ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಭಾರತದ ನಾಯಕ ಕೊಹ್ಲಿಗೆ ಗಾಯದ ಭಯ!

Virat Kohli Says Suffering From Back Niggles Since 2011

ಸಿಡ್ನಿ, ಜನವರಿ 2: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ಗುರುವಾರ (ಜನವರಿ 3) ಆರಂಭಗೊಳ್ಳಲಿರುವ ಭಾರತ vs ಆಸ್ಟ್ರೇಲಿಯಾ 4ನೇ ಮತ್ತು ಅಂತಿಮ ಟೆಸ್ಟ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಗಾಯದ ಭಯ ಕಾಡುತ್ತಿದೆ. ಇದನ್ನು ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಅಲಭ್ಯಸಿಡ್ನಿ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಅಲಭ್ಯ

ಬುಧವಾರ (ಜನವರಿ 2) ಮಾಧ್ಯಮದೊಂದಿಗೆ ಮಾತನಾಡುತ್ತ ಕೊಹ್ಲಿ, 'ಬೆನ್ನು ಸೆಳೆತದ ಸಮಸ್ಯೆಯಿದೆ. ಇದೇನು ಹೊಸತೇನಲ್ಲ, 2011ರಿಂದಲೂ ಸಮಸ್ಯೆ ಬೆನ್ನಿಗಂಟಿಕೊಂಡಿತ್ತು' ಎಂದರು. ಕಳೆದ ವಾರ ಮೆಲ್ಬರ್ನ್ ಟೆಸ್ಟ್ ನ ಎರಡನೇ ದಿನದಾಟದ ವೇಳೆಯೂ ಕೊಹ್ಲಿ ಬೆನ್ನು ನೋವಿನ ಚಿಕಿತ್ಸೆಗೆ ಒಳಗಾಗಿದ್ದರು.

ಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XIಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XI

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಮುನ್ನಡೆಯಲ್ಲಿದೆ. ಕಡೆಯ ಪಂದ್ಯ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಐತಿಹಾಸಿಕ ಸರಣಿ ಭಾರತದ ವಶವಾಗಲಿದೆ. ಆಸೀಸ್‌ ನೆಲದಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಸುಮಾರು 76 ವರ್ಷಗಳು ಕಳೆದಿವೆ.

ಭಾರತ ಟೆಸ್ಟ್ ತಂಡದಲ್ಲಿ ಕೊಹ್ಲಿ, ತೇಚೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಜಸ್‌ ಪ್ರೀತ್ ಬೂಮ್ರಾ, ಆರ್‌ ಅಶ್ವಿನ್ ಇವೇ ಪ್ರಮುಖ ಹೆಸರುಗಳು. ಇದರಲ್ಲಿ ಅಶ್ವಿನ್ ಹೆಸರೂ ಕೂಡ ಗಾಯದ ಕಾರಣ ಆಡುವ 11 ಆಟಗಾರರ ತಂಡದಲ್ಲಿ ಅನಿಶ್ಚಿತ ಎನಿಸಿದೆ. ಕೊಹ್ಲಿಯೂ ತಂಡದಿಂದ ಹೊರ ನಿಂತರೆ ತಂಡಕ್ಕೆ ನಷ್ಟವಾಗಲಿದೆ.

ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?! ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!

30ರ ಹರೆಯದ ಕೊಹ್ಲಿಗೆ ಈ ಬೆನ್ನು ನೋವು ಇಂಗ್ಲೆಂಡ್‌ ಟೆಸ್ಟ್ ವೇಳೆಯೂ ಮರುಕಳಿಸಿತ್ತು. ದ್ವಿತೀಯ ಟೆಸ್ಟ್‌ ಆಡುತ್ತಿದ್ದ ಕೊಹ್ಲಿ ಗಾಯದ ಕಾರಣ ಮೈದಾನದಿಂದ ಹೊರ ನಡೆಯುವಂತಾಗಿತ್ತು. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿಗೆ ಅಂತಿಮ ಟೆಸ್ಟ್‌ ಹೊತ್ತಿಗೇ ಬೆನ್ನು ನೋವಿನ ಭೀತಿ ಆರಂಭವಾಗಿದೆ. ಆದರೆ ಕೊಹ್ಲಿ ತಂಡದ ಪರ ಆಡುವುದು ಬಹುತೇಕ ಖಚಿತವೆ.

Story first published: Wednesday, January 2, 2019, 14:11 [IST]
Other articles published on Jan 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X