
ಈ ಬಾರಿಯ ಆಸ್ಟ್ರೇಲಿಯಾ ವಿರುದ್ದದ ಬಹು ನಿರೀಕ್ಷಿತ ಟೆಸ್ಟ್ ಸರಣಿಯ ಅಂತಿಮ ಮೂರು ಪಂದ್ಯಗಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿತ್ ಸರ್ಮಾಗೆ ತನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಇದು ಅತ್ಯುತ್ತಮ ಅವಕಾಶ ಎಂದು ಗ್ಲೆನ್ ಮೆಕ್‌ಗ್ರಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫಿಟ್‌ನೆಸ್ ಗಳಿಸಿಕೊಳ್ಳಲು ರೋಹಿತ್ ಶರ್ಮಾಗೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಏಕದಿನ ಹಾಗೂ ಟಿ20 ಟೂರ್ನಿಯಿಂದ ವಿಶ್ರಾಂತಿ ನೀಡಿದೆ. ಆದರೆ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.
"ರೋಹಿತ್ ಶರ್ಮಾ ಓರ್ವ ಅತ್ಯುತ್ತಮ ಗುಣಮಟ್ಟದ ಆಟಗಾರ. ಆದರೆ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಅವರು ಅತ್ಯುನ್ನತ ಮಟ್ಟದ ಆಟವನ್ನು ಇನ್ನಷ್ಟೇ ನೀಡಬೇಕಿದ ಎಂಬುದು ನನ್ನ ಅಭಿಪ್ರಾಯವಾಗಿದೆ. ಬಹುಶಃ ವಿರಾಟ್ ತವರಿಗೆ ಮರಳುವ ಅವಕಾಶದಲ್ಲಿ ಇದನ್ನು ಅವರು ಬಳಸಿಕೊಳ್ಳಲಿದ್ದಾರೆ ಎನಿಸುತ್ತದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್.
ಸೀಮಿತ ಓವರ್‌ಗಳಲ್ಲಿ ಆರಂಭಿನಾಗಿ ರೋಹಿತ್ ಶರ್ಮಾ ಯಶಸ್ಸು ಗಳಿಸಿದ್ದರೂ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಆದರೆ ಅಂತಾ ಯಶಸ್ಸನ್ನು ಶರ್ಮಾ ಪಡೆದಿರಲಿಲ್ಲ. ಆದರೆ ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು ಟೆಸ್ಟ್‌ನಲ್ಲೂ ಯಶಸ್ಸು ಪಡೆಯಲು ಆರಂಭಿಸಿದ್ದರು. ಹೀಗಾಗಿ ಈ ಬಾರಿಯ ಆಸಿಸ್ ವಿರುದ್ದದ ಸರಣಿಯಲ್ಲೂ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ.
ವಿರಾಟ್ ಕೊಹ್ಲಿ ಸರಣಿಯಿಮದ ಹೊರಹೋದರು ಭಾರತ ತಂಡ ಗುಣಮಟ್ಟದ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ರಹಾನೆ, ಪೂಜಾರ, ರಾಹುಲ್ ಅವರಂತಾ ಅತ್ಯುತ್ತಮ ಆಟಗಾರರ ಲೈನ್‌ಅಪ್ ಇದೆ. ವಿರಾಟ್ ಕೊಹ್ಲಿ ತಂಡದಿಂದ ಹೊರಹೋದನಂತರ ಇನ್ನೊಬ್ಬ ಆಟಗಾರ ತನ್ನ ಕೈಮೇಲೆತ್ತಲು ಅವಕಾಶ ಪಡೆದುಕೊಂಡು ಟೂರ್ನಿಯಲ್ಲಿ ತನ್ನ ಛಾಪು ಮೂಡಿಸಲಿದ್ದಾರೆ. ಅದು ರೋಹಿತ್ ಶರ್ಮಾ ಆಗಿರಬಹದು ಎಂಬುದು ನನ್ನ ಭಾವನೆಯಾಗಿದೆ ಎಂದಿದ್ದಾರೆ ಗ್ಲೆನ್ ಮೆಕ್‌ಗ್ರಾಥ್.