For Quick Alerts
ALLOW NOTIFICATIONS  
For Daily Alerts
 

Virat vs Babar: 2023ರಲ್ಲಿ ವಿರಾಟ್‌ ಕೊಹ್ಲಿಯದ್ದೇ ರಾಜ್ಯಭಾರ, ಬಾಬರ್ ಅಜಮ್ ರನ್ ಬರ

ವಿಶ್ವ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ತಮ್ಮದೇ ಛಾಪು ಮೂಡಿಸಿರುವ ಆಟಗಾರ. ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿರುವ ವಿರಾಟ್‌, ಯುವಕರಿಗೆ ಸ್ಪೂರ್ತಿ.. ವಿರಾಟ್ ಅವರನ್ನು ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಮಾಜಿ ಕ್ರಿಕೆಟ್‌ ಆಟಗಾರರು ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ಸ್ಟಾರ್‌ ಬ್ಯಾಟರ್‌ ಬಾಬರ್ ಅಜಮ್‌ ಸಹ ಬ್ಯಾಟಿಂಗ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಟಗಾರ. ಹಲವು ಆಟಗಾರರು ಇವರೇ ಬೆಸ್ಟ್‌ ಬ್ಯಾಟರ್‌ ಎಂದು ಹೆಸರಿಸಿದ್ದಾರೆ. ಈ ಇಬ್ಬರೂ ಸ್ಟಾರ್‌ ಆಟಗಾರರನ್ನು ಹೀಗೆ ಹೋಲಿಸುವುದೇ ಸರಿಯೇ ಎಂಬ ಪ್ರಶ್ನೆಗಳು ಆಗಾಗ್ಗೆ ಉದ್ಭವಿಸುತ್ತಲೇ ಇರುತ್ತದೆ.

Virat Kohli Rule in 2023, Babar Azam Flop

ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ಅವರ ಫ್ಯಾನ್ಸ್‌ ಕಿಂಗ್ ಎಂದೇ ಕರೆಯುತ್ತಾರೆ. ಇನ್ನು ಇದೇ ರೀತಿ ಬಾಬರ್‌ ಅಜಮ್ ಫ್ಯಾನ್ಸ್ ಅವರನ್ನು ಇದೇ ನಾಮಾಂಕಿತದಿಂದ ಕರೆಯುತ್ತಾರೆ. ಒಂದು ವರ್ಷದ ಸಾಧನೆಯನ್ನು ನೋಡಿದರೆ ಯಾರು ಬೆಸ್ಟ್‌ ಅನ್ನೋದಕ್ಕೆ ಉತ್ತರ ಸಿಗುತ್ತದೆ.

ವಿರಾಟ್‌ ಕೊಹ್ಲಿ ನಿಜಕ್ಕೂ ಪ್ರತಿಭಾನ್ವಿತ ಆಟಗಾರ. ಒತ್ತಡವನ್ನು ಮೆಟ್ಟಿನಿಂತು ರನ್‌ ಗಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕ್ರಿಕೆಟ್ ಪ್ಲೇಯರ್‌. ದೊಡ್ಡ ಇವೆಂಟ್‌ ಗಳಲ್ಲಿ ಸಲೀಸಾಗಿ ರನ್ ಕಲೆ ಹಾಕುವ ಕ್ಷಮತೆ ಇವರಿಗೆ ಕರಗತವಾಗಿದೆ.

ಬಾಬರ್‌ ಅಜಮ್‌ ಸಹ ಪ್ರತಿಭಾನ್ವಿತ ಆಟಗಾರ. ಆದರೆ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ಇವರು ವಿಫಲರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌.. ಈ ಐಸಿಸಿ ಟೂರ್ನಿಯಲ್ಲಿ ಬಾಬರ್‌ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಬಾಬರ್ ಅಜಮ್ ನಾಯಕನಾಗಿ ಮಾತ್ರವಲ್ಲದೆ ಪಂದ್ಯಾವಳಿಯಲ್ಲಿ ಬ್ಯಾಟ್ಸ್‌ಮನ್ ಆಗಿಯೂ ವಿಫಲರಾಗಿದ್ದಾರೆ. ವಿಶ್ವಕಪ್‌ನ 9 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 320 ರನ್ ಗಳಿಸಿದ್ದರು.

Virat Kohli Rule in 2023, Babar Azam Flop

2023 ರ ವರ್ಷವು ವಿರಾಟ್ ಕೊಹ್ಲಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮವಾಗಿದೆ. ಅವರು ಈ ವರ್ಷ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ ಐಪಿಎಲ್ ಮೂಲಕ ಅವರು ಟಿ 20 ಪಂದ್ಯಗಳನ್ನು ಆಡಿದ್ದು, ಈ ಸ್ವರೂಪದಲ್ಲಿ ಎರಡು ಶತಕಗಳನ್ನು ಸಹ ಗಳಿಸಿದ್ದಾರೆ. ಮತ್ತೊಂದೆಡೆ, ಬಾಬರ್ ಅಜಮ್ ODI ಮತ್ತು T20 ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ಟೆಸ್ಟ್‌ ನಲ್ಲಿ ಫೇಲ್ ಆಗಿದ್ದಾರೆ. ಟೆಸ್ಟ್ ನಲ್ಲಿ ವಿರಾಟ್ ಬ್ಯಾಟ್ ಕೂಡ ಅಬ್ಬರಿಸಿದೆ. ಅಂದರೆ ವಿರಾಟ್ ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವರ್ಷ ವಿರಾಟ್ ಸಾಧನೆ

ವಿರಾಟ್ ಕೊಹ್ಲಿ 2023 ರಲ್ಲಿ ಇದುವರೆಗೆ 10 ಟೆಸ್ಟ್, 24 ಏಕದಿನ ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಈ ವರ್ಷ ಅವರು ಇನ್ನು ಕೇವಲ 2 ಟೆಸ್ಟ್‌ಗಳನ್ನು ಮಾತ್ರ ಆಡಲಿದ್ದಾರೆ. ಇದುವರೆಗೆ ಟೆಸ್ಟ್ ನಲ್ಲಿ ಕೊಹ್ಲಿ 55.7ರ ಸರಾಸರಿಯಲ್ಲಿ 2 ಶತಕ ಸೇರಿದಂತೆ 557 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಏಕದಿನದಲ್ಲಿ 72.47 ಸರಾಸರಿಯಲ್ಲಿ 1377 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 6 ಶತಕಗಳನ್ನು ಗಳಿಸಿದ್ದಾರೆ. T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಅವರು 53.25 ರ ಸರಾಸರಿಯಲ್ಲಿ 639 ರನ್ ಸಿಡಿಸಿದ್ದಾರೆ. ಇದರಲ್ಲಿ ಅವರು ತಮ್ಮ ಬ್ಯಾಟ್ನಿಂದ 2 ಶತಕ ಸೇರಿವೆ.

Virat Kohli Rule in 2023, Babar Azam Flop

2023 ರಲ್ಲಿ ಬಾಬರ್ ಠುಸ್...

ಬಾಬರ್ ಅಜಮ್‌ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ಬಾಬರ್ 2023 ರಲ್ಲಿ 5 ಟೆಸ್ಟ್ ಮತ್ತು 24 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ, ಅವರು 25.4 ರ ಸರಾಸರಿಯಲ್ಲಿ ಕೇವಲ 127 ರನ್ ಸಿಡಿಸಿದ್ದು, ಟೆಸ್ಟ್‌ ನಲ್ಲಿ ಶತಕದ ಬರವನ್ನು ಅನುಭವಿಸುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ, ಅವರು 2 ಶತಕ ಒಳಗೊಂಡಂತೆ 46.3 ರ ಸರಾಸರಿಯಲ್ಲಿ 1065 ರನ್ ಗಳಿಸಿದ್ದಾರೆ. ಇದಲ್ಲದೇ, 23 ಟಿ20ಗಳಲ್ಲಿ ಅವರು 43.48ರ ಸರಾಸರಿಯಲ್ಲಿ 913 ರನ್‌ಗಳನ್ನು ಗಳಿಸಿದ್ದಾರೆ.

Story first published: Wednesday, December 6, 2023, 16:34 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+