ವಿಶ್ವಕಪ್ 2019: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಕಠಿಣ ಅಭ್ಯಾಸ

ಮ್ಯಾನ್ಚೆಸ್ಟರ್, ಜೂನ್ 25: ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಬಳಗ ವೆಸ್ಟ್ ಇಂಡೀಸ್ ಸವಾಲು ಸ್ವೀಕರಿಸಲಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1 ಟೈ ಮಾಡಿಕೊಂಡಿರುವ ಭಾರತಕ್ಕೆ ಜೂನ್ 27ರಂದು ನಡೆಯುವ ಪಂದ್ಯ 6ನೆಯದು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಪಾರಮ್ಯ ಮೆರೆಯುವಲ್ಲಿ ಕೊಹ್ಲಿಯ ಪಾತ್ರವೂ ಮಹತ್ವದ್ದು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಆರಂಭಿಕ ಪಂದ್ಯ ಒಂದನ್ನು ಬಿಟ್ಟು (18 ರನ್) ಉಳಿದ ಮೂರೂ ಪಂದ್ಯಗಳಲ್ಲೂ ತಂಡಕ್ಕೆ ಅರ್ಧ ಶತಕದ (82, 77 ಮತ್ತು 67 ರನ್) ಕೊಡುಗೆ ನೀಡಿದ್ದರು.
ವಿಂಡೀಸ್ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಕೊಹ್ಲಿ, ವೇಟ್ ಲಿಫ್ಟಿಂಗ್ ಅಭ್ಯಾಸ ನಡೆಸುತ್ತಿರುವುದರ ವಿಡಿಯೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ 'ವಿಶ್ರಾಂತಿಯಿಲ್ಲ. ಪರಿಶ್ರಮ ಪಡದೆ ಬೇರೇನನ್ನೂ ಸಾಧಿಸಲಾಗಲ್ಲ' ಎಂದೂ ಬರೆದುಕೊಂಡಿದ್ದಾರೆ.
ಕೆರಿಬಿಯನ್ನರ ಎದುರು ಜಯ ದಾಖಲಿಸಿದರೆ ಭಾರತ ಸೆಮಿಫೈನಲ್‌ನತ್ತ ಒಂದು ಹೆಜ್ಜೆ ಮುಂದಿಡಲಿದೆ. ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ದಾಖಲೆಗಳನ್ನು ಸರಿಗಟ್ಟುತ್ತಿರುವ ಕೊಹ್ಲಿಗೆ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಏಕದಿನ ಅತ್ಯಧಿಕ ಶತಕ ವಿಶ್ವ ದಾಖಲೆ ಸರಿದೂಗಿಸಲು ಇನ್ನು 8 ಶತಕಗಳು ಬೇಕಿವೆ. ಕೊಹ್ಲಿ ಸದ್ಯ 41 ಶತಕಗಳನ್ನು ಬಾರಿಸಿದ್ದಾರೆ.
5ರಲ್ಲಿ 4 ಗೆಲುವು ದಾಖಲಿಸಿರುವ ಭಾರತ ಸದ್ಯ ವಿಶ್ವಕಪ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ವಿಂಡೀಸ್ 6ರಲ್ಲಿ 1 ಗೆಲುವು ಕಂಡಿದೆ. ಹೀಗಾಗಿ ಗುರುವಾರದ (ಜೂನ್ 27) ಪಂದ್ಯದಲ್ಲೂ ಜೇಸನ್ ಹೋಲ್ಡರ್ ಪಡೆಯನ್ನು ಬ್ಲೂ ಬಾಯ್ಸ್ ಬಳಗ ಸೋಲಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications