ಧೋನಿ ನಿವೃತ್ತಿ: ಕೊಹ್ಲಿ, ಸಚಿನ್, ರವಿಶಾಸ್ತ್ರಿಯಿಂದ ಧೋನಿಗೆ ವಿದಾಯದ ನುಡಿ

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಘೋಷಿಸಿದ್ದಾರೆ. ಧೋನಿಯ ನಿವೃತ್ತಿ ಕೇವಲ ಕ್ರಿಕಟ್ ಅಭಿಮಾನಗಳಿಗೆ ಮಾತ್ರವಲ್ಲ ಸಹ ಆಟಗಾರರು ಮಾಜಿ ಆಟಗಾರರಿಗೂ ಬೇಸರದ ಕ್ಷಣ. ಈ ಸಂದರ್ಭದಲ್ಲಿ ಧೋನಿಯೊಂದಿಗಿನ ಕ್ರಿಕೆಟ್ ಅಂಗಳದ ಸಮಿ ನೆನಪುಗಳೊಂದಿಗೆ ಕ್ರಿಕೆಟ್ ದಿಗ್ಗಜರು ಮಾಹಿ ನಿವೃತ್ತಿ ಬದುಕಿಗೆ ಶುಭ ಹಾರೈಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಬ್ಯಾಟ್ಸ್‌ಮನ್ ಆಗಿ ಬಂದ ಮಹೇಂದ್ರ ಸಿಂಗ್ ಧೋನಿ ಬಳಿಕ ನಾಯಕನಾಗಿ ಮಿಂಚಿದರು. ಈ ಸಂದರ್ಭದಲ್ಲಿ ಅನೇಕ ಯುವ ಪ್ರತಿಬೆಗಳಿಗೂ ಅವಕಾಶವನ್ನು ನೀಡಿದರು. ಯುವ ಹಾಗೂ ಅನುಭವಿ ಆಟಗಾರರಿದ್ದ ತಂಡವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಮಾತ್ರವಲ್ಲ ದೇಶಕ್ಕೆ ಹೆಮ್ಮೆ ಮೂಡಿಸುವಂತೆ ಮಾಡಿದರು.
ಧೋನಿ ನಿವೃತ್ತಿಯ ಬಗ್ಗೆ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಧೋನಿ ಜೊತೆಗಿನ ಕ್ರಿಕೆಟ್ ಅಂಗಳದ ನೆನಪುಗಳನ್ನು ಹಂಚಿ ಧೋನಿಗೆ ಶುಭ ಹಾರೈಸಿದ್ದಾರೆ.
ಸಚಿನ್ ತೆಂಡೂಲ್ಕರ್
"ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರವಾದದ್ದು ಎಂಎಸ್ ಧೋನಿ. ನಿಮ್ಮ ಜೊತೆಗೂಡಿ 2011ರ ವಿಶ್ವಕಪ್ ಗೆಲುವಿನ ಸಂದರ್ಭ ನನ್ನ ವೃತ್ತಿ ಬದುಕಿನ ಶ್ರೇಷ್ಠ ಕ್ಷಣ. ಎರಡನೇ ಇನ್ನಿಂಗ್ಸ್‌ಗೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಸಚಿನ್ ತೆಂಡೂಲ್ಕರ್ ಟ್ವಿಟ್ಟರ್‌ನಲ್ಲಿ ಧೋನಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದ್ದಾರೆ.
ರವಿ ಶಾಸ್ತ್ರಿ
ಟೀಮ್ ಇಂಡಿಯಾದ ಹಾಲಿ ಕೋಚ್ ರವಿ ಶಾಸ್ತ್ರಿ ಕೂಡ ಟ್ವಿಟ್ಟರ್‌ನಲ್ಲಿ ಧೋನಿ ನಿವೃತ್ತಿಯ ಸಂದರ್ಭದಲ್ಲಿ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ. "ವೃತ್ತಿಪರನಾಗಿ ನಿಮ್ಮೊಂದಿಗೆ ಡ್ರೆಸ್ಸಿಂಗ್‌ರುಮ್‌ಅನ್ನು ಹಂಚಿಕೊಂಡಿದ್ದು ನನಗೆ ದೊರಕಿದ ಭಾಗ್ಯ ಹಾಗೂ ಗೌರವವಾಗಿದೆ. ದೇವರು ಒಳ್ಳೆಯದನ್ನು ಮಾಡಲಿ" ಎಂದು ಶುಭ ಹಾರೈಸಿದ್ದಾರೆ. ಈ ಟ್ವೀಟ್ ಜೊತೆಗೆ ವಿಶ್ವಕಪ್‌ಗೆದ್ದ ಅಂತಿಮ ಸಿಕ್ಸರ್ ವಿಡಿಯೋವನ್ನು ಶಾಸ್ತ್ರಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿಯ ಜೊತೆಗೆ ಅತ್ಯಂತ ಆಪ್ತ ಸಂಬಂಧವನ್ನು ಹೊಂದಿದ್ದಾರೆ. ನಿವೃತ್ತಿ ಸಂದರ್ಭದಲ್ಲಿ ತಮ್ಮ ಭಾವನೆಯನ್ನು ಟ್ವಿಟ್ಟರ್‌ನಲ್ಲಿ ಅವರು ವ್ಯಕ್ತಪಡಿಸಿದ್ದಾರೆ. "ಪ್ರತಿಯೊಬ್ಬ ಕ್ರಿಕೆಟರ್ ಕೂಡ ತಮ್ಮ ನಿವೃತ್ತಿಯನ್ನು ಘೋಷಿಸಲೇ ಬೇಕು. ಆದರೆ ಕೆಲ ಹೃದಯಕ್ಕೆ ಹತ್ತಿರವಾದವರ ನಿವೃತ್ತಿ ಹೆಚ್ಚಿನ ಭಾವುಕವಾಗಿಸುತ್ತದೆ. ದೇಶಕ್ಕಾಗಿ ನೀವು ನೀಡಿದ ಕೊಡುಗೆ ಪ್ರತಿಯೊಬ್ಬರ ಹೈದಯದಲ್ಲೂ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications