Virat Kohli: ವಿರಾಟ್ ಕೊಹ್ಲಿ ಬೆನ್ನಿಗೆ ನಿಂತ RCB ಮಾಜಿ ನಾಯಕ
ಇತ್ತೀಚಿಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ನಿರಾಸೆ ಅನುಭವಿಸಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ದ್ವಿಗುಣ ಮಾಡಿತ್ತು. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದು, ಟೀಕೆಗಳಿಗೆ ಆಹಾರ ಆಗುವಂತೆ ಮಾಡಿತ್ತು. ಈಗ ಈ ಬಗ್ಗೆ ಆರ್‌ಸಿಬಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೇಸಿಸ್ ತುಟಿ ಬಿಚ್ಚಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಸತತ ವೈಫಲ್ಯದಿಂದ ಮಾಜಿ ಆಟಗಾರರು ಇವರ ಆಟವನ್ನು ಟೀಕೆ ಮಾಡಿದ್ದರು. ಇದರಲ್ಲಿ ದೇಶ ಹಾಗೂ ವಿದೇಶದ ಆಟಗಾರರು ಸಹ ಸೇರಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಮತ್ತು ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಆಟವನ್ನು ಟೀಕಿಸಿದ್ದಾರೆ. ಇನ್ನು ಆರ್‌ಸಿಬಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೇಸಿಸ್ ಸಹ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.

ವಿರಾಟ್ ಬಗ್ಗೆ ಫಾಫ್ ಹೇಳಿದ್ದೇನು?
ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಕ್ಯಾಪ್ಟನ್ಸ್ ಡೇ ವೇಳೆ ಮಾತನಾಡಿರುವ ಫಾಫ್, ವಿರಾಟ್ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ವಿರಾಟ್ ನಿವೃತ್ತಿಯ ಬಗ್ಗೆ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬಹುದು. ಆಟಗಾರನಿಗೆ ಅವರಿಗೆ ಯಾವಾಗ ಅನಿಸುತ್ತದೋ ಆಗ ಅವರು ನಿವೃತ್ತಿ ನಿರ್ಧಾರ ಕೈ ಗೊಳ್ಳಬಹುದು. ಅವರಂತಹ ಆಟಗಾರ ಮೈದಾನದಲ್ಲಿ ಇರುವುದು ತುಂಬ ಪ್ರೇರಿತು. ವಿರಾಟ್ ಈ ಹಿಂದೆಯೂ ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ ಎಂದು ಫಾಫ್ ತಿಳಿಸಿದ್ದಾರೆ.

ಒಟ್ಟಾರೆ ನಿವೃತ್ತಿಯ ಬಗ್ಗೆ ಮಾತನಾಡಿರುವ ಫಾಫ್, ತಮ್ಮ ಜೀವನದ ಉದಾಹರಣೆಯನ್ನೇ ನೀಡಿದರು. ಪ್ರತಿಯೊಬ್ಬ ಆಟಗಾರನಿಗೂ ತಾನು ಯಾವಾಗ ನಿವೃತ್ತಿ ಹೊಂದಬೇಕು ಎಂದು ತಿಳಿದಿರುತ್ತದೆ ಎಂದು ಹೇಳಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ನಾನು ರನ್ ಕಲೆ ಹಾಕುವಲ್ಲಿ ವಿಫಲನಾಗುತ್ತಿದೆ. ಯುವ ಆಟಗಾರರು ಬದು ಟಿ20 ಕ್ರಿಕೆಟ್ ಜಗತ್ತಿಗೆ ಕಾಲಿಡಲು ಬಂದಾಗ, ಈ ಸಮಯ ನನ್ನದಲ್ಲ ಎಂದು ನಾನು ಭಾವಿಸಿದ್ದೆ. ನಾನು ನನ್ನ ಆಟದ ಉತ್ತುಂಗದಲ್ಲಿದ್ದಾಗಲೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.

ಆಸೀಸ್ ನೆಲದಲ್ಲಿ ಕಳಪೆ ಸಾಧನೆ
ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ರನ್ ಮಹಲ್ ಕಟ್ಟಿದ್ದರು. ಆದರೆ ಈ ಬಾರಿ ಅವರು ರನ್ ಬರ ಅನುಭವಿಸಿದರು. ಆಸೀಸ್ ಪ್ರವಾಸದಲ್ಲಿ ವಿರಾಟ್ ಆಫ್ ಸೈಡ್ ಬಾಲ್‌ಗಳನ್ನು ಕೆಣಕಿ ಔಟ್ ಆಗುತ್ತಲೇ ಇದ್ದರು. ಇವರು ಬಾರ್ಡರ್ ಗವಾಸ್ಕರ್ ಸರಣಿಯ 5 ಪಂದ್ಯಗಳಲ್ಲಿ 190 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಈ ಸರಣಿಯಲ್ಲಿ ಇವರ ಬ್ಯಾಟ್‌ನಿಂದ ಕೇವಲ ಒಂದು ಶತಕ ಮಾತ್ರ ದಾಖಲಾಗಿದೆ. ಉಳಿದಂತೆ ಎಲ್ಲ ಪಂದ್ಯಗಳಲ್ಲೂ ವಿರಾಟ್ ನಿರಾಸೆ ಅನುಭವಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications