For Quick Alerts
ALLOW NOTIFICATIONS  
For Daily Alerts
 

ರೋಹಿತ್‌, ವಿರಾಟ್‌ ಎಲ್ಲಿಯವರೆಗೂ ಆಡುತ್ತಾರೆ? ದಾದಾ ಹೇಳಿದ್ದೇನು?

ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ವೃತ್ತಿ ಜೀವನದ ಬಗ್ಗೆ ಅನೇಕ ಪ್ರಶ್ನೆಗಳು ಎದ್ದವೆ. ಈ ಇಬ್ಬರೂ ಆಟಗಾರರು ಭಾರತ ಟ20 ವಿಶ್ವಕಪ್‌ ಚಾಂಪಿಯನ್‌ ಆದ ಬಳಿಕ ನಿವೃತ್ತಿಯನ್ನು ಘೋಷಿಸಿದರು. ಇದಾದ ಬಳಿಕ ಇತ್ತೀಚಿಗೆ ಐಪಿಎಲ್‌ ವೇಳೆ ಇಬ್ಬರೂ ಆಟಗಾರರು ಟೆಸ್ಟ್‌ ಫಾರ್ಮೆಟ್‌ಗೂ ವಿದಾಯ ಹೇಳಿದ್ದಾರೆ. ಈಗ ಈ ಇಬ್ಬರೂ ಆಟಗಾರರು ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇವರು ಇನ್ನು ಎಷ್ಟು ದಿನ ಆಡುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ.

ಆಸ್ಟ್ರೇಲಿಯಾ ಪ್ರವಾಸ ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್ ಬ್ಯಾಟರ್‌ಗಳಿಗೆ ಕೊನೆಯ ಅವಕಾಶ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಪ್ರವಾಸದಲ್ಲಿ ಇಬ್ಬರೂ ಆಟಗಾರರು ಕೊನೆಯ ಬಾರಿಗೆ ಭಾರತದ ಪರ ಕೊನೆಯ ಬಾರಿಗೆ ಮೈದಾನದಲ್ಲಿ ಆಡುವುದನ್ನು ನೋಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಈಗ ಈ ಇಬ್ಬರೂ ಆಟಗಾರರ ಬಗ್ಗೆ ಸೌರವ್ ಗಂಗೂಲಿ ಮಾತನಾಡಿದ್ದಾರೆ.

Virat Kohli Rohit Sharma s ODI Future Ganguly Speaks Up

ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಮತ್ತು ರೋಹಿತ್ ಏಕದಿನ ಪಂದ್ಯಗಳಲ್ಲಿ ಎಷ್ಟು ಕಾಲ ಆಡಬೇಕು ಎಂದು ಹೇಳಿದ್ದಾರೆ. ಈ ಇಬ್ಬ ದಾಖಲೆಗಳು ಏಕದಿನ ಫಾರ್ಮೆಟ್‌ನಲ್ಲಿ ಅಸಾಧಾರಣವಾಗಿದೆ. ಈ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡುವವರೆಗೂ ಆಡುತ್ತಾರೆ ಎಂದಿದ್ದಾರೆ. ಕೆಲವು ಮಾಧ್ಯಮಗಳು ಇವರಿಬ್ಬರೂ ಕೊನೆಯ ಬಾರಿಗೆ ಆಸ್ಟ್ರೇಲಯಾ ಪ್ರವಾಸದಲ್ಲಿ ಭಾರತದ ಪರ ಆಡಬಹುದು ಎಂದು ತಿಳಿಸಿವೆ. ಇದಕ್ಕೆ ಈಗ ಚರ್ಚೆಗಳು ಆರಂಭವಾಗಿವೆ.

ದಾದಾ ಹೇಳಿದ್ದೇನು?

ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಅವರು ಎಲ್ಲಿಯ ವರೆಗೂ ಉತ್ತಮ ಪ್ರದರ್ಶನ ನೀಡುತ್ತಾರೋ ಅಲ್ಲಿಯ ವರೆಗೆ ತಂಡದಲ್ಲಿ ಆಡುತ್ತಾರೆ. ಇವರು ಲಯದಲ್ಲಿದ್ದರೆ ಆಟ ಮುಂದುವರೆಯುತ್ತದೆ. ಇಬ್ಬರೂ ಏಕದಿನ ಫಾರ್ಮೆಟ್‌ನಲ್ಲಿ ಅಸಾಧಾರಣ ದಾಖಲೆ ಹೊಂದಿದ್ದಾರೆ ಎಂದು ದಾದಾ ತಿಳಿಸಿದ್ದಾರೆ.

Virat Kohli Rohit Sharma s ODI Future Ganguly Speaks Up

ಸೆಪ್ಟಂಬರ್‌ 9ರಂದು ದುಬೈನಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಫೆವರಿಟ್‌ ತಂಡ ಎಂದು ಗಂಗೂಲಿ ಹೇಳಿದ್ದಾರೆ. ಆಟಗಾರರಿಗೆ ವಿಶ್ರಾಂತಿ ಪಡೆಯಲು ಅಗತ್ಯವಾದ ಸಮಯ ಸಿಕ್ಕಿದೆ. ಭಾರತ ತುಂಬಾ ಬಲಿಷ್ಠವಾಗಿದೆ ಎಂದು ತಿಳಿಸಿದ್ದಾರೆ.

Story first published: Sunday, August 10, 2025, 20:40 [IST]
Other articles published on Aug 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+