For Quick Alerts
ALLOW NOTIFICATIONS  
For Daily Alerts
 

RCB ಡ್ರೆಸ್ಸಿಂಗ್‌ ರೂಮಿನಲ್ಲಿ ವಿರಾಟ್ ಸಿಕ್ರೆಟ್‌ ರಿವೀಲ್‌ ಮಾಡಿದ ಪೇಸರ್‌

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ತಮ್ಮ ಸ್ಟೈಲಿಷ್‌ ಲುಕ್‌, ಬ್ಯಾಟಿಂಗ್ ಧಾಟಿಯಿಂದಲೇ ಹೆಸರುವಾಸಿ. ಇವರ ಆಟಕ್ಕೆ ಅಭಿಮಾನಿಗಳು ಮನಸೋಲುತ್ತಾರೆ. ಇವರು ಮೈದಾನದಲ್ಲಿ ತೋರುವ ಅಗ್ರೆಸಿವ್‌ ನೆಸ್‌ ನಿಂದ ಇರುತ್ತಾರೆ. ಪ್ರತಿ ಪಂದ್ಯವನ್ನೂ ಗೆಲ್ಲಲೇ ಬೇಕು ಎಂಬ ಮನಸ್ಥಿತಿ. ಮೈದಾನದಲ್ಲಿ ಇರುವ ವಿರಾಟ್ ಕೊಹ್ಲಿ ಹಾಗೂ ಹೊರಗಡೆ ಇರುವುದಕ್ಕೂ ತುಂಬ ಡಿಫ್ರೆಂಟ್‌.

ವಿರಾಟ್ ಕೊಹ್ಲಿ ಆಟಗಾರನಾಗಿ ಯುವ ಆಟಗಾರರಿಗೂ ಪ್ರೇರಣೆ. ಕೊಹ್ಲಿ ತುಂಬಾ ಶಾಂತ ಮತ್ತು ಯುವ ಆಟಗಾರರಿಗೆ ಸಹಾಯ ಮಾಡುತ್ತಾರೆ. ಹೀಗೆ ಹೇಳುತ್ತಿರುವುದು ಬೇರೆ ಯಾರು ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗದ ಬೌಲರ್ ಯಶ್ ದಯಾಳ್. ಕಳೆದ ಬಾರಿಯ ಐಪಿಎಲ್‌ನಲ್ಲಿ ಯಶ್‌ ದಯಾಳ್‌ ಅವರ ಯಶಸ್ಸಿನ ಹಿಂದೆ ವಿರಾಟ್‌ ಮಂತ್ರ ಇರುವುದಾಗಿ ಬಹಿರಂಗಪಡಿಸಿದ್ದಾರೆ.

Virat Kohli s Positive Influence Yash Dayal Reveals How Kohli Boosted His Confidence at RCB

ವಿರಾಟ್‌ ಬೆಂಬಲ

ಇತ್ತೀಚಿಗೆ ಸ್ಪೋರ್ಟ್ಸ್ ಟಾಕ್ ಜೊತೆಗಿನ ಚಾಟ್‌ ನಡೆಸಿದರು. ಕಳೆದ ಆವೃತ್ತಿಯಲ್ಲಿ ವಿರಾಟ್‌ ತಮಗೆ ಹೇಗೆಲ್ಲಾ ಬೆಂಬಲವನ್ನು ನೀಡಿದ್ದಾರೆ ಎಂದು ದಯಾಳ್ ಈ ವೇಳೆ ತಿಳಿಸಿದ್ದಾರೆ. ವಿರಾಟ್‌ ಐಪಿಎಲ್‌ 2024ರ ಋತುವಿನ ಉದ್ದಕ್ಕೂ ಬೆಂಬಲ ನೀಡಿದರು. ಆವೃತ್ತಿಯುದ್ಧಕ್ಕೂ ಕೊಹ್ಲಿ ಅವರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಅವರು ನನಗೆ ನೀಡಿದ ಭರವಸೆಯಿಂದಾಗಿ ಟೂರ್ನಿಯುದ್ಧಕ್ಕೂ ನಾನು ಉತ್ತಮ ಲಯದಲ್ಲಿ ಬೌಲ್ ಮಾಡಲು ನೆರವಾಯಿತು. ಅಲ್ಲದೆ ನಾನು ಬೇರೆ ತಂಡವನ್ನು ಬಿಟ್ಟು, ಬಂದಿದ್ದೆ. ಆದರೆ ನನಗೆ ಆರ್‌ಸಿಬಿ ತಂಡದಲ್ಲಿ ಎಂದಿಗೂ ಹೊಸ ತಂಡಕ್ಕೆ ಬಂದಿರುವ ರೀತಿ ಫೀಲ್ ಆಗಲಿಲ್ಲ. ತಂಡ ನನ್ನೊಂದಿಗೆ ಉತ್ತಮವಾಗಿ ಸಹಕರಿಸಿತು ಎಂದು ದಯಾಳ್ ಹೇಳಿದ್ದಾರೆ. ಕೊಹ್ಲಿ ಯುವಕರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಯುವಕರಿಗೆ ಬೇಕಿದ್ದ ಸಲಹೆ ಹಾಗೂ ಸೂಚನೆಗಳನ್ನು ವಿರಾಟ್‌ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಗಾಗ ನೀಡುತ್ತಲೇ ಇರುತ್ತಾರೆ ಎಂದರು.

ದಯಾಳ್‌ ಸಾಧನೆ

ಆರ್‌ಸಿಬಿ ತಂಡಕ್ಕೆ ಯಶ್‌ ದಯಾಳ್‌ ಅವರು 2024ರಲ್ಲಿ ಈ ತಂಡ ಸೇರಿದರು. ಇದಕ್ಕೂ ಹಿಂದಿನ ಐಪಿಎಲ್‌ ಆವೃತ್ತಿಯಲ್ಲಿ ಯಶ್‌ ದಯಾಳ್‌ ಅವರು ಗುಜರಾತ್‌ ಟೈಟನ್ಸ್‌ ಪರ ಆಡಿದ್ದರು. ಈ ವೇಳೆ ಅವರು ರಿಂಕು ಸಿಂಗ್‌ ಅವರಿದ ದಂಡನೆಗೆ ಒಳಗಾಗಿದ್ದರು. ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ನೀಡಿ ಮ್ಯಾಚ್‌ ಕೈ ಚೆಲ್ಲಿದ್ದರು. ಬಳಿಕ ಗುಜರಾತ್ ತಂಡದಲ್ಲಿ ಇವರಿಗೆ ಕಡಿಮೆ ಅವಕಾಶವನ್ನು ನೀಡಿತು. ಆದರೆ ಇದಾದ ಬಳಿಕ ನಡೆದ ಐಪಿಎಲ್‌ ಮಿನಿ ಹರಾಜಿನಲ್ಲಿ ದಯಾಳ್‌ರನ್ನು ತಂಡಕ್ಕೆ ಖರೀದಿಸಿತು.

ಯಶ್‌ ದಯಾಳ್‌ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರುತ್ತಿದ್ದಂತೆ ಅಭಿಮಾನಿಗಳು ಗರಂ ಆಗಿದ್ದರು. ಆದರೆ ಐಪಿಎಲ್‌ 2024ರಲ್ಲಿ ಯಶ್‌ ದಯಾಳ್‌ ಬಿಗುವಿನ ದಾಳಿ ಕಂಡು ಫ್ಯಾನ್ಸ್‌ ಫುಲ್ ಮಾರ್ಕ್ಸ್‌ ನೀಡಿದ್ದರು. ಇವರು 17ನೇ ಆವೃತ್ತಿಯ ಐಪಿಎಲ್‌ನಲ್ಲಿ 14 ಪಂದ್ಯಗಳನ್ನು ಆಡಿದ್ದು, 15 ವಿಕೆಟ್‌ ಕಬಳಿಸಿದ್ದಾರೆ.

Story first published: Wednesday, August 21, 2024, 22:37 [IST]
Other articles published on Aug 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+