ಇಂಗ್ಲೆಂಡ್ ಎದುರು ಕುಸಿದಿದ್ದ ಭಾರತಕ್ಕೆ ಕೊಹ್ಲಿ ಭರ್ಜರಿ ಶತಕದ ಆಸರೆ

ಬರ್ಮಿಂಗ್‌ಹ್ಯಾಮ್, ಆಗಸ್ಟ್ 02: ಒಂದು ಕಡೆ ಭಾರತದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಡ್ ಬೌಲಿಂಗ್ ಎದುರಿಸಲಾಗದೆ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿದರೆ ಮತ್ತೊಂದೆಡೆ ಗಟ್ಟಿಯಾಗಿ ಸ್ಕ್ರೀಜ್‌ಗೆ ಆತು ನಿಂತಿದ್ದ ಕೊಹ್ಲಿ ಭರ್ಜರಿ ಶತಕ ಭಾರಿಸಿ ಕುಸಿತದ ಹಾದಿಯಲ್ಲಿದ್ದ ಭಾರತವನ್ನು ಮೇಲೆತ್ತಿದರು.
ಅಕ್ಷರಶಃ ಏಕಾಂಗಿ ಹೋರಾಟ ಮಾಡಿದ ಕೊಹ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ 149 ರನ್ ಗಳಿಸಿ ಔಟಾದರು. ತಾವೇಕೆ ವಿಶ್ವದ ನಂ.1 ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತು ಮಾಡಲೆಂದೇ ಕೊಹ್ಲಿ ಇಂದು ಬ್ಯಾಟಿಂಗ್‌ಗೆ ಇಳಿದಂತಿತ್ತು. ಆರಂಭದಲ್ಲಿ ತಾಳ್ಮೆಯಿಂದ ಆಡಿದ ಅವರು ಜೊತೆಗಾರ ಆಟಗಾರರಿಗೆ ಸಲಹೆಗಳನ್ನು ನೀಡುತ್ತಾ ಇನ್ನಿಂಗ್ಸ್ ಬೆಳೆಯಲು ನೆರವಾದರು.
ಕೇವಲ 100 ರನ್‌ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಭಾರತದ ಬ್ಯಾಟಿಂಗ್‌ನ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲಿಗೆ ವರ್ಗಾಯಿಸಿಕೊಂಡ ಕೊಹ್ಲಿ ನಿಧಾನಕ್ಕೆ ಇನ್ನಿಂಗ್ಸ್ ಕಟ್ಟಿದರು. ಬ್ಯಾಟ್ ಬೀಸಲು ತಡಕಾಡುವ ಬೌಲರ್‌ಗಳನ್ನು ಮತ್ತೊಂದು ಬದಿ ಸ್ಕ್ರೀಜಿನಲ್ಲಿ ನಿಲ್ಲಿಸಿಕೊಂಡು ಆಂಗ್ಲ ಬೌಲರ್‌ಗಳನ್ನು ಕಾಡಿದರು ಕೊಹ್ಲಿ.

ಅಂತಿಮದಲ್ಲಿ ಆಕ್ರಮಣ ಆಟ
9 ವಿಕೆಟ್ ಆದ ನಂತರ ಆಕ್ರಮಣಕಾರಿ ಆಟಕ್ಕೆ ಇಳಿದ ಕೊಹ್ಲಿ ಓವರ್‌ನ ಮೊದಲ ನಾಲ್ಕೈದು ಚೆಂಡುಗಳಲ್ಲಿ ಬೌಂಡರಿ ಹೊಡೆಯಲು ಬಳಸಿ ಕೊನೆಯ ಎಸೆತದಲ್ಲಿ ಚಾಕಚಕ್ಯತೆಯಿಂದ ಸಿಂಗಲ್ ಕಳಿಸಿ ಸ್ಟ್ರೈಕ್ ಅವರ ಬಳಿಯೇ ಉಳಿಸಿಕೊಂಡು ಚಾಕಚಕ್ಯತೆ ಮೆರೆದರು.

ಕೊಹ್ಲಿ ಆಟಕ್ಕೆ ಗೌರವ
ಭಾರತ ತಂಡದ ಮೊತ್ತ 274 ರನ್ ಆಗಿದ್ದಾಗ ಅದಿಲ್ ರಶೀದ್ ಅವರ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಭಾರತದ ಮೊದಲ ಇನ್ನಿಂಗ್ಸ್‌ಗೆ ತೆರೆ ಎಳೆದರು. ಕೊಹ್ಲಿ ಪೆವಿಲಿಯನ್‌ನತ್ತ ಹೊರಟಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದು ಅವರ ಇಂದಿನ ಆಟಕ್ಕೆ ಸಿಕ್ಕ ಗೌರವ.

ಭಾರತ ಬ್ಯಾಟ್ಸ್‌ಮನ್‌ಗಳ ಪರದಾಟ
ಭಾರತದ ಪರ ಬಹುತೇಕ ಬ್ಯಾಟ್ಸ್‌ಮನ್‌ಗಳು ಇಂದು ಉತ್ತಮ ಪ್ರದರ್ಶನ ತೋರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಗಳಿಸಿದ 26 ರನ್ ಭಾರತದ ಪರ ಎರಡನೇ ಅತ್ಯಧಿಕ ಸ್ಕೋರ್!. ಹಾರ್ದಿಕ್ ಪಾಂಡ್ಯಾ 22 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರಷ್ಟೆ. ಕೆ.ಎಲ್.ರಾಹುಲ್ 4, ದಿನೇಶ್ ಕಾರ್ತಿಕ್ 0, ರಹಾನೆ 15, ಮುರಳಿ ವಿಜಯ್ 20 ರನ್‌ಗಳನ್ನು ಗಳಿಸಿದರು.

ಕೊಹ್ಲಿಯನ್ನು ಕಟ್ಟಿಹಾಕಲು ವಿಫಲ
ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ಕೊಹ್ಲಿಯನ್ನು ನಿಯಂತ್ರಿಸುವಲ್ಲಿ ಎಡವಿತು. ಕೊಹ್ಲಿಗೆ ನೀಡಿದ ಎರಡು ಜೀವದಾನ ಸಹ ಅವರಿಗೆ ಮುಳುವಾಯಿತು. ಇಂಗ್ಲೆಂಡ್ ಬೌಲರ್ ಸ್ಯಾಮ್ ಕುರ್ರನ್ 4 ವಿಕೆಟ್ ಗಳಿಸಿದರೆ, ಅದಿಲ್ ರಶೀದ್ 2, ಬೆ ನ್ ಸ್ಟ್ರೋಕ್ಸ್ 2, ಆಂಡರ್‌ಸನ್ 2 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 287 ರನ್ ಗಳಿಸಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್ ಗಳಿಸಿದ್ದು ಇಂಗ್ಲೆಂಡ್ 13 ರ್‌ಗಳ ಅಲ್ಪ ಮುನ್ನಡೆ ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications