ಹಳೆ ಫೋಟೋ ಪೋಸ್ಟ್ ಮಾಡಿ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು!


ನವದೆಹಲಿ, ಅಕ್ಟೋಬರ್ 15: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಾಕಿಕೊಂಡಿದ್ದಾರೆ. ಫೋಟೋದ ಜೊತೆಗ ಸ್ಫೂರ್ತಿಯೆನಿಸುವ ಸಾಲೊಂದನ್ನೂ ಸೇರಿಸಿಕೊಂಡಿದ್ದಾರೆ.
ತನ್ನ ಈಗಿನ ಮತ್ತೆ ಕೆಲ ವರ್ಷಗಳ ಹಿಂದಿನ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿರುವ ವಿರಾಟ್ , 'ನಮ್ಮನ್ನು ನಾವು ನಂಬತೊಡಗಿದರೆ ನಮ್ಮ ಕೈಲಾಗದ್ದು ಯಾವುದೂ ಇಲ್ಲ. ನಮ್ಮನು ನಾವು ನಂಬೋಕೆ ಶುರು ಮಾಡಿಕೊಂಡು ಶ್ರಮಿಸೋಣ' ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಐಸಿಸಿ ನಂ. 1 ರ್ಯಾಂಕ್ ನಲ್ಲಿರುವ ಕೊಹ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನೂ ಹೊಂದಿದ್ದಾರೆ. 29ರ ಹರೆಯದ ಕೊಹ್ಲಿ ತನ್ನ ಎರಡು ವಿಭಿನ್ನ ಚಿತ್ರಗಳನ್ನು ಹಾಕಿರಿರುವುದರಲ್ಲೂ ಒಂದು ಸಂದೇಶವಿದೆ.
ವಿರಾಟ್ ಹಾಕಿರುವ ಎರಡು ಚಿತ್ರಗಳಲ್ಲಿ ಒಂದರಲ್ಲಿ ಕೊಹ್ಲಿ ಕೊಂಚ ಡುಮ್ಮನಾಗಿ ಕಂಡರೆ, ಇನ್ನೊಂದರಲ್ಲಿ ವಿರಾಟ್ ಫುಲ್ ಫಿಟ್ ಕಾಣುತ್ತಾರೆ. ಈ ಚಿತ್ರಗಳ ಪಕ್ಕದಲ್ಲಿ ಹೊಹ್ಲಿ, ಗಮನವನ್ನು ಗುರಿಯತ್ತ ಕೇಂದ್ರೀಕರಿಸಿ ಶತ ಶ್ರಮ ಪಟ್ಟರೆ ಕೈಲಾಗದ ಸಾಧನೆಯೇ ಇಲ್ಲ. ನಮ್ಮನ್ನು ನಾವು ನಂಬುತ್ತ ಶ್ರಮಿಸುತ್ತಲೇ ಇರೋಣ' ಅಂತ ಯಶಸ್ಸಿನ ಗುಟ್ಟು ಬಿಚ್ಚಿಡುವ ಚಿನ್ನದ ಸಾಲೊಂದನ್ನು ಸೇರಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications