ಟ್ರೋಲ್ ಹೈಕ್ಳಿಗೆ ಆಹಾರವಾಯ್ತು ಕೊಹ್ಲಿಯ ಈ ಫೋಟೋ!
ಬೆಂಗಳೂರು, ಜೂನ್ 24 : ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ತೊರೆಯಲು ವಿರಾಟ್ ಕೊಹ್ಲಿ ಕಾರಣ ಎನ್ನುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಳಿ ಬಿಡಿಸಿದ್ದರು..
ಅಷ್ಟೇ ಅಲ್ಲದೆ ಅನಿಲ್ ಕುಂಬ್ಳೆ ನಡುವೆ ಮುನಿಸಿಕೊಂಡಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಟ್ರೋಲ್ ಪಂಟರ ಆಹಾರವಾಗಿದ್ದಾರೆ. ಕೋಚ್ ನಿಂದ ಕುಂಬ್ಳೆ ಅವರನ್ನು ಕೆಳಗಿಳಿಯಲು ಕಾರಣರಾದ ವಿರಾಟ್ ಗೆ ಟ್ರೋಲ್ ಮೂಲಕ ಸಖತ್ ಆಗಿಯೇ ತಿವಿದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧದ ಪೈನಲ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ ನಲ್ಲಿ ತೆಗೆದ ಕೊಹ್ಲಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಫೋಟೋ ಟ್ರೋಲ್ ಹೈಕ್ಳಿಗೆ ಸಿಕ್ಕು ವಿಲವಿಲ ಒದ್ದಾಡುತ್ತಿದೆ.
ಈ ಫೋಟೋಗೆ ನಾನಾ ರೀತಿ ಟ್ರೋಲ್ ಶೀರ್ಷಕೆಗಳನ್ನು ನೀಡಿ ಟ್ವಿಟ್ಟರ್ ನಲ್ಲಿ ಹರಿಬಿಟ್ಟಿದ್ದಾರೆ. ಹಾಗಿದ್ದರೆ ಕೊಹ್ಲಿ ಆ ಫೋಟೋ ಯಾವುದು? ಅದಕ್ಕೆ ಟ್ವೀಟ್ ಪ್ರತಿಕ್ರಿಯೆಗಳು ಮುಂದೆ ಓದಿ...

ಕುಂಬ್ಳೆ ಬಗ್ಗೆ
ಕುಂಬ್ಳೆ ಅವರನ್ನು ತಾರೀಫ್ ಮಾಡುವರಾರು...! BKL(ಬಿ ಕೇರ್ ಫುಲ್)

ಶಮಿ ಮತ್ತು ಕಾರ್ತಿಕ್ ಬಗ್ಗೆ
ಶಮಿ ಮತ್ತು ಕಾರ್ತಿಕ್ ನೀವು ಒಂದು ವರ್ಷ ಒಳಗೆ ಕೂಡಬೇಕು...

ಕುಂಬ್ಳೆ
ಇಣುಕಿ ನೋಡಿದಕ್ಕೆ.. ಕುಂಬ್ಳೆ ಹೋದ್ರಾ..! ಎನ್ನುವ ಶೀರ್ಷಿಕೆ ನೀಡಿದ್ದಾರೆ.

ಜಡೇಜಾ ಮತ್ತು ಪಾಂಡ್ಯಾ
ಜಡೇಜಾ ಹೊರಗೆ ಬಾ..ಪಾಂಡ್ಯಾ ಏನು ಅನ್ನೊಲ್ಲ ಪಕ್ಕಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications