ಐಪಿಎಲ್: ಕಳೆದ ಆವೃತ್ತಿಯಲ್ಲಿ ಕೊಹ್ಲಿ ಸಲ್ಲಿಸಿದ್ದ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಿಲ್ಲ ಆರ್‌ಸಿಬಿ!

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದಾಗಿ ನಂತರದ ದಿನಗಳಲ್ಲಿ ಯುಎಇಗೆ ಸ್ಥಳಾಂತರವಾದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಶ್ಚರ್ಯಕರ ಘೋಷಣೆಯೊಂದನ್ನು ಮಾಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಈ ಬಾರಿಯ ಐಪಿಎಲ್ ಆವೃತ್ತಿ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ತ್ಯಜಿಸಲಿದ್ದೇನೆ ಎಂದು ವಿರಾಟ್ ಕೊಹ್ಲಿ ಟೂರ್ನಿ ಮಧ್ಯದಲ್ಲಿ ಘೋಷಣೆಯನ್ನು ಮಾಡುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಕ್ಷಕರಿಗೆ ಶಾಕ್ ನೀಡಿದ್ದರು ಎಂದೇ ಹೇಳಬಹುದು.
ಹೀಗೆ 2008ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯನಾಗಿರುವ ವಿರಾಟ್ ಕೊಹ್ಲಿ ಏಕಾಏಕಿ ಈ ರೀತಿಯ ಘೋಷಣೆಯನ್ನು ಹೊರಡಿಸುವುದರ ಮೂಲಕ ಬೇಸರವನ್ನು ಮೂಡಿಸಿದ್ದರು ಹಾಗೂ ತಾನು ಎಲ್ಲಿಯವರೆಗೆ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತೇನೋ ಅಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತೇನೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ತುಸು ಸಮಾಧಾನವನ್ನು ಕೂಡಾ ತಂದಿದ್ದರು.
ಇನ್ನು ಈ ರಾಜೀನಾಮೆಯ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್‌ಮೆಂಟ್ ಹಾಗೂ ಆಟಗಾರರ ಜತೆ ಈಗಾಗಲೇ ಚರ್ಚಿಸಿದ್ದೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿ ಕಳೆದ ಬಾರಿಯ ಟೂರ್ನಿಯಲ್ಲಿ ನಾಯಕನಾಗಿ ಕೊನೆಯ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು. ಹೀಗೆ ಕಳೆದ ಬಾರಿಯ ಐಪಿಎಲ್ ಟೂರ್ನಿ ಮುಕ್ತಾಯಗೊಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಂಡಿತು ಹಾಗೂ ಇತ್ತೀಚೆಗೆ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹಲವಾರು ಆಟಗಾರರನ್ನು ಖರೀದಿಸಿತು. ಇತ್ತ ಈ ಬಾರಿಯ ಐಪಿಎಲ್ ಟೂರ್ನಿ ಸಮೀಪಿಸುತ್ತಿದ್ದು, ಇನ್ನೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ನೂತನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿಯೇ ಇಲ್ಲ. ಹಾಗೂ ಕ್ರಿಕ್‌ಟ್ರ್ಯಾಕರ್ ಎಂಬ ಕ್ರೀಡಾ ವೆಬ್ ತಾಣ ತಿಳಿಸಿರುವ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕನ ಸ್ಥಾನವನ್ನು ಇನ್ನೂ ಖಾಲಿ ಇಟ್ಟಿದ್ದು, ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದನ್ನು ಫ್ರಾಂಚೈಸಿ ಇನ್ನೂ ಸ್ವೀಕರಿಸಿಲ್ಲ ಎಂಬುದು ಇದರರ್ಥ ಎಂದು ತಿಳಿಸಿದೆ.

ಯಾರ ಪಾಲಾಗಬಹುದು ನಾಯಕತ್ವ?
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಬೇಕಿದ್ದು, ಅತ್ತ ನಾಯಕತ್ವ ಯಾರ ಪಾಲಾಗಬಹುದು ಎಂಬ ಲೆಕ್ಕಾಚಾರದ ಚರ್ಚೆಗಳು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರ ನಡುವೆ ನಡೆಯುತ್ತಿವೆ. ಕೊಹ್ಲಿ ನಂತರ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಈ ಮೂವರಲ್ಲಿ ಓರ್ವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನಾಗಬಹುದು ಎಂಬ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿದ್ದು, ಫಾಫ್ ಡು ಪ್ಲೆಸಿಸ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.

ನಾಯಕನ ಘೋಷಣೆ ಯಾವಾಗ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ನೂತನ ನಾಯಕನನ್ನು ನಾಳೆ ಅಂದರೆ ಮಾರ್ಚ್ 12ರ ಶನಿವಾರದಂದು ಘೋಷಿಸಲಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮ್ಯೂಸಿಯಂ ಕ್ರಾಸ್ ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಧ್ಯಾಹ್ನ 12ರಿಂದ 8ರವರೆಗೆ ಈ ಕಾರ್ಯಕ್ರಮವನ್ನು ನಡೆಸಲಿದೆ. ಈ ವೇಳೆಯಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ಯಾರೆಂಬ ಪ್ರಶ್ನೆಗೆ ಉತ್ತರ ನೀಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications