KKR vs RCB: ಈಡನ್ ಗಾರ್ಡನ್‌ನಲ್ಲಿ ಹೇಗೆದೆ ವಿರಾಟ್ ದಾಖಲೆ?
ಇನ್ನು ಎರಡು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಶ್ರೀಮಂತ ಲೀಗ್‌ನಲ್ಲಿ ಭಾರತ ಸೇರಿದಂತೆ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಆರ್‌ಸಿಬಿ ಸಹ ಚೊಚ್ಚಲ ಕಪ್ ಗೆಲ್ಲುವ ಕನಸಿನೊಂದಿಗೆ ಅಖಾಡ ಪ್ರವೇಶಿಸಲಿದೆ. ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಆಡಲಿದೆ. ಈ ವೇಳೆ ಆರ್‌ಸಿಬಿ, ಆತಿಥೇಯ ಕೆಕೆಆರ್ ವಿರುದ್ಧ ಕಾದಾಟ ನಡೆಸಲಿದೆ. ಈ ಸಮಯದಲ್ಲಿ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ.
ಕಳೆದ ತಿಂಗಳು ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಫಾರ್ಮ್ ಪ್ರದರ್ಶನ ಮಾಡಿದ್ದರು. ಇದೇ ಫಾರ್ಮ್‌ನ್ನು ಐಪಿಎಲ್‌ನಲ್ಲೂ ಮುಂದುವರೆಸುವ ಆಸೆ ವಿರಾಟ್ ಅವರದ್ದಾಗಿದೆ. ಅಸಲಿಗೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಅಂತಾರಾಷ್ಟ್ರೀಯ ಚುಟುಕು ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಇವರನ್ನು ಟಿ20 ಸ್ವರೂಪದಲ್ಲಿ ಆಡುವುದನ್ನು ಈಗ ಬರೀ ಐಪಿಎಲ್‌ನಲ್ಲಿ ಮಾತ್ರ ಆಡುವುದನ್ನು ಕಾಣಬಹುದು. ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಈಡನ್ ಗಾರ್ಡನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಈಡನ್ ಗಾರ್ಡನ್‌ನಲ್ಲಿ ಹೇಗಿದೆ ವಿರಾಟ್ ಸರಾಸರಿ?
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಅಧಾರವಾಗಿದ್ದಾರೆ. ಕೊಹ್ಲಿ ಈ ಅಂಗಳದಲ್ಲಿ ಒಟ್ಟಾರೆ 13 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 371 ರನ್‌ಗಳನ್ನು 37.10ರ ಸರಾಸರಿಯಲ್ಲಿ ಕಲೆ ಹಾಕಿದ್ದಾರೆ. ಈ ಅಂಗಳದಲ್ಲಿ ವಿರಾಟ್ ಕೊಹ್ಲಿ ಒಂದು ಶತಕ ಹಾಗೂ ಅರ್ಧಶತಕದ ಇನಿಂಗ್ಸ್‌ಗಳು ಸಹ ಮೂಡಿ ಬಂದಿವೆ. ಈ ಅಂಗಳದಲ್ಲಿ ಕೊಹ್ಲಿ ಒಮ್ಮೆ ಸೊನ್ನೆ ಸಹ ಸುತ್ತಿದ್ದಾರೆ.
ಕೆಕೆಆರ್ ವಿರುದ್ಧ ಕೊಹ್ಲಿ ಆಡಿದ 12 ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ 38.44 ಸರಾಸರಿಯಲ್ಲಿ ಒಟ್ಟು 346 ರನ್ ಗಳಿಸಿದ್ದಾರೆ. ಈ ವೇಳೇ ಶತಕ ಹಾಗೂ ಅರ್ಧಶತಕದ ಇನಿಂಗ್ಸ್ ಸಹ ದಾಖಲಾಗಹಿದೆ. ಒಟ್ಟಾರೆ ಕೆಕೆಆರ್ ವಿರುದ್ಧ ಕೊಹ್ಲಿ ದಾಖಲೆ ನೋಡಿದ್ರೆ, ಇವರು ಆಡಿದ 34 ಪಂದ್ಯಗಳಲ್ಲಿ 38.48 ಸರಾಸರಿಯಲ್ಲಿ 962 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಸೇರಿದಂತೆ 6 ಅರ್ಧಶತಕ ದಾಖಲಾಗಿವೆ.

ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಆರ್‌ಸಿಬಿ ಪರ ಕೊಹ್ಲಿ ಒಟ್ಟು 252 ಪಂದ್ಯಗಳಲ್ಲಿ 8004 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 38.67 ಹಾಗೂ ಸ್ಟ್ರೈಕ್ ರೇಟ್ 131.97 ಆಗಿದೆ. ಇದ್ರಲ್ಲಿ 8 ಶತಕ ಹಾಗೂ 55 ಅರ್ಧಶತಕಗಳು ಸೇರಿವೆ. ಒಟ್ಟಾರೆ ಐಪಿಎಲ್‌ನಲ್ಲಿ ಕೊಹ್ಲಿ 705 ಬೌಂಡರಿ ಬಾರಿಸಿದ್ದು, 272 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications