Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರೀಡಾ ಪ್ರೇಮಿಗಳ ಹೃದಯ ಗೆದ್ದ ವಿರಾಟ್ ಕೊಹ್ಲಿ ನಡೆ: ವಿಡಿಯೋ

Virat Kohlis spirit of cricket gesture for Joe Root wins hearts on social Media

ಚೆನ್ನೈ: ಮೈದಾನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚಾಗಿ ಆಕ್ರಮಣಕಾರಿ ನಡೆಗಾಗಿ ಗಮನ ಸೆಳೆಯುತ್ತಿರುತ್ತಾರೆ. ಕೆಲವು ಸಾರಿ ಕ್ರೀಡಾಸ್ಫೂರ್ತಿಗಾಗಿಯೂ ಕೊಹ್ಲಿ ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದಿದೆ. ಅಂಥದ್ದೇ ಕ್ರೀಡಾ ಸ್ಫೂರ್ತಿಯ ನಡೆಗಾಗಿ ಕೊಹ್ಲಿ ಮತ್ತೆ ಗಮನ ಸೆಳೆದಿದ್ದಾರೆ.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಶುಕ್ರವಾರ (ಫೆಬ್ರವರಿ 5) ಮೊದಲನೇ ದಿನದಾಟದ ವೇಳೆ ಇಂಗ್ಲೆಂಡ್ ನಾಯಕ ಜೋ ರೂಟ್‌ಗೆ ಸಹಾಯ ಮಾಡುವ ಮೂಲಕ ಕೊಹ್ಲಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಇನ್ನಿಂಗ್ಸ್‌ನ 87ನೇ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಎಸೆತಕ್ಕೆ ಸಿಕ್ಸ್ ಚಚ್ಚಿದ ಬಳಿಕ ರೂಟ್ ಸ್ನಾಯುಸೆಳೆತಕ್ಕೆ ಒಳಗಾದರು. ಕಾಲು ನೋವಿನಿಂದ ಕೂಡಲೇ ರೂಟ್ ನೆಲದ ಮೇಲೆ ಉರುಳಿದರು. ಆ ಕೂಡಲೇ ರೂಟ್ ಬಳಿ ಧಾವಿಸಿದ ಕೊಹ್ಲಿ, ರೂಟ್ ಕಾಲು ಸ್ಟ್ರೆಚ್ ಮಾಡಲು ನೆರವು ನೀಡಿದರು.

ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಕ್ರಿಕೆಟ್‌ನ ಸ್ಫೂರ್ತಿ ಚೆನ್ನಾಗಿದೆ' ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಅಂದ್ಹಾಗೆ ಹಿಂದೊಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿಯೂ ಹೀಗೇ ಎದುರಾಳಿ ಆಟಗಾರನಿಗೆ ನೆರವಿತ್ತಿದ್ದರು. ಆ ಫೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

Story first published: Friday, February 5, 2021, 22:37 [IST]
Other articles published on Feb 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+