ವಿರಾಟ್ ಕೊಹ್ಲಿಯ ತಮಾಷೆಯ ವೀಡಿಯೊ ಶೇರ್ ಮಾಡಿದ ಅನುಷ್ಕಾ: ವೀಡಿಯೊ

ಮುಂಬೈ, ಮೇ 20: ಕೊರೊನಾವೈರಸ್ ಕಾರಣ ಭಾರತದಲ್ಲಿ ಲಾಕ್ ಡೌನ್ ವಿಧಿಸಲಾಗಿರುವುದರಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸದ್ಯ ಸ್ವಯಂ ಪ್ರತ್ಯೇಕತೆ ಪಾಲಿಸುತ್ತಿದ್ದಾರೆ. 31ರ ಹರೆಯದ ವಿರಾಟ್ ಕ್ರಿಕೆಟ್ ಅನ್ನು ಮಿಸ್ ಮಾಡುಕೊಳ್ಳುತ್ತಿದ್ದಾರಾದರೂ ಬಾಲಿವುಡ್ ನಟಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಬಿಡುವಿನ ಸಮಯ ಕಳೆಯುತ್ತಿದ್ದಾರೆ.
ಬುಧವಾರ (ಮೇ 20) ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ತಮಾಷೆಯ ವೀಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಡೈನೋಸಾರ್‌ನಂತೆ ನಡೆದಾಡುವ ತಮಾಷೆಯ ದೃಶ್ಯವಿದೆ. ಸದ್ಯ ಮುಂಬೈಯಲ್ಲಿರುವ ವಿರಾಟ್-ಅನುಷ್ಕಾ ದಂಪತಿ ಈ ತಮಾಷೆಯ ವೀಡಿಯೋ ಸೆರೆ ಹಿಡಿದಿದೆ.
ಡೈನೋಸಾರ್‌ನಂತೆ ನಡೆಯುತ್ತ ಬರುವ ವಿರಾಟ್ ಅದರಂತೆಯೇ ಕೂಗುವ ದೃಶ್ಯ ವೀಡಿಯೋದಲ್ಲಿದೆ. ಟ್ವಿಟರ್ ವೀಡಿಯೋದ ಜೊತೆಗೆ ಅನುಷ್ಕಾ, 'ನಾನೊಂದು ಡೈನೋಸರ್ ನೋಡಿಬಿಟ್ಟೆ,' ಎಂದು ಸಾಲನ್ನು ಬರೆದುಕೊಂಡಿದ್ದಾರೆ.
ಕೊರೊನಾವೈರಸ್ ಬಾರದೆ ಪರಿಸ್ಥಿತಿ ಎಂದಿನಂತೆ ಇದ್ದಿದ್ದರೆ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ನಾಯಕನಾಗಿ ಮೈದಾನಕ್ಕಿಳಿಯುತ್ತಿದ್ದರು. ಆದರೆ ಕೋವಿಡ್-19ನಿಂದಾಗಿ ಐಪಿಎಲ್ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications