ರಾಹುಲ್ ಕಾಂತಾರ ಸೆಲೆಬ್ರೇಷನ್‌ಗೆ ತವರಿನಲ್ಲಿ ಹೇಗೆ ಉತ್ತರಿಸುತ್ತಾರೆ ಕೊಹ್ಲಿ?
18ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಮೋಘ ಬ್ಯಾಟಿಂಗ್ ನಡೆಸಿದ್ದ ಕೆಎಲ್ ರಾಹುಲ್ ಜಯದಲ್ಲಿ ಮಿಂಚಿದ್ದರು. ಇವರು ಈ ಜಯದ ಮೂಲಕ ಮಾಡಿದ ಸೆಲೆಬ್ರೇಷನ್ ಎಲ್ಲರ ಚಿತ್ತ ಕದ್ದಿತ್ತು. ಕಾಂತಾರ ಸ್ಟೈಲ್ ಸೆಲೆಬ್ರೇಷನ್ ಮಾಡಿದ್ದ ರಾಹುಲ್ ಇದು ನನ್ನ ಅಂಗಳ ಎಂದು ಸಾರಿ ಹೇಳಿದ್ದರು. ಏಪ್ರಿಲ್ 10ರ ಪಂದ್ಯ ನಡೆದು ಇಂದಿಗೆ 17 ದಿನಗಳು ಕಳೆದಿವೆ. ಭಾನವಾರ (ಏ.27) ರಂದು ರಾಹುಲ್ ಸೆಲೆಬ್ರೇಷನ್‌ಗೆ ವಿರಾಟ್ ಯಾವ ರೀತಿ ಪ್ರತ್ಯುತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಭಾನುವಾರ ಪಂದ್ಯ ಡೆಲ್ಲಿಯಲ್ಲಿ ನಡೆಯಲಿದೆ. ಅದ್ರಲ್ಲೂ ದೆಹಲಿ ವಿರಾಟ್ ಅವರ ಮನೆಯ ಅಂಗಳ.
ಈ ಬಾರಿ ಆರ್‌ಸಿಬಿ ಅಮೋಘ ಫಾರ್ಮ್‌ನಲ್ಲಿದೆ. ತವರಿನಾಚೆ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಇತ್ತೀಚಿಗೆ ರಾಜಸ್ಥಾನ ರಾಯಲ್ಸ್ ವಿರುದ್ಧವೂ ತವರಿನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈಗ ಪ್ಲೇ ಆಫ್‌ಗೆ ಹತ್ತಿರವಾಗಲು ದೆಹಲಿ ಪಂದ್ಯ ಮಹತ್ವದಾಗಿದೆ. ಈಗಾಗಲೇ ಡೆಲ್ಲಿ, ಗುಜರಾತ್, ಆರ್‌ಸಿಬಿ ತಂಡಗಳು ತಲಾ 12 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಟಾಪ್‌ನಲ್ಲಿವೆ. ಹೀಗಾಗಿ ಭಾನುವಾರ ಬಲಿಷ್ಠ ತಂಡಗಳ ಕಾದಾಟ ನೋಡಲು ಸಿಗಬಹುದಾಗಿದೆ.

ಏಪ್ರಿಲ್ 10 ರಂದು ಬೆಂಗಳೂರಿನ ಎಂ ಚಿನಸ್ವಾಮಿ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ರಾಹುಲ್ ಅಜೇಯ 93 ರನ್‌ಗಳ ಇನಿಂಗ್ಸ್ ಕಟ್ಟಿ ತಂಡದ ಜಯದಲ್ಲಿ ಮಿಂಚಿದ್ರು. ಈ ಜಯದ ಮೂಲಕ ಕಾಂತಾರ ರೀತಿ ಸೆಲೆಬ್ರೇಷನ್ ಮಾಡಿ ಗಮನ ಸೆಳೆದಿದ್ದರು.
ಸೆಲಬ್ರೇಷನ್ ಡೇ
ಇದಾದ ಬಳಿಕ ಪಂಜಾಬ್ ಕಿಂಗ್ಸ್ ಸಹ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿತ್ತು. ಈ ವೇಳೆ ಶ್ರೇಯಸ್ ಅಯ್ಯರ್ ಸೆಲೆಬ್ರೇಷನ್‌ಗೆ, ಪಂಜಾಬ್‌ನಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್, ಅಯ್ಯರ್‌ಗೆ ತಿರುಗೇಟು ನೀಡಿದ್ದರು. ಭಾನುವಾರ ವಿರಾಟ್ ಕೊಹ್ಲಿ ಅವರ ಸೆಲೆಬ್ರೇಷನ್ ಯಾವ ರೀತಿ ಇರುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಅಂಕ ಪಟ್ಟಿಯಲ್ಲಿ ಬಡ್ತಿಗಾಗಿ ಫೈಟ್
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡಗಳು ಭಾನುವಾರ ಅಂಕ ಪಟ್ಟಿಯಲ್ಲಿ ತಮ್ಮ ತಮ್ಮ ಸ್ಥಾನವನ್ನು ಟಾಪ್‌ನಲ್ಲಿ ಭದ್ರ ಪಡಿಸಿಕೊಳ್ಳಲು ಫೈಟ್ ನಡೆಸಲಿವೆ. ಡೆಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಸಹ 9 ಪಂದ್ಯಗಳಲ್ಲಿ 6 ಜಯ ದಾಖಲಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು ಗೆಲುವು ದಾಖಲಿಸುವ ತಂಡ ಪ್ಲೇ ಆಫ್‌ಗೆ ಒಂದು ಕಾಲು ಸುಲಭವಾಗಿ ಈಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications