For Quick Alerts
ALLOW NOTIFICATIONS  
For Daily Alerts
 

'ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಎದುರಾಳಿಗೆ ಅಚ್ಚರಿ ನೀಡಬಲ್ಲದು'

Virat Kohli says flexible batting order can surprise Indias opponents

ಡಬ್ಲಿನ್, ಜೂ. 28: ಐರ್ಲೆಂಡ್, ಇಂಗ್ಲೆಂಡ್ ನಂತ ತಂಡಗಳೆದುರು ಪಂದ್ಯಗಳಿರುವಾಗ ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆ ಎದುರಾಳಿಯನ್ನು ಅಚ್ಚರಿಗೀಡು ಮಾಡಬಲ್ಲದು. ಇದರಿಂದ ಭಾರತ ತಂಡಕ್ಕೆ ಕೊಂಚ ಅನುಕೂಲವೂ ಆಗಲಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐರ್ಲೆಂಡ್ ನ ಡಬ್ಲಿನ್ ನಲ್ಲಿ ಬುಧವಾರ ನಡೆದ ಐರ್ಲೆಂಡ್-ಭಾರತ ಟಿ20 ಮೊದಲ ಪಂದ್ಯದಲ್ಲಿ ಭಾರತ 76ರನ್ ಗಳ ಜಯ ಸಾಧಿಸುವ ಮೂಲಕ ಪ್ರವಾಸದಲ್ಲಿ ಆರಂಭಿಕ ಯಶಸ್ಸು ಸಾಧಿಸಿತ್ತು. ಈ ಸಂದರ್ಭ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು. ಈ ಕುರಿತು ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು.

ಪಂದ್ಯದ ವೇಳೆ ವಿರಾಟ್ ಕೊಹ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದರು. ಜೊತೆಗೆ ಎರಡನೇ ಎಸೆತಕ್ಕೆ ವಿಕೆಟ್ ಒಪ್ಪಿಸಿ 0 ರನ್ ನೊಂದಿಗೆ ಪೆವಿಲಿಯನ್ ಗೆ ನಡೆದಿದ್ದರು. ಆದರೆ ಭಾರತಕ್ಕೆ ಅಂಥದ್ದೇನೂ ನಷ್ಟವಾಗಿರಲಿಲ್ಲ. 20 ಓವರ್ ಗಳಲ್ಲಿ 5 ವಿಕೆಟ್ ಕಳೆದು 208ರನ್ ಪೇರಿಸಿದ ಭಾರತ ಪಂದ್ಯ ಗೆದ್ದು ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿತ್ತು.

ಕೊಹ್ಲಿಗಿಂತ ಮುಂಚೆ ಅಂದರೆ 4,5ನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಬಂದಿದ್ದರು. ಅಂತಿಮ ಮೂರು ಎಸೆತ ಬಾಕಿಯಿರುವಾಗ ಬ್ಯಾಟ್ ಎತ್ತಿಕೊಂಡ ಕೊಹ್ಲಿ ಬೇಗನೆ ಔಟಾದರಾದರೂ ಆರಂಭಿಕರಾಗಿ ಬ್ಯಾಟಿಂಗ್ ಗಿಳಿದಿದ್ದ ರೋಹಿತ್ ಶರ್ಮಾ (97/61) ಮತ್ತು ಶಿಖರ್ ಧವನ್ (74/45) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ತಂಡದ ಕೈ ಹಿಡಿದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸುತ್ತ ಕೊಹ್ಲಿ, 'ನಾವು ಉತ್ತಮ ಮಾಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ. ಐರ್ಲೆಂಡ್ ಮಾತ್ರ ಅಲ್ಲ, ಮುಂದಿನ ಇಂಗ್ಲೆಂಡ್ ಸರಣಿಯಲ್ಲೂ ಇಂಥದ್ದೇ ಬ್ಯಾಟಿಂಗ್ ಕ್ರಮಾಂಕ ಅನುಸರಿಸಲು ಯೋಚಿಸಿದ್ದೇವೆ. ಹಾಗಂತ ಸಂದರ್ಭಕ್ಕೆ ತಕ್ಕಂತೆ ಕ್ರಮಾಂಕದಲ್ಲಿ ಬದಲಾವಣೆ ಮಾಡುವತ್ತಲೂ ನಮ್ಮ ಯೋಚನೆಯಿದೆ' ಎಂದರು.

Story first published: Thursday, June 28, 2018, 15:20 [IST]
Other articles published on Jun 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+