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂಬ ಕಾರಣ ನೀಡಿದ್ದರು. ಇತ್ತೀಚೆಗೆ 32ರ ಹರೆಯದ ಶರ್ಮಾ, ಕೊಹ್ಲಿ ಮತ್ತವರ ಪತ್ನಿ ಅನುಷ್ಕಾ ಶರ್ಮಾ ಇಬ್ಬರನ್ನೂ ಇನ್‌ಸ್ಟಾಗ್ರಾಮ್‌ನಿಂದ ಅನ್ ಫಾಲೋ ಮಾಡಿದ್ದಾರೆ.

ವಿಚಾರಣೆಗೆ ಮುಂದಾದ ಸಿಒಎ
ಭಾರತ ಕ್ರಿಕೆಟ್ ತಂಡಕ್ಕೆ ಪಂದ್ಯಗಳಿದ್ದಾಗ ಹೆಚ್ಚಿನ ಸಾರಿ ರೋಹಿತ್-ಕೊಹ್ಲಿ ಬಗೆಗಿನ ಅನಿಸಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದವು. ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಮಂಡಳಿ (ಸಿಒಎ) ಈ ಗಾಳಿ ಸುದ್ದಿ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದೆ. ರೋಹಿತ್-ಕೊಹ್ಲಿ ಇಬ್ಬರೂ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಆದರೆ ಇಬ್ಬರ ವರ್ತನೆ ಮಾತ್ರ ಅನುಮಾನ ಮೂಡಿಸುವಂತಿವೆ.

ಕೊಹ್ಲಿ ಈಗಲೂ ಹಿಂಬಾಲಕ
ಅಚ್ಚರಿಯೆಂದರೆ ನಾಯಕ ವಿರಾಟ್ ಕೊಹ್ಲಿ ಈಗಲೂ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಆದರೆ ಕೊಹ್ಲಿ ಅವರು ಶರ್ಮಾ ಪತ್ನಿ ರಿತಿಕಾ ಅವರನ್ನು ಫಾಲೋ ಮಾಡುತ್ತಿಲ್ಲ. ಹಾಗೇ ಅನುಷ್ಕಾ ಶರ್ಮಾ ಕೂಡ ರಿತಿಕಾ ಮತ್ತು ರೋಹಿತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ.

ತಾರೆಯರ ಮಧ್ಯೆ ಹೀಗೇಕೆ?
ರೋಹಿತ್, ರಿತಿಕಾ, ವಿರಾಟ್, ಅನುಷ್ಕಾ ಈ ನಾಲ್ವರೂ ತಾರೆಯರೇ. ಸೆಲೆಬ್ರೆಟಿಗಳು ಹೆಚ್ಚಿನವರು ಮತ್ತೊಬ್ಬ ಸೆಲೆಬ್ರಿಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸುತ್ತಿರುತ್ತಾರೆ. ಆದರೆ ರೋಹಿತ್-ಕೊಹ್ಲಿ ವಿಚಾರ ಸ್ವಲ್ಪ ಭಿನ್ನವಾಗಿದೆ. ಎಲ್ಲಾ ಬಿಟ್ಟು ರೋಹಿತ್ ಪತ್ನಿ ರಿತಿಕಾ ಕೂಡ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications