ವಿಶ್ವಕಪ್ 2019: ಭಾರತದ ನಾಯಕ ಕೊಹ್ಲಿಗೆ ಲಂಡನ್‌ನಲ್ಲಿ ವಿಶೇಷ ಗೌರವ

ಲಂಡನ್, ಮೇ 30: ಐಸಿಸಿ ಕ್ರಿಕೆಟ್ ವಿಶ್ವಕಪ್ ಉದ್ಘಾಟನೆಯ ದಿನವೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶ್ವ ಮಟ್ಟದ ಗೌರವ ಲಭಿಸಿದೆ. ವಿಶ್ವಕಪ್ ಟೂರ್ನಿಯ ಹೊತ್ತಿನಲ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಲಾರ್ಡ್ಸ್ ಮೈದಾನದಲ್ಲಿ ಅನಾವರಣಗೊಳಿಸಲಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮೇ 30ರಿಂದ ವಿಶ್ವಕಪ್ ಪಂದ್ಯಗಳು ಆರಂಭಗೊಳ್ಳಲಿದ್ದು, ಮುನ್ನಾದಿನವಾದ ಬುಧವಾರ (ಮೇ 29) ಉದ್ಘಾಟನಾ ಕಾರ್ಯಕ್ರಮದ ವೇಳೆ ಕೊಹ್ಲಿ ಮೇಣದ ಪ್ರತಿಮೆಯನ್ನು ಪ್ರದರ್ಶನಕ್ಕಿಡಲಾಯಿತು. ಈ ಪ್ರತಿಮೆ ಮೇ 30ರಿಂದ ಜೂನ್ 15ರ ವರೆಗೆ ಅಂದರೆ ಟೂರ್ನಿ ಮುಕ್ತಾಯದವರೆಗೂ ಲಂಡನ್ ನಲ್ಲಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕಾಣಸಿಗಲಿದೆ.
ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದ ಜನರಲ್ ಮ್ಯಾನೇಜರ್ ಸ್ಟೀವ್ ಡೇವೀಸ್ ಈ ಬಗ್ಗೆ ಮಾತನಾಡಿ, 'ವಿಶ್ವಕಪ್ ಟೂರ್ನಿಯೊಂದಿಗೆ ಕ್ರಿಕೆಟ್ ಜ್ವರ ಶುರುವಾಗುವುದರಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಮ್ಯೂಸಿಯಂನಲ್ಲಿ ಅನಾವರಣಗೊಳಿಸಿದ್ದೇವೆ' ಎಂದಿದ್ದಾರೆ.
'ಕ್ರಿಕೆಟ್ ಜಗತ್ತಿನ ಹೀರೋ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಲಿದೆ ಎಂದು ನಾನು ಭಾವಿಸಿದ್ದೇನೆ' ಎಂದು ಸ್ಟೀವ್ ಅಭಿಪ್ರಾಯಿಸಿದ್ದಾರೆ. ವಿಶ್ವಶ್ರೇಷ್ಠ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್, ಬ್ರಿಟಿಷ್ ರನ್ನರ್ ಸರ್ ಮೊ ಫರಾಹ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಮೆಗಳ ಬಳಿ ಕೊಹ್ಲಿ ಪ್ರತಿಮೆ ವೀಕ್ಷಣೆಗೆ ಲಭ್ಯವಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications