Virat Kohli: ದಶಕದ ಬಳಿಕ ರಣಜಿ ಆಡಲಿರುವ ವಿರಾಟ್ ಕೊಹ್ಲಿ: ಈ ಪಂದ್ಯವನ್ನು ನೋಡುವುದು ಹೇಗೆ?
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 12 ವರ್ಷದ ಬಳಿಕ ರಣಜಿ ಟ್ರೋಫಿ ಪಂದ್ಯಗಳನ್ನು ಆಡಲಿದ್ದಾರೆ. ಇವರ ಆಟವನ್ನು ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯತ್ತಿದ್ದಾರೆ. ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ, ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೈದಾನಕ್ಕೆ ಪ್ರವೇಶಿಸಲಿದ್ದಾರೆ.
12 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ರಣಜಿ ಆಡಲು ಸಿದ್ಧರಾಗುತ್ತಿರುವುದರಿಂದ ಕುತೂಹಲ ಮನೆ ಮಾಡಿದೆ. ವಿರಾಟ್ ತಮ್ಮ ಅವರನ್ನು ಒಮ್ಮೆ ಕಣ್ಣು ತುಂಬಿಕೊಂಡರೆ ಸಾಕು ಎಂದು ಭಾವಿಸಿದ್ದ ಆಟಗಾರರ ಜೊತೆ ಇಂದು ಕೊಹ್ಲಿ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ರಣಜಿ ಟ್ರೋಫಿಯ "ಡಿ" ಗುಂಪಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಆಡಿರುವ 6 ಪಂದ್ಯಗಳಲ್ಲಿ 14 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಇಷ್ಟೇ ಪಂದ್ಯಗಳಲ್ಲಿ ರೈಲ್ವೇಸ್ 2 ಪಂದ್ಯ ಗೆದ್ದಿದ್ದು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ದೆಹಲಿ ತಂಡದ ಪರ ವಿರಾಟ್ ದಶಕಗಳ ಬಳಿಕ ಮೈದಾನಕ್ಕೆ ಇಳಿಯಲಿದ್ದು ರೋಚಕತೆ ಮನೆ ಮಾಡಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೆ ಬಿಸಿಸಿಐ ಸಹ ನಿಮ್ಮ ಫಾರ್ಮ್ ಕಂಡು ಕೊಳ್ಳಲು ಅನುಭವಿ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡುವುದು ಮುಖ್ಯ ಎಂದು ತಿಳಿಸಿತ್ತು. ಇದನ್ನು ಅರಿತ ಹಿರಿಯ ಆಟಗಾರರು ಲಯಕ್ಕೆ ಮರಳಲು ದೇಶೀಯ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಂತೆ ಈಗಾಗಲೇ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ದೇಶೀಯ ಟೂರ್ನಿಯಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.
ಬಿಗಿ ಭದ್ರತೆ
ಈಗಾಗಲೇ ದೆಹಲಿಯ ಮೈದಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಈಗಾಗಲೇ ಮೈದಾನದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

10 ಸಾವಿರ ಆಸನದ ವ್ಯವಸ್ಥೆ
ವಿರಾಟ್ ಕೊಹ್ಲಿ ಬಹು ದಿನಗಳ ಬಳಿಕ ರಣಜಿ ಆಡಲು ಸಿದ್ಧರಾಗಿರುವದರಿಂದ ವೀಕ್ಷಕರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ. ಪಂದ್ಯವನ್ನು ನೋಡಲು ಬರುವ ಅಭಿಮಾನಿಗಳಿಗೆ ಉಚಿತವಾಗಿ ಪಂದ್ಯದ ಮಜೆ ಪಡೆಯಬಹುದು. ಅಲ್ಲದೆ ಅಭಿಮಾನಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ಗೇಟ್‌ಗಳನ್ನು ಸಹ ಓಪನ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ದೆಹಲಿ ಕ್ಯಾಂಪ್ ಸೇರಿದ್ದರಿಂದ ತಂಡದ ಮನೋಬಲ ಸಹ ಹೆಚ್ಚಾಗಿದೆ.
ಸಮಯ: ಬೆಳಿಗ್ಗೆ 9:30
ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ನೇರ ಪ್ರಸಾರ: ಜಿಯೋಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್
ದೆಹಲಿ ತಂಡ: ಆಯುಷ್ ಬದೋನಿ (ನಾಯಕ), ವಿರಾಟ್ ಕೊಹ್ಲಿ, ಸನತ್ ಸಂಗ್ವಾನ್, ಅರ್ಪಿತ್ ರಾಣಾ, ಯಶ್ ಧುಲ್, ಜಾಂಟಿ ಸಿಧು, ಹಿಮ್ಮತ್ ಸಿಂಗ್, ನವದೀಪ್ ಸೈನಿ, ಮಣಿ ಗ್ರೆವಾಲ್, ಹರ್ಷ್ ತ್ಯಾಗಿ, ಸಿದ್ಧಾಂತ್ ಶರ್ಮಾ, ಶಿವಂ ಶರ್ಮಾ, ಪ್ರಣವ್ ರಾಜವಂಶಿ, ವೈಭವ್ ಕಾಂಡ್ಪಾಲ್, ಮಾಯಾಂಕ್ ಗುಸೇನ್, ಗಗನ್ ವ್ಯಾಟ್ಸ್, ಸುಮಿತ್ ಮಾಥುರ್, ರಾಹುಲ್ ಗೆಹ್ಲೋಟ್, ಜಿತೇಶ್ ಸಿಂಗ್, ವಂಶ್ ಬೇಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications