ಬೆಳ್ಳಿ ತೆರೆಯ ಸ್ಟಾರ್‌ಗಿಂತಲೂ ಜನಪ್ರೀಯ ವಿರಾಟ್; ಐಶಾರಾಮಿ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?
ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದ ರಾಜನಂತೆ ಮೆರೆದ ಆಟಗಾರ. ಇವರ ಫಿಟ್ನೆಸ್ ಹಾಗೂ ಇವರ ಸ್ಟೈಲ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ವಿರಾಟ್ ಮೈದಾನದಲ್ಲಿ ಹೇಗೆ ಕಾಣುತ್ತಾರೋ ಅದಕ್ಕಿಂತ ಹೆಚ್ಚು ಆಕರ್ಷಕವಾಗಿ ಅವರು ಗ್ರೌಂಡ್ ಹೊರಗೆ ಕಾಣುತ್ತಾರೆ. ಸ್ಟೈಲ್ ಕಿಂಗ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿರಾಟ್, ಒಂದೇ ರಾತ್ರಿಯಲ್ಲಿ ಇಂತಹ ಸಾಮ್ರಾಜ್ಯಕ್ಕೆ ಅಧಿಪತಿ ಆದವರಲ್ಲ. ಇದಕ್ಕೆ ಸಾಕಷ್ಟು ಬೆವರು ಹರಿಸಿದ್ದಾರೆ. ಹಾಗಿದ್ದರೆ ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿ ಎಷ್ಟು? ಇವರ ಐಶಾರಾಮಿ ಜೀವನ ಶೈಲಿ ಹೇಗಿದೆ ಎಂಬುದಕ್ಕೆ ಇಲ್ಲಿದೆ ವರದಿ.
ಮೈದಾನಕ್ಕೆ ಇಳಯುವಾಗ ಬೌಂಡರಿ ಲೈನ್‌ಗೆ ಒಮ್ಮೆ ನಮಸ್ಕರಿಸಿ, ನಾಲ್ಕು ಹೆಜ್ಜೆ ಓಡಿ, ಎರಡು ಕೈಗಳಿಂದ ಬ್ಯಾಟ್ ತಿರುಗಿಸುತ್ತಾ ವಿರಾಟ್ 22 ಯಾರ್ಡ್ ಕಡೆ ಹೆಜ್ಜೆ ಹಾಕುತ್ತಿದ್ದರೆ, ಅಭಿಮಾನಿಗಳ ಉತ್ಸಾಹ. ಎದುರಾಳಿಗಳಿಗೆ ತಲೆ ನೋವು. ಬ್ಯಾಟಿಂಗ್‌ನಲ್ಲಿ ತನ್ನದೇ ಗುರುತು ಹೊಂದಿರುವ ಕೆಲವೇ ಕೆಲವು ಆಟಗಾರರಲ್ಲಿ ವಿರಾಟ್ ಕೊಹ್ಲಿ ಸಹ ಒಬ್ಬರು. ಇವರ ಬತ್ತಳಿಕೆಯಲ್ಲಿ ಕ್ರಿಕೆಟ್‌ನ ಅದೆಷ್ಟೋ ಶಾಟ್‌ಗಳು ಸ್ಥಾನ ಪಡೆದಿವೆ. ಆದರೆ ವಿರಾಟ್ ಯಾವ ಶಾಟ್‌ನ್ನು ಯಾವಾಗ ಬಳಸ ಬೇಕು ಎಂಬ ಜ್ಞಾನವನ್ನು ಹೊಂದಿದ್ದ ಪ್ಲೇಯರ್. ಈ ಸ್ಟಾರ್ ಪ್ಲೇಯರ್ ಈಗ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಹಾಲಿ ವಿಶ್ವ ಕ್ರಿಕೆಟ್‌ನ ರಾಯಭಾರಿಯಾಗಿ ಕಂಗೊಳ್ಳಿಸುತ್ತಿದ್ದ ವಿರಾಟ್, ಸಾಮ್ರಾಟ ನಂತೆ ಮೆರೆದ ಆಟಗಾರ.

ವಿರಾಟ್ ಕೊಹ್ಲಿ ಮೈದಾನದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೋ, ಅದಕ್ಕಿಂತ ಅಂದವಾಗಿ ಹೊರಗಡೆಯೂ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಇವರ ಫಿಟ್ನೆಸ್. ಇವರು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಫಿಟ್ನೆಸ್‌ನಿಂದಲೇ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಆಟಗಾರ. ಯಾವುದೇ ಡ್ರೆಸ್‌ನ್ನು ಇವರು ಹಾಕಿಕೊಂಡ್ರೂ ಸಹ, ಆ ಬಟ್ಟೆಯ ಅಂದಕ್ಕೆ ದೃಷ್ಟಿಯ ಬೊಟ್ಟು ಇಡುವಂತೆ ಇದ್ದ ವಿರಾಟ್ ನಗು ಎಲ್ಲರಿಗೂ ಪ್ರೀತಿ.
ಎರಡು ಮನೆ
ವಿರಾಟ್ ಕೊಹ್ಲಿ ಐಶಾರಾಮಿ ಜೀವನ ಶೈಲಿಯನ್ನು ಹೊಂದಿರುವ ಆಟಗಾರ. ಇವರು ಮುಂಬೈನಲ್ಲಿ ಸಮುದ್ರಕ್ಕೆ ಮುಖವಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ಮನೆಯನ್ನು ಖರೀದಿಸಿದ್ದಾರೆ. ಈ ಮನೆಗೆ ಸುಮಾರು 35 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇವರು ಗುರ್‌ಗ್ರಾಮದಲ್ಲಿ 10 ಸಾವಿರ ಚದರಾಡಿ ವಿಸ್ತೀರ್ಣದ ಬೃಹತ್ ಬಂಗಲೆಯನ್ನು ಹೊಂದಿದ್ದಾರೆ. ಈ ಬಂಗಲೆ ಒಟ್ಟು 80 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ಇವರ ಮನೆಯ ಪಾರ್ಕಿಂಗ್‌ನಲ್ಲಿ ದುಬಾರಿ ಕಾರ್ ಸಂಗ್ರಹವಿದೆ.
ಕ್ರಿಕೆಟ್‌ನಿಂದ ಬರುವ ಗಳಿಕೆ ಎಷ್ಟು?
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ. ಬಿಸಿಸಿಐನ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಇವರಿಗೆ ಎ ಪ್ಲಸ್ ಗ್ರೇಡ್ ನೀಡಲಾಗಿದೆ. ಇದರ ಅಡಿಯಲ್ಲಿ ವಿರಾಟ್‌ಗೆ ವಾರ್ಷಿಕ 7 ಕೋಟಿ ರೂ. ನೀಡಲಾಗುತ್ತದೆ. ಇನ್ನು ಒಂದು ಟೆಸ್ಟ್‌ಗೆ 15 ಲಕ್ಷ, ಒಂದು ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಇವರು ಸತತ 18 ಆವೃತ್ತಿಗಳನ್ನು ಆಡಿದ್ದಾರೆ. 18 ಆವೃತ್ತಿಗಳಲ್ಲಿ ಇವರ ನಿವ್ವಳ ಮೌಲ್ಯ ದಿನೇ ದಿನೇ ಹೆಚ್ಚಾಗಿದೆ. ಈ ಋತುವಿನಲ್ಲಿ ಆರ್‌ಸಿಬಿ ಇವರಿಗೆ 21 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
ಜಾಹಿರಾತುದಾರರ ಹಾಟ್ ಕೇಕ್
ವಿರಾಟ್ ಕೊಹ್ಲಿ ಅವರನ್ನು ಹಾಕಿಕೊಂಡು ಜಾಹೀರಾತು ಮಾಡಲು ಕಂಪನಿಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಈಗಾಗಲೇ ವಿರಾಟ್ 30ಕ್ಕೂ ಹೆಚ್ಚು ಕಂಪನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಬಳಿಸುವ ಬ್ಯಾಟ್ ಮೇಲೆ ಪ್ರಾಯೋಜಕತ್ವಕ್ಕಾಗಿ 100 ಕೋಟಿ ರೂ. ಎಂಆರ್‌ಎಫ್ ನೀಡಿದೆ. ಇನ್ನು ಪೂಮಾದಿಂದ 110 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಉಳಿದಂತೆ ಹಲವು ಜಾಹೀರಾತುಗಳಿಗೆ ಇವರು ಪ್ರಚಾರ ರಾಯಭಾರಿ. ಇದರಿಂದಲೂ ಇವರು ದೊಡ್ಡ ಮತ್ತವನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ.
ಉದ್ಯಮಿಯಾಗಿ
ಒನ್ 8 ಎಂಬ ಬ್ರ್ಯಾಂಡ್‌ನ ಆರಂಭಿಸಿದರು. ಒನ್ 8 ಕಮ್ಯುನ್ ಎಂಬ ಹೆಸರಿನಲ್ಲಿ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಹೊಟೇಲ್ ತೆಗೆದಿದ್ದಾರೆ. ಇನ್ನು ಕೊಹ್ಲಿ ನ್ಯೂವಾ ಎಂಬ ಹೆಸರಿನ ಡೈನಿಂಗ್ ರೆಸ್ಟೋರೆಂಟ್‌ನ್ನು ಸಹ ನವದೆಹಲಿಯಲ್ಲಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications