ವಿರಾಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 2027ರ ವಿಶ್ವಕಪ್ ಬಗ್ಗೆ ಬಿಗ್ ಅಪ್‌ಡೇಟ್
ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಈಗ ಇದೇ ಪ್ರದರ್ಶನವನ್ನು ವಿರಾಟ್ ಐಪಿಎಲ್‌ನಲ್ಲೂ ಮುಂದುವರೆಸಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು. ಇವರ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಇದೆ. ಈ ಕುತೂಹಲಕ್ಕೆ ವಿರಾಟ್ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ, ಅಲ್ಲಿಯ ಆಯೋಜಕರು ಕೇಳಿದ ಪ್ರಶ್ನೆಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ಈ ಉತ್ತರ ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರ ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದೇ ವೇಳೆ ವಿರಾಟ್ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.

ಏಕದಿನ ವಿಶ್ವಕಪ್ ಬಗ್ಗೆ ವಿರಾಟ್ ಹೇಳಿದ್ದೇನ?
ನಿಮ್ಮ ಮುಂದಿನ ದೊಡ್ಡ ಹೆಜ್ಜೆ ಏನು ಎಂದು ಕೇಳಲಾದ ಪ್ರಶ್ನೆಗೆ, ವಿರಾಟ್ 2027ರ ವಿಶ್ವಕಪ್ ಗೆಲ್ಲುವುದೇ ತಮ್ಮ ಮುಂದಿನ ದೊಡ್ಡ ಹೆಜ್ಜೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಇದೇ ಕಾರಣಕ್ಕೆ ಈ ವಿಡಿಯೋವನ್ನು ಅಭಿಮಾನಿಗಳು ಸಾಕಷ್ಟು ಲೈಕ್ ಮಾಡಿದ್ದರು. ಈ ವಿಡಿಯೋದಲ್ಲಿ ವಿರಾಟ್ 2027ರಲ್ಲಿ ಆಡುವುದು ಅಷ್ಟೇ ಅಲ್ಲ ಅದನ್ನು ಗೆಲ್ಲುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದ ವರೆಗೆ ಅಜೇಯ ಓಟವನ್ನು ಮುಂದುವರೆಸಿದ್ದ ಟೀಮ್ ಇಂಡಿಯಾ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಈ ಸೋಲಿನ ನೋವು ಆಟಗಾರರು, ಅಭಿಮಾನಿಗಳಿಗೆ ಬಹುವಾಗಿ ಕಾಡಿತ್ತು. ಈ ಸರಣಿಯಲ್ಲಿ ವಿರಾಟ್ ಆಡಿದ 11 ಪಂದ್ಯಗಳಲ್ಲಿ 95.62ರ ಸರಾಸರಿಯಲ್ಲಿ 3 ಶತಕ ಹಾಗೂ 3 ಅರ್ಧಶತಕ ಒಳಗೊಂಡಂತೆ 765 ರನ್ ಗಳಿಸಿದ್ದಾರೆ. ಈ ಮೂಲಕ ಇವರ ಆಟಕ್ಕೆ ಸರಣಿ ಶ್ರೇಷ್ಠ ಗರಿ ಸಹ ಸಂದಿದೆ.
ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡಿದ್ದರಿಂದ ವಿರಾಟ್ ಕೊಹ್ಲಿ ಹತಾಶರಾಗಿದ್ದರು. ಅಲ್ಲದೆ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಲೂ ಇಲ್ಲ. ಕಣ್ಣಂಚಲ್ಲಿ ನೀರು ತುಂಬಿಕೊಂಡ ವಿರಾಟ್, ಸ್ಟೇಜ್‌ನಿಂದ ಕೆಳಗೆ ಇಳಿದಿದ್ದರು. ಅಂದಿನಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ ಏಕದಿನ ಪಂದ್ಯಗಳನ್ನು ಆಡುತ್ತದಾ ಎಂಬ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಲೇ ಇದ್ದವು. ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಸ್ಥಿರ ಪ್ರದರ್ಶನ ನೀಡಿದ್ದರು. ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು, ಫೈನಲ್ ಪಂದ್ಯದಲ್ಲಿ ಕಿವೀಸ್ ತಂಡವನ್ನು ಮಣಿಸಿದ್ದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications