ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ಗೆ ಕಾರಣ ಹೇಳಿದ ಕೋಚ್ ಸೈಮನ್ ಕ್ಯಾಟಿಚ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಸೈಮನ್ ಕ್ಯಾಟಿಚ್ ತಮಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಯಕ ವಿರಾಟ್ ಕೊಹ್ಲಿಯನ್ನು ಸೈಮನ್ ಕ್ಯಾಟಿಚ್ ಸಮರ್ಥೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್‌ಅನ್ನು ಕೇವಲ ಸಂಖ್ಯೆಗಳಿಂದ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ತಂಡದ ಪರವಾಗಿ ಎರಡನೇ ಅತಿ ಎಹಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ ಕೊಹ್ಲಿ. ಮೊದಲ ಸ್ಥಾನದಲ್ಲಿರುವ ಯುವ ಆಟಗಾರ ದೇವದತ್ ಪಡಿಕ್ಕಲ್‌ಗಿಂತ ಕೊಹ್ಲಿ ಕೇವಲ 6 ರನ್‌ಗಳಷ್ಟು ಹಿಂದಿದ್ದಾರೆ. 15 ಪಂದ್ಯಗಳನ್ನಾಡಿರುವ ವಿರಾಟ್ ಈ ಬಾರಿ 466 ರನ್ ಗಳಿಸಿದ್ದಾರೆ.
ಆದರೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್‌ನ ಸ್ಟ್ರೈಕ್‌ರೇಟ್ ತಂಡಕ್ಕೆ ದುಬಾರಿಯಾಯಿತು ಎಂಬ ವಾದಗಳು ಕೇಳಿಬರುತ್ತಿದೆ. 121.35ರ ಸ್ಟ್ರೈಕ್‌ರೇಟ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿರುವುದು ಟೀಕೆಗೆ ಕಾರಣವಾಗಿದೆ. ಈ ನಿಧಾನಗತಿಯ ಬ್ಯಾಟಿಂಗ್‌ನ ಕಾರಣದಿಂದಾಗಿಯೇ ಕೆಲ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಪೇರಸಲು ಸಾಧ್ಯವಾಗದೆ ತಂಡ ಶರಣಾಗಿತ್ತು. ಆದರೆ ಇದಕ್ಕೆ ಕಾರಣವನ್ನು ನೀಡಿದ್ದಾರೆ ಕೋಚ್ ಸೈಮನ್ ಕ್ಯಾಟಿಚ್.
ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಕೆಲ ಪಂದ್ಯಗಳಲ್ಲಿ ನಿಧಾನಗತಿಯ ಬ್ಯಾಟಿಂಗ್‌ನ ಮೊರೆ ಹೋಗಲು ತಂಡದ ಸ್ಥಿತಿ ಎಂದು ಕ್ಯಾಟಿಚ್ ಹೇಳಿದ್ದಾರೆ. ತಂಡದಲ್ಲಿ ವಿಕೆಟ್‌ಗಳು ಉರುಳುತ್ತಿದ್ದಾಗ ವಿಕೆಟ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಹೀಗಾಯಿತು ಎಂದಿದ್ದಾರೆ ಕ್ಯಾಟಿಚ್.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 90 ರನ್ ಗಳಿಸಿದಾಗ ಕೊಹ್ಲಿ ಪ್ರದರ್ಶನ ಶ್ರೇಷ್ಠವಾಗಿಯೇ ಇತ್ತು. ಆದರೆ ಪವರ್‌ಪ್ಲೇಬಳಿಕ ಕಣಕ್ಕಿಳಿದು ಇನ್ನಿಂಗ್ಸ್ ಆರಂಭಿಸುವುದು ಸುಲಭವಾಗಿರಲಿಲ್ಲ. ಅದರಲ್ಲೂ ದ್ವಿತಿಯಾರ್ಧದಲ್ಲಿ ಯುಎಇನಲ್ಲಿನ ಪಿಚ್ ನಿಧಾನವಾದ ಬಳಿಕ ಬ್ಯಾಟಿಂಗ್ ನಡೆಸುವುದು ಕಠಿಣವಾಗಿತ್ತು ಎಂದಿದ್ದಾರೆ ಸೈಮನ್ ಕ್ಯಾಟಿಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications