ಇನ್ನೇನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್‌ಗೆ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಬೇಕಿದೆ. ಈ ತಂಡದಲ್ಲಿ ಅನುಭವಿ ವಿರಾಟ್ ಕೊಹ್ಲಿ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕಾ, ಬೇಡವಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ವಿರಾಟ್ ಕೊಹ್ಲಿ ತಮ್ಮ ಸ್ಥಿರ ಪ್ರದರ್ಶನದಿಂದಲೇ ಬಿಸಿಸಿಐ ಆಯ್ಕೆ ಸಮಿತಿಗೆ ಸಂದೇಶ ರವಾನಿಸುತ್ತಿದ್ದಾರೆ. ಅಲ್ಲದೆ ಇನ್ನೊಂದು ಅವಕಾಶವನ್ನು ನನಗೆ ಕೊಡಿ ನಾನು ಭಾರತಕ್ಕೆ ಟಿ20 ವಿಶ್ವಕಪ್ ಮುಕುಟ ತೊಡಿಸುವಲ್ಲಿ ಶ್ರಮಿಸುವೆ ಎಂದು ಸಾರಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ಗೆಲುವು ದಾಖಲಿಸಿತು. ಆದರೆ ವಿರಾಟ್ ಕೊಹ್ಲಿ ತಮ್ಮ ಕಲಾತ್ಮಕ ಆಟದಿಂದಲೇ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಪಂಜಾಬ್ ವಿರುದ್ಧ ಅಮೋಘ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ, ಕೆಕೆಆರ್ ವಿರುದ್ಧವೂ ಅಜೇಯ 83 ರನ್ ಬಾರಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಇವರ ಅಮೋಘ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 4 ಸಿಕ್ಸರ್ ಸೇರಿವೆ.

ವಿರಾಟ್ ಕೊಹ್ಲಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, ಕೊನೆಯ ಎಸೆದವರೆಗೂ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡರು. ಈ ವೇಳೆ ಅವರು ಸ್ಟಾರ್ ಬೌಲರ್‌ಗಳ ಬೆವರು ಇಳಿಸಿದರು. ತಮ್ಮಲ್ಲಿನ ಬ್ಯಾಟಿಂಗ್ ಕಲೆಯನ್ನು ಅನಾವರಣ ಮಾಡಿದ ಕೊಹ್ಲಿ ಅಬ್ಬರಿಸಿದರು. ಲೆಗ್ ಸೈಡ್ ಏರಿಯಾವನ್ನೇ ಟಾರ್ಗೆಟ್ ಮಾಡಿದ್ದ ಕೊಹ್ಲಿ ತಮ್ಮ ಇನಿಂಗ್ಸ್‌ನ ಅರ್ಧಕ್ಕೂ ಹೆಚ್ಚು ರನ್‌ಗಳನ್ನು ಒಂದೇ ಏರಿಯಾದಲ್ಲಿ ಬಾರಿಸಿದರು.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಫಿಟ್ ಪ್ಲೇಯರ್. ಈ ಅಂಶವನ್ನು ವಿರಾಟ್ ಬಿಸಿಸಿಐಗೆ ಮನವರಿಕೆ ಮಾಡಿಕೊಡಬೇಕಿತ್ತು. ಇದಕ್ಕೆ ಕೆಕೆಆರ್ ಪಂದ್ಯವನ್ನೇ ವೇದಿಕೆಯನ್ನಾಗಿ ಮಾಡಿಕೊಂಡರು. ವಿರಾಟ್ ಈ ಪಂದ್ಯದಲ್ಲಿ ಎರಡು ಬಾರಿ ರನ್ ಔಟ್ ಆಗುವ ಸಾಧ್ಯತೆ ಇತ್ತು. ಆದರೆ ಕೊಹ್ಲಿ ಚುರುಕುತನದಿಂದಾಗಿ ಔಟ್ ಆಗಲಿಲ್ಲ. ನರೈನ್ ಎಸೆದ 14.5 ಓವರ್‌ನಲ್ಲಿ ಪಾಯಿಂಟ್‌ಗೆ ಚೆಂಡನ್ನು ಅಟ್ಟಿ ಎರಡು ರನ್ ಕದ್ದರು. ಇವರು ಫುಲ್ ಲೆಂಥ್ ಡ್ರೈವ್ ಮಾಡಿದ್ದರಿಂದಲೇ ಔಟ್ ಆಗಲಿಲ್ಲ. ಇನ್ನಿಂಗ್ಸ್ ಕೊನೆ ಓವರ್‌ನ ಮೊದಲ ಎಸೆತದಲ್ಲೂ ಇಂತಹದ್ದೇ ಒಂದು ದೃಶ್ಯ ಕಂಡು ಬಂದಿತು. ಸ್ಟಾರ್ಕ್ ಎಸೆತವನ್ನು ಮಿಡ್‌ವಿಕೆಟ್‌ನತ್ತ ನೂಕಿದ ವಿರಾಟ್ ಚುರುಕಾಗಿ ಎರಡು ರನ್ ಪಡೆದರು. ಡೈರೆಕ್ಟ್ ಥ್ರೋ ಎಸೆಯುವ ಮುನ್ನವೇ ವಿರಾಟ್ ಬ್ಯಾಟ್ ಕ್ರೀಸ್ ದಾಟಿ ಆಗಿತ್ತು.

ವಿರಾಟ್ ಕೊಹ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆಡಿದ ಧಾಟಿಯನ್ನು ನೋಡಿದರೆ, ಇವರು ಬ್ರೇಕ್ ತೆಗೆದುಕೊಂಡು ಮೈದಾನಕ್ಕೆ ಬಂದಾಗಲೆಲ್ಲಾ ಹೊರ ಅವತಾರದಲ್ಲೇ ಕಂಡು ಬಂದಂತೆ ಇತ್ತು. ಐಪಿಎಲ್‌ನಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿರುವ ವಿರಾಟ್, ನನಗೂ ಒಂದು ಚಾನ್ಸ್ ನೀಡಿ ನಾನು ಭಾರತಕ್ಕೆ ಕಪ್ ತೊಡಿಸುವಲ್ಲಿ ಶ್ರಮಿಸುವೆ ಎಂಬಂತಿತ್ತು.
ವಿರಾಟ್ ಕೊಹ್ಲಿ ಅವರ ಅನುಭವ, ಪಂದ್ಯವನ್ನು ರೀಡ್ ಮಾಡುವ ಶಕ್ತಿ, ಪರಿಸ್ಥಿತಿಗೆ ತಕ್ಕಂತೆ ಇನ್ನಿಂಗ್ಸ್ ಬಿಲ್ಡ್ ಮಾಡುವ ಕಲೆ, ಪರಿಸ್ಥಿತಿಗೆ ತಕ್ಕಂತೆ ಸ್ಟ್ರೋಕ್ ಎಬಿಲಿಟ್, ಒಂದು ಕಡೆಯಲ್ಲಿ ವಿಕೆಟ್ ಪಟಪಟನೇ ಬೀಳುತ್ತಲ್ಲಿದ್ದರೂ ನಿಂತು ಆಡುವ ಧೈರ್ಯ, ಇನ್ನಿಂಗ್ಸ್ ಬೆಳೆಸುವ ಧಾಟಿ, ಎದುರಾಳಿಗೆ ಕಾಡುವ ರೀತಿ, ಶಾಟ್ ಸೆಲಕ್ಷನ್, ಟಿ20 ಕ್ರಿಕೆಟ್‌ನಲ್ಲಿ ಇವರ ಸ್ಟ್ರೈಕ್ ರೇಟ್, ಸ್ಟ್ರೈಕ್ ರೊಟೆಟ್ ಮಾಡುವ ಎಬಿಲಿಟಿ, ಈ ಎಲ್ಲ ಅಂಶಗಳು ವಿರಾಟ್ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುವಂತೆ ಒತ್ತಾಯಿಸುತ್ತಿವೆ.