For Quick Alerts
ALLOW NOTIFICATIONS  
For Daily Alerts
 

ರಕ್ಷಾಬಂಧನಕ್ಕೆ ವಿರಾಟ್ ಕೊಹ್ಲಿ ಹಂಚಿಕೊಂಡ ಮುದ್ದಾದ ಫೋಟೊ

virat kohli shared photo with his elder sister on Raksha bandhan day

ನವದೆಹಲಿ, ಆಗಸ್ಟ್ 27: ರಕ್ಷಾ ಬಂಧನದ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಫೋಟೊ ಸಾಕಷ್ಟು ವೈರಲ್ ಆಗಿದೆ.

ರಕ್ಷಾ ಬಂಧನದ ದಿನವಾದ ಭಾನುವಾರ (ಆಗಸ್ಟ್ 26) ಕೊಹ್ಲಿ, ತಮ್ಮ ಅಕ್ಕ ಭಾವನಾ ಡಿಂಗ್ರಾ ಜತೆಗೆ ಕೇಕ್ ಕತ್ತಿರಿಸುವ ಬಾಲ್ಯದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಚಿತ್ರ ತೆಗೆದ ಸಂದರ್ಭ ಯಾವುದೆಂದು ಕೊಹ್ಲಿ ತಿಳಿಸಿಲ್ಲ. ಟೇಬಲ್ ಮೇಲೆ ಕುಳಿತ ಭಾವನಾ, ಕೊಹ್ಲಿ ಕೈ ಹಿಡಿದು ಕೇಕ್ ಕತ್ತರಿಸುತ್ತಿದ್ದರೆ, ಹಿನ್ನೆಲೆಯಲ್ಲಿ ಅವರ ಅಮ್ಮ ಸರೋಜ್ ಕೊಹ್ಲಿ ಅವರೂ ಇದ್ದಾರೆ.

ಅಕ್ಕ ಭಾವನಾ ಡಿಂಗ್ರಾ ಜತೆಗಿನ ಸುಂದರ ನೆನಪುಗಳು. ಜಗತ್ತಿನಾದ್ಯಂತ ಇರುವ ಎಲ್ಲ ಸಹೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಹಂಚಿಕೊಂಡ ಬಾಲ್ಯದ ಫೋಟೊವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಗುಂಡುಮುಖದ ಕೊಹ್ಲಿಯ ಮುದ್ದಾದ ಫೋಟೊಗೆ 65 ಸಾವಿರಕ್ಕೂ ಹೆಚ್ಚಿನ ಲೈಕ್‌ಗಳು ಬಂದಿವೆ. 4 ಸಾವಿರಕ್ಕೂ ಹೆಚ್ಚು ಮಂದಿ ಅದನ್ನು ರೀಟ್ವೀಟ್ ಮಾಡಿದ್ದಾರೆ.

Story first published: Monday, August 27, 2018, 16:01 [IST]
Other articles published on Aug 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+