71ನೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್; 650 ಸಿಕ್ಸರ್ ಸಿಡಿಸಿದ ರೋಹಿತ್
ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಭಾನುವಾರ ವಡೋದರಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ 4 ವಿಕೆಟ್ ಜಯ ಸಾಧಿಸಿತು. ಈ ಮೂಲಕ ಗಿಲ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಸೊಗಸಾದ ಪ್ರದರ್ಶನ ನೀಡಿ ಹಲವು ದಾಖಲೆ ಬರೆದಿದ್ದಾರೆ. ವಿರಾಟ್ 93 ರನ್ ಬಾರಿಸುತ್ತಿದ್ದಂತೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಈ ಮೂಲಕವೂ ವಿರಾಟ್ ದೊಡ್ಡ ದಾಖಲೆ ಬರೆದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್ ಸಿಡಿಸಿತು. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಇನ್ನೂ ಒಂದು ಓವರ್ ಬಾಕಿ ಇರುವಂತೆ ಈ ಪಂದ್ಯದಲ್ಲಿ ಜಯ ಸಾಧಿಸಿತು. ಭಾರತದ ಪರ ನಾಯಕ ಶುಭಮನ್ ಗಿಲ್ (56), ಉಪನಾಯಕ ಶ್ರೇಯಸ್ ಅಯ್ಯರ್ (49) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 93 ರನ್ ಸಿಡಿಸಿ ಅಬ್ಬರಿಸಿದರು. ವಿರಾಟ್ ಜಸ್ಟ್ 7 ರನ್‌ಗಳಿಂದ ಮತ್ತೊಂದು ಶತಕ ಮಿಸ್ ಮಾಡಿಕೊಂಡರು. ಇವರ ಜವಾಬ್ದಾರಿಯುತ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಸಾಧನೆ ಮಾಡಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಆದರೆ, ಏಕದಿನ ಕ್ರಿಕೆಟ್‌ನಲ್ಲಿ 45ನೇ ಪ್ರಶಸ್ತಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಮೊದಲ ಸ್ಥಾನ. ಇವರು ಒಟ್ಟಾರೆ 76 ಬಾರಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಅಳಿಸಿ ಹಾಕಲು ವಿರಾಟ್‌ಗೆ ಇನ್ನು 5 ಪಂದ್ಯ ಶ್ರೇಷ್ಠ ಅವಶ್ಯಕತೆ ಇದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು
76 - ಸಚಿನ್ ತೆಂಡೂಲ್ಕರ್
71 - ವಿರಾಟ್ ಕೊಹ್ಲಿ
58 - ಸನತ್ ಜಯಸೂರ್ಯ
57 - ಜಾಕ್ವೆಸ್ ಕಾಲಿಸ್
50 - ಕುಮಾರ್ ಸಂಗಕ್ಕಾರ
ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲೂ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು, ಇವರು 62 ಬಾರಿ ಈ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಎರಡನೇ ಸ್ಥಾನದಲ್ಲಿದ್ದು, ಇವರು 48 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಸಿಕ್ಸರ್ ದಾಖಲೆ
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಇವರು ಭಾನುವಾರ 2 ಸಿಕ್ಸರ್ ಸಿಡಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರ ಸನಿಹದಲ್ಲೂ ಯಾವರ ಆಟಗಾರ ಇಲ್ಲ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿಯೂ ರೋಹಿತ್ ದೊಡ್ಡ ದಾಖಲೆ ಬರೆದರು. ಇವರು ಕ್ರಿಸ್ ಗೇಲ್ ದಾಖಲೆ ಅಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಓಪನರ್ ಆಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆ ಈಗ ರೋಹಿತ್ ಪಾಲಾಗಿದೆ.
ಆರಂಭಿಕರಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್
ರೋಹಿತ್ ಶರ್ಮಾ, 329 ಸಿಕ್ಸರ್
ಕ್ರಿಸ್ ಗೇಲ್, 328 ಸಿಕ್ಸರ್
ಸನತ್ ಜಯಸೂರ್ಯ, 263 ಸಿಕ್ಸರ್
ಮಾರ್ಟಿನ್ ಗಪ್ಟಿಲ್, 174 ಸಿಕ್ಸರ್
ಸಚಿನ್ ತೆಂಡೂಲ್ಕರ್, 167 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications