KL Rahul: ಸ್ಟಾರ್ ಆಟಗಾರರ ಜೆರ್ಸಿ, ಗ್ಲೌಸ್ ಹರಾಜು ನಡೆಸಿದ ಕೆಎಲ್ ರಾಹುಲ್; ಬಿಡ್‌ನಲ್ಲಿ ವಿರಾಟ್ ಕಮಾಲ್
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಈಗ ಸುದ್ದಯಲ್ಲಿದ್ದಾರೆ. ಕಳೆದೆರಡು ದಿನಗಳ ಹಿಂದೆ ಅವರು ನಿವೃತ್ತಿ ಘೋಷಿಸಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದನ್ನು ಕಿಡಿಗೇಡಿಗಳು ತಿರುಚಿದ್ದರು. ಹೀಗಾಗಿ ಗೊಂದಲ ಸೃಷ್ಟಿಯಾಗಿತ್ತು. ಆದರೆ ಈಗ ರಾಹುಲ್ ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ.
ಟೀಮ್ ಇಂಡಿಯಾದ ಹಿರಿಯ ಆಟಗಾರ ಕೆಎಲ್ ರಾಹುಲ್ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗೆ 'ಕ್ರಿಕೆಟ್ ಫಾರ್ ಚಾರಿಟಿ' ಹರಾಜು ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಾಹುಲ್ ದಂಪತಿ ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ವಿಪ್ಲ ಸಂಸ್ಥೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಹರಾಜಿಗಾಗಿ ವಿಶ್ವದಲ್ಲೇಡೆ ಸ್ಟಾರ್ ಆಟಗಾರರು ತಮ್ಮ ವಸ್ತುಗಳನ್ನು ಕೊಡುಗೆ ನೀಡಿದ್ದಾರೆ.

ಹರಾಜು ಕಾರ್ಯಕ್ರಮ ನಡೆದಿದ್ದು ಏಕೆ?
ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಹಮ್ಮಿಕೊಂಡಿದ್ದ ಹರಾಜು ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರ ಜೆರ್ಸಿ ಸಹ ಇತ್ತು. ಈ ಜೆರ್ಸಿ 40 ಲಕ್ಷ ರೂ.ಗೆ ಅತಿ ಹೆಚ್ಚು ಮಾರಾಟವಾಗಿದೆ. ಈ ಹರಾಜಿನಲ್ಲಿ ಎಷ್ಟೆಲ್ಲಾ ಹಣವನ್ನು ಸಂಗ್ರಹಿಸಲಾಗಿದೆ ಎಂದು ಕೆ.ಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್‌ದಲ್ಲಿ ಹಾಕಿಕೊಂಡಿದ್ದಾರೆ.
ರಾಹುಲ್ ದಂಪತಿ ನಡೆಸಿದ್ದ ಹರಾಜಿನಲ್ಲಿ ಮಾರಾಟವಾದ ವಸ್ತುಗಳಿಂದ ಸುಮಾರು 1.9 ಕೋಟಿಗಳಷ್ಟು ಹಣವನ್ನು ಒಟ್ಟು ಮಾಡಲಾಗಿದೆ. ಈ ಹರಾಜು ಯಶಸ್ವಿ ಆಗಿದ್ದಕ್ಕೆ ರಾಹುಲ್ ಧನ್ಯವಾದ ತಿಳಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣವನ್ನು ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುವುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಿಪ್ಲ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನವನ್ನು ಜನರು ಶ್ಲಾಘಿಸಿದ್ದಾರೆ.
ಯಾರು ಯಾರು ಬೆಂಬಲ?
ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸಲು ಆಯೋಜಿಸಲಾಗಿದ್ದ ಹರಾಜಿನಲ್ಲಿ ವಿಶ್ವದಲ್ಲೇಡೆ ಸ್ಟಾರ್ ಆಟಗಾರರು ತಮ್ಮ ಉಪಕರಣಗಳನ್ನು ನೀಡಿ, ರಾಹುಲ್ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದಾರೆ. ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋಸ್ ಬಟ್ಲರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರ ವಸ್ತುಗಳು ಸಹ ಬಿಡ್‌ನಲ್ಲಿ ಇಡಲಾಗಿತ್ತು. ಇನ್ನು ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಸಂಜು ಸ್ಯಾಮ್ಸನ್ ಸಹ ಬೆಂಬಲ ನೀಡಿದ್ದಾರೆ.
ಯಾವ ವಸ್ತುವಿಗೆ ಎಷ್ಟು ಬೆಲೆ?
ರಾಹುಲ್ ದಂಪತಿ ಆಯೋಜಿಸಿದ್ದ ಹರಾಜು ಕಾರ್ಯಕ್ರಮದಲ್ಲಿ, ವಿರಾಟ್ ಕೊಹ್ಲಿ ಅವರ ಜೆರ್ಸಿಗೆ ಅತಿ ಹೆಚ್ಚು ಬಿಡ್ ಆಗಿತ್ತು. ವಿರಾಟ್ ಕೊಹ್ಲಿ ಅವರ ಜೆರ್ಸಿಯನ್ನು 40 ಲಕ್ಷ ರೂ.ಗೆ ಖರೀದಿಸಲಾಗಿದೆ. ಅವರ ಕೈಗವಸು 28 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ. ಇದಲ್ಲದೇ ರೋಹಿತ್ ಶರ್ಮಾ ಬ್ಯಾಟ್ 24 ಲಕ್ಷ, ಮಹೇಂದ್ರ ಸಿಂಗ್ ಧೋನಿ ಬ್ಯಾಟ್ 13 ಲಕ್ಷ, ರಾಹುಲ್ ದ್ರಾವಿಡ್ ಬ್ಯಾಟ್ 11 ಲಕ್ಷ ಮತ್ತು ಕೆಎಲ್ ರಾಹುಲ್ ಅವರ ಜೆರ್ಸಿ 11 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications