For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿರ ಒನ್‌8 ಕಮ್ಯೂನ್‌ ಈ ನಗರದಲ್ಲಿ ಆರಂಭ? ಹೇಗಿದೆ ಬೆಲೆ?

ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಅವರ ಖ್ಯಾತ ರೆಸ್ಟೋರೆಂಟ್‌ ಒನ್‌ ಎಟ್ ಕಮ್ಯೂನ್‌ ಹಲವು ಸಿಟಿಗಳಲ್ಲಿ ಸದ್ದು ಮಾಡಿದೆ. ಮುಂಬೈ, ದೆಹಲಿ ಅಷ್ಟೇ ಏಕೆ ಬೆಂಗಳೂರಿನಲ್ಲೂ ಈ ರೆಸ್ಟೋರೆಂಟ್‌ ತನ್ನ ಕಂಪನ್ನು ಪಸರಿಸಿದೆ. ಈಗ ಈ ರೆಸ್ಟೋರೆಂಟ್‌ನ ಮತ್ತೊಂದು ಶಾಖೆ ದೇಶದ ಪ್ರಸಿದ್ಧ ನಗರದಲ್ಲಿ ಓಪನ್ ಆಗುತ್ತಿದೆ. ಯಾವುದು ಆ ಪ್ರದೇಶ, ಎಲ್ಲಿದೆ ಆ ರೆಸ್ಟೋರೆಂಟ್‌ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವಿರಾಟ್‌ ಕೊಹ್ಲಿ ಅವರ ಅಭಿಮಾನಿಗಳು ಫುಲ್ ಖುಷ್‌ ಆಗುವ ಸುದ್ದಿ ಎಂದು ಬಂದಿದೆ. ವಿರಾಟ್‌ ಅವರ ಒನ್‌ ಎಟ್‌ ಕಮ್ಯೂನ್‌ ರೆಸ್ಟೋರೆಂಟ್‌ ನೋಯ್ಡಾದ ಸೆಕ್ಟರ್‌ 94ರಲ್ಲಿ ತಲೆ ಎತ್ತಿದೆ. ಈ ರೆಸ್ಟೋರೆಂಟ್ ಬಿಪಿಟಿಪಿ ಕ್ಯಾಪಿಟಲ್‌ ಸಿಟಿಯಲ್ಲಿದೆ. ಇನ್ನು ಅಭಿಮಾನಿಗಳಿಗೆ ಈ ಸ್ಥಳವನ್ನು ತಲುಪುವುದು ಸಹ ತುಂಬ ಸುಲಭ. ನೀವು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಬಯಸಿದ್ದರೆ, ಈ ಸ್ಥಳವು ಬೆಸ್ಟ್‌ ಚಾಯ್ಸ್‌ ಆಗಲಿದೆ.

Virat Kohli s One8 Commune Restaurant Opens in Sector 94 Noida A Perfect Spot for Food

ಎಲ್ಲಿದೆ ಹೊಸ ರೆಸ್ಟೋರೆಂಟ್‌?

ಈ ರೆಸ್ಟೋರೆಂಟ್‌ ಬಗ್ಗೆ ಸಾಕಷ್ಟು ಚರ್ಚೆಗಳು ಈಗಾಗಲೇ ಸಾಮಾಜಿಕ ತಾಣದಲ್ಲಿ ನಡೆಯುತ್ತಿವೆ. ಈ ರೆಸ್ಟೋರೆಂಟ್‌ ತನ್ನ ಆಹಾರ ಹಾಗೂ ರುಚಿಯಿಂದ ಅಷ್ಟೇ ಸದ್ದು ಮಾಡುತ್ತಿಲ್ಲ. ಬದಲಿಗೆ ಇಲ್ಲಿನ ವೈಬ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಈ ರೆಸ್ಟೋರೆಂಟ್‌ ಬಗ್ಗೆ ಕೆಲವು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ.

ಈ ರೆಸ್ಟೋರೆಂಟ್‌ನಲ್ಲಿ ಎಲ್ಲ ತರಹದ ಆಹಾರವನ್ನು ನೀವು ಆನಂದಿಸಬಹುದು. ಇಲ್ಲಿ ಮಾಂಸಾಹಾರಿ ಹಾಗೂ ಶಾಖಹಾರಿ ಆಯ್ಕೆಗಳು ಇವೆ. ಬ್ಲ್ಯಾಕ್ ಗ್ರಾಂ ಹಮ್ಮಸ್, ಮಶ್ರೂಮ್ ಗೂಗ್ಲಿ ಡಿಮ್ ಸಮ್ ಮತ್ತು ಟಿರಮಿಸು ಕಾರ್ನೆಟ್ಟೊ, ಅಭಿಮಾನಿಗಳ ನೆಚ್ಚಿನ ಚಾಯ್ಸ್‌ ಆಗಿವೆ. ಈ ರೆಸ್ಟೋರೆಂಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಬೇರೆ ಫೀಲ್‌ ನೀಡುತ್ತದೆ. ಇದರಲ್ಲಿ ಕಾಣುವ ಪರಿಸರ, ಇಲ್ಲಿನ ಸುಂದರ ಸಸ್ಯಗಳು ಅಭಿಮಾನಿಗಳನ್ನು ಕೈ ಬೀಸಿ ಕರೆಯಲಿವೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಹಸ್ತಾಕ್ಷರ ಅಭಿಮಾನಿಗಳ ಚಿತ್ತ ಕದ್ದಿದೆ. ಈ ಪ್ರದೇಶದಲ್ಲಿ ನಿಂತು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಆರಂಭಿಸಿದ್ದಾರೆ.

Virat Kohli s One8 Commune Restaurant Opens in Sector 94 Noida A Perfect Spot for Food

ಯಾವಗ ಓಪನ್?

ಈ ರೆಸ್ಟೋರೆಂಟ್‌ ಕೊಂಚ ದುಬಾರಿ ಇದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ರೆಸ್ಟೋರೆಂಟ್‌ನಲ್ಲಿ ಪ್ರತಿ ವ್ಯಕ್ತಿಗೆ ಸರಿ ಸುಮಾರು 1500 ರೂ. ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಆಗಬಹುದು. ಇಲ್ಲಿ ಆಹಾರದ ಜೊತೆ ಪಾನಿಯಗಳು ಸಹ ಎಲ್ಲರನ್ನು ಸೆಳೆಯುತ್ತಿವೆ. ಈ ರೆಸ್ಟೋರೆಂಟ್‌ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಓಪನ್ ಆಗಿರುತ್ತದೆ. ಎಲ್ಲ ರೆಸ್ಟೋರೆಂಟ್‌ಗಳಂತೆ ಆಫ್‌ಲೈನ್‌ ಹಾಗೂ ಆನ್‌ಲೈನ್‌ ಸೌಲಭ್ಯಗಳು ಇವೆ.

ಈ ರೆಸ್ಟೋರೆಂಟ್‌ ತಲುಪಲು ಮೆಟ್ರೋ ಹಾಗೂ ರಸ್ತೆ ಸಾರಿಗೆಯನ್ನು ಬಳಸಬಹುದು. ಇದರ ಹತ್ತಿರದಲ್ಲಿರುವ ಮೆಟ್ರೋ ನಿಲ್ದಾಣ ಎಂದರೆ ಬೊಟಾನಿಕಲ್ ಗಾರ್ಡನ್. ಈ ನಿಲ್ದಾಣದಿಂದ ಸುಮಾರು ಒಂದು ವರೆ ಕಿಲೋ ಮೀಟರ್ ದೂರದಲ್ಲಿದೆ. ದೆಹಲಿಯು ನೋಯ್ಡಾದಿಂದ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

Story first published: Monday, December 9, 2024, 19:57 [IST]
Other articles published on Dec 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+