Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL MVP: ಮುಂಬೈ ಅಂಗಳದಲ್ಲಿ ವಿರಾಟ್‌ ವೀರಾವೇಶ

ಆರ್‌ಸಿಬಿ ತನ್ನ ಕೋಟ್ಯಾಂತರ ಅಭಿಮಾಣಿಗಳಿಗೆ ಸೋಮವಾರ ಹಬ್ಬದೂಟವನ್ನು ಹಾಕಿದೆ. ಮೊದಲು ಚೆನ್ನೈನಲ್ಲಿ 17 ವರ್ಷಗಳ ಬಳಿಕ ಗೆಲುವು ದಾಖಲಿಸಿದ್ದ ಆರ್‌ಸಿಬಿ, 10 ವರ್ಷದ ಬಳಿಕ ಮುಂಬೈನಲ್ಲಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಹಲವು ಆಟಗಾರರು ಕಾಣಿಕೆ ಅಪಾರವಾಗಿದೆ. ಅದರಲ್ಲಿ ವಿರಾಟ್‌ ಕೊಹ್ಲಿ, ರಜತ್‌ ಪಟಿದಾರ್‌, ಜಿತೇಶ್ ಶರ್ಮಾ ತಮ್ಮ ಬ್ಯಾಟಿಂಗ್‌ನಿಂದ ತಂಡಕ್ಕೆ ಆಧಾರವಾದರೆ, ಕೊನೆಯ ಓವರ್‌ನಲ್ಲಿ ಕೃನಾಲ್‌ ಪಾಂಡ್ಯ ಬಿಗುವಿನ ದಾಳಿ ನಡೆಸಿ ಆರ್‌ಸಿಬಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದರು. ಈ ವೇಳೆ ಆರ್‌ಸಿಬಿ ಗೆಲುವಿನಲ್ಲಿ ಮಿಂಚಿದ್ದು ವಿರಾಟ್‌ ಕೊಹ್ಲಿ.

ಆರ್‌ಸಿಬಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಲು ಬಂದಾಗ ತಂಡಕ್ಕೆ ಆರಂಭದಲ್ಲೇ ಆಘತ ಕಾದಿತ್ತು. ಫಿಲ್ ಸಾಲ್ಟ್ ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಔಟ್ ಆದರು. ಆರಂಭಿಕ ಆಘಾತದಿಂದ ಕಂಗೆಡದ ಆರ್‌ಸಿಬಿ ಬ್ಯಾಟರ್ಸ್‌ ಅಬ್ಬರಿಸಿದರು. ವಿರಾಟ್‌ ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್‌ ಮನಮೋಹಕ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು, ರನ್‌ ರೇಟ್‌ ಸ್ಥಿರವಾಗಿ ಇಟ್ಟುಕೊಳ್ಳುವಲ್ಲಿ ನೆರವಾಯಿತು. ಈ ಜೋಡಿ 91 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.37 ರನ್ ಬಾರಿಸಿದ್ದ ದೇವದತ್ ಪಡಿಕ್ಕಲ್ ವಿಘ್ನೇಶ್ ಪುತ್ತೂರ್‌ಗೆ ವಿಕೆಟ್‌ ಒಪ್ಪಿಸಿದರು.

Virat Kohli Shines as RCB Ends 10-Year Wait in Mumbai with Thrilling Win Over MI

ರಜತ್‌ ಅರ್ಧಶತಕ

ರಜತ್‌ ಪಟಿದಾರ್‌ ಹಾಗೂ ವಿರಾಟ್‌ ಕೊಹ್ಲಿ ಸಹ ಈ ಪಂದ್ಯದಲ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 31 ಎಸೆತಗಳಲ್ಲಿ 48 ರನ್‌ ಬಾರಿಸಿ ತಂಡಕ್ಕೆ ಆಧಾರವಾಯಿತು. ಈ ವೇಳೆ ವಿರಾಟ್‌ 67 ರನ್‌ ಬಾರಿಸಿ ಔಟ್ ಅದರು. ನಂತರ ಬಂದ ಲಿಯಾಮ್‌ ಲಿವಿಂಗ್‌ಸ್ಟೋನ್ ಬಂದು ಹೋಗುವ ಸಂಪ್ರದಯಾ ಮುಗಿಸಿದರು. ಐದನೇ ವಿಕೆಟ್‌ಗೆ ಜಿತೇಶ್‌ ಶರ್ಮಾ ಹಾಗೂ ರಜತ್ ಪಟಿದಾರ್‌ ಜೋಡಿ ರನ್‌ಗಳನ್ನು ಹಿಗ್ಗಿಸಿತು. ಈ ಜೋಡಿ 27 ಎಸೆತಗಳಲ್ಲಿ 69 ರನ್‌ ಸೇರಿಸಿ ತಂಡದ ಮೊತ್ತ 220 ರನ್‌ಗಳತ್ತ ಸಾಗುವಲ್ಲಿ ನೆರವಾಯಿತು. ರಜತ್ ಪಟಿದಾರ್‌ 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 64 ರನ್‌ ಸಿಡಿಸಿ ಔಟ್ ಆದರು. ಜಿತೇಶ್‌ ಶರ್ಮಾ ಅಜೇಯ 40 ರನ್‌ ಸಿಡಿಸಿದರು.

ಬೌಲಿಂಗ್‌ನಲ್ಲೂ ಜೋಶ್‌ ಹ್ಯಾಜಲ್‌ವುಡ್‌, ಯಶ್‌ ದಾಯಳ್ ತಲಾ 2 ವಿಕೆಟ್ ಕಬಳಿಸಿದರೆ, ಕೃನಾಲ್ ಪಾಂಡ್ಯ 4 ವಿಕೆಟ್ ಕಿತ್ತು ಸಂಭ್ರಮಿಸಿದರು.

ಜವಾಬ್ದಾರಿ ಮರೆಯದ ವಿರಾಟ್

ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲುವಲ್ಲಿ ವಿರಾಟ್‌ ಕೊಹ್ಲಿ ಕೊಡುಗೆ ಅಪಾರ. ತಮ್ಮ ಜೊತೆಗೆ ಬರುತ್ತಿದ್ದ ಬ್ಯಾಟರ್‌ಗಳಿಗೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಆಡಿಸಿಕೊಳ್ಳುತ್ತಿದ್ದು. ಇದೇ ಕಾರಣಕ್ಕೆ ಈ ಸ್ಕೋರ್‌ ಕಲೆ ಹಾಕಲು ನೆರವಾಯಿತು. ಇನ್ನು ವಿರಾಟ್‌ ಮತ್ತೆ ಲಯ ಕಂಡುಕೊಂಡಿದ್ದು ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ.

Story first published: Monday, April 7, 2025, 23:57 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+