ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕ್ರಿಕೆಟ್ ಬದುಕಿನ ಕುತೂಹಲಕಾರಿ ಸಂಗತಿಗಳು!

ನವದೆಹಲಿ, ನವೆಂಬರ್ 5: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆವೆಂಬರ್ 5ರಂದು ತನ್ನ 31ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟಿಗನಿಗೆ ವಿಶ್ವದಗಲದ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಮಾಜಿ ನಾಯಕ ಕಪಿಲ್ ದೇವ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ವಿಶ್ವನಂ.1 ಆಟಗಾರನಿಗೆ ಶುಭ ಹಾರೈಸಿದ್ದಾರೆ.
ಅಂದ್ಹಾಗೆ ವಿರಾಟ್ ಕೊಹ್ಲಿಯ ಹುಟ್ಟು ಹಬ್ಬಕ್ಕೂ, ವೃತ್ತಿ ಬದುಕಿಗೂ ಸಂಬಂಧಿಸಿ ಕುತೂಹಲಕಾರಿ ಸಂಗತಿಗಳಿವೆ. ಅವುಗಳನ್ನು ಕೆಲವನ್ನು ಇಲ್ಲಿ ನಿಮ್ಮ ಮುಂದೆ ತಂದಿದ್ದೇವೆ.

3ರಲ್ಲೂ ಟಾಪ್ ಟೆನ್
ಐಸಿಸಿ ಪುರುಷರ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ದ್ವಿತೀಯ, ಏಕದಿನದಲ್ಲಿ ಮೊದಲ, ಟಿ20ಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಶ್ರೇಯಾಂಕ ಹೊಂದಿರುವ ನೆಚ್ಚಿನ ಆಟಗಾರ ಕೊಹ್ಲಿ. ಟೆಸ್ಟ್ ನಲ್ಲಿ 26, ಏಕದಿನದಲ್ಲಿ 43 ಶತಕಗಳ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.

ಕ್ರಿಕೆಟ್‌ಗೂ ಬರ್ತ್‌ಡೇಗೂ ಲಿಂಕ್
ನವೆಂಬರ್ 5ಕ್ಕೆ 31ನೇ ವರ್ಷಕ್ಕೆ ಕಾಲಿರಿಸುತ್ತಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 31 ರನ್ನಿಗೆ ಎಷ್ಟು ಸಾರಿ ಔಟ್ ಆಗಿದ್ದಾರೆ ಗೊತ್ತಾ? ಇಲ್ಲೀವರೆಗೆ ಒಟ್ಟಿಗೆ 6 ಬಾರಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 31 ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ ಮತ್ತು ಸೊನ್ನೆಗೆ 12 ಬಾರಿ, 2 ರನ್ನಿಗೆ 8 ಬಾರಿ ಔಟಾದ ದಾಖಲೆ ಹೊಂದಿದ್ದಾರೆ.

ಏರುಗತಿಯ ಟೆಸ್ಟ್ ಎವರೇಜ್
ಕೊಹ್ಲಿ 23 ವರ್ಷದವರಾಗಿದ್ದಾಗಿನಿಂದ ಹಿಡಿದು ಇಲ್ಲೀವರೆಗಿನ ಅವರ ಟೆಸ್ಟ್ ಕ್ರಿಕೆಟ್‌ನ ಬ್ಯಾಟಿಂಗ್ ಸರಾಸರಿ ಗಮನಿಸಿದರೆ ಏರುಗತಿಯಲ್ಲೇ ಸಾಗಿದೆ. 23 ವರ್ಷದಲ್ಲಿ 27.28, 24ರಲ್ಲಿ 41.35, 25ರಲ್ಲಿ 41.96, 26ರಲ್ಲಿ 39.46, 27ರಲ್ಲಿ 45.06, 28ರಲ್ಲಿ 45.56, 29ರಲ್ಲಿ 49.55, 30ರಲ್ಲಿ 54.57, 31ರಲ್ಲಿ 54.77 ಬ್ಯಾಟಿಂಗ್ ಸರಾಸರಿ ಕೊಹ್ಲಿ ತೋರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ ಮೇಲೇರುತ್ತಲೇಯಿದೆ.

ರನ್ ಅಂಕಿ-ಅಂಶಗಳು
ನವೆಂಬರ್ 5, 1988ರಲ್ಲಿ ದೆಹಲಿಯಲ್ಲಿ ಜನಿಸಿದ ಕೊಹ್ಲಿ ಇಲ್ಲೀವರೆಗೆ 139 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 7066 ರನ್, 230 ಏಕದಿನ ಇನ್ನಿಂಗ್ಸ್‌ಗಳಲ್ಲಿ 11520 ರನ್, 67 ಟಿ20ಐ ಇನ್ನಿಂಗ್ಸ್‌ಗಳಲ್ಲಿ 2450 ರನ್, 169 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 5412 ರನ್ ದಾಖಲೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications