IPL 2025: ರೋಹಿತ್ ಹಿಂದಿಕ್ಕಿ "ಐಪಿಎಲ್‌ನ ಹಿಟ್‌ಮ್ಯಾನ್' ಆಗಲು ವಿರಾಟ್ ಕೊಹ್ಲಿ ತಯಾರಿ
ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ಸ್ ಐಪಿಎಲ್ 2025 ಕ್ಕೆ ತಯಾರಿ ಆರಂಭಿಸಿದ್ದಾರೆ. ಮೈದಾನದಲ್ಲಿ ಇಬ್ಬರು ದೈತ್ಯರ ನಡುವೆ ಸ್ಪರ್ಧೆ ಮಾತ್ರವಲ್ಲ, ದಾಖಲೆ ಪಟ್ಟಿಯಲ್ಲಿಯೂ ಪೈಪೋಟಿ ಇರುತ್ತದೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ಹಿಟ್‌ಮ್ಯಾನ್ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ.
ಐಪಿಎಲ್ 2025ರಲ್ಲಿ ರೋಹಿತ್ ಶರ್ಮಾ ಅವರ ಸಿಕ್ಸರ್‌ಗಳ ದಾಖಲೆ ಅಪಾಯದಲ್ಲಿದೆ. ಕ್ಲಾಸಿಕ್ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ಕೂಡ ಐಪಿಎಲ್‌ನಲ್ಲಿ ಸಾಕಷ್ಟು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈಗ ಅವರು ರೋಹಿತ್ ಶರ್ಮಾ ದಾಖಲೆಗೆ ತುಂಬಾ ಹತ್ತಿರದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‍ಗಳನ್ನು ಬಾರಿಸಿರುವ ದಾಖಲೆಯನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಆದರೆ ಐಪಿಎಲ್‌ನಲ್ಲಿ ಸಿಕ್ಸರ್‌ಗಳ ರಾಜ ಕ್ರಿಸ್ ಗೇಲ್. ಇದಾದ ನಂತರ 3 ಭಾರತೀಯ ಹೆಸರುಗಳಿದೆ. ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಂತರದಲ್ಲಿದ್ದಾರೆ. ಕ್ರಿಸ್ ಗೇಲ್ ಐಪಿಎಲ್ 2025 ರ ಭಾಗವಾಗಿಲ್ಲದಿರಬಹುದು, ಆದರೆ ಇದರ ಹೊರತಾಗಿಯೂ, ಈ ಸೀಸನ್‌ನಲ್ಲಿ ಅವರ ದಾಖಲೆ ಸದ್ಯಕ್ಕೆ ಸೇಫ್ ಆಗಿದೆ.
ಇದೀಗ ದಾಖಲೆಯ ಸಿಕ್ಸರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಪೈಪೋಟಿ ನಡೆಯಲಿದೆ. ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ 2025 ರಲ್ಲಿ ಕೆಕೆಆರ್ ಮತ್ತು ಆರ್‍ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಮುಂಬೈ ಇಂಡಿಯನ್ಸ್ ಭಾಗವಾಗಿರುವ ರೋಹಿತ್ ಶರ್ಮಾ ಮಾರ್ಚ್ 23 ರಂದು ಮೈದಾನಕ್ಕಿಳಿಯಲಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾಗಿಂತ ಕೇವಲ 8 ಸಿಕ್ಸರ್‌ಗಳಿಗಿಂತ ಹಿಂದಿದ್ದಾರೆ. ಐಪಿಎಲ್ 2025ರ ಅಂತ್ಯದವರೆಗೆ ಯಾರು ಅಗ್ರಸ್ಥಾನದಲ್ಲಿ ಇರುತ್ತಾರೆ ಎಂಬುದು ಕುತೂಹಕ ಮೂಡಿಸಿದೆ.
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ಲಯ ಕಂಡುಕೊಂಡಿದ್ದಾರೆ. ಹೀಗಾಗಿ ಐಪಿಎಲ್ 2025ರಲ್ಲಿ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕ್ರಿಸ್ ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 142 ಪಂದ್ಯಗಳನ್ನು ಆಡಿದ್ದು, 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್, ಕ್ರಿಸ್ ಗೇಲ್ ಗಿಂತ 77 ಸಿಕ್ಸರ್ ಗಳ ಹಿಂದಿದ್ದಾರೆ. ರೋಹಿತ್ 257 ಐಪಿಎಲ್ ಪಂದ್ಯಗಳಲ್ಲಿ 280 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಕೊಹ್ಲಿ 252 ಐಪಿಎಲ್ ಪಂದ್ಯಗಳಲ್ಲಿ 272 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಎಂಎಸ್ ಧೋನಿ ಇದುವರೆಗೆ 264 ಐಪಿಎಲ್ ಪಂದ್ಯಗಳನ್ನು ಆಡಿದ್ದು, 252 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications