For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ಬೇಕು ಎಂದ ಮಿಸ್ಟರ್ ಐಪಿಎಲ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಸ್ಟಾರ್ ಬ್ಯಾಟರ್ ಮತ್ತು ತಮ್ಮ ಮಾಜಿ ಸಹ ಆಟಗಾರ ವಿರಾಟ್ ಕೊಹ್ಲಿಯನ್ನು 2024ರ ಐಸಿಸಿ ಟಿ20 ವಿಶ್ವಕಪ್ ಮುಂದಿರುವಾಗ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬೆಂಬಲಿಸಿದ್ದಾರೆ.

ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯದೊಂದಿಗೆ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಒಟ್ಟು 20 ತಂಡಗಳು ಭಾಗವಹಿಸಲಿವೆ. ಈಗಾಗಲೇ ಐಸಿಸಿ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

Virat Kohli Should Bat at No. 3 in the T20 World Cup 2024 Says Suresh Raina

ಭಾರತ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ 14 ತಿಂಗಳ ಸುದೀರ್ಘ ವಿಶ್ರಾಂತಿಯ ನಂತರ ಭಾರತದ ಟಿ20 ಸೆಟಪ್‌ಗೆ ಮರಳಿದ್ದಾರೆ.

2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕಾಗಿ ಅವರು ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಮುಂದಿನ ಟಿ20 ವಿಶ್ವಕಪ್‌ ಆವೃತ್ತಿಯ ಮೇಲೆ ಕಣ್ಣಿಟ್ಟು, ಇವರಿಬ್ಬರನ್ನು ಭಾರತದ ಟಿ20 ತಂಡದ ಯೋಜನೆಯಲ್ಲಿ ಸೇರಿಸಲಾಗಿದೆ.

ಟಿ20 ವಿಶ್ವಕಪ್‌ನಂತಹ ಹೆಚ್ಚಿನ ಒತ್ತಡದ ಘಟನೆಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಬಹಳ ಮುಖ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

Virat Kohli Should Bat at No. 3 in the T20 World Cup 2024 Says Suresh Raina

ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತುಬ್ಯಾಟಿಂಗ್ ಲೈನ್‌ಅಪ್ ಅನ್ನು ಗಟ್ಟಿಯಾಗಿ ಒದಗಿಸಬೇಕು ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

"3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಅವರ ಅನುಭವವು ಯುಎಸ್ಎ ಮತ್ತು ಕೆರಿಬಿಯನ್‌ನ ಸವಾಲಿನ ಪಿಚ್‌ಗಳಲ್ಲಿ ತಂಡಕ್ಕೆ ಸ್ವಲ್ಪ ಗಟ್ಟಿತನವನ್ನು ತರುತ್ತದೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಅಥವಾ ಶುಭ್ಮನ್ ಗಿಲ್ ಅವರಂತಹ ನಿರ್ಭೀತ ಯುವ ಕ್ರಿಕೆಟಿಗರು ಇದ್ದಾರೆ. ಆದರೆ ರೋಹಿತ್ ಮತ್ತು ಕೊಹ್ಲಿ ತಂಡಕ್ಕೆ ದೊಡ್ಡ ಶಕ್ತಿ ತರಲಿದ್ದಾರೆ," ಎಂದರು.

"ನಾವು ಗುರಿಯನ್ನು ಬೆನ್ನಟ್ಟುವಾಗ ಇವರಿಬ್ಬರ ಉಪಸ್ಥಿತಿಯು ಬಹಳ ಮುಖ್ಯವಾಗಿದೆ. ವಿಶೇಷವಾಗಿ ವಿಶ್ವಕಪ್‌ನಂತಹ ಹೆಚ್ಚಿನ ಒತ್ತಡದ ಪಂದ್ಯಾವಳಿಯಲ್ಲಿ," ಎಂದು ಸುರೇಶ್ ರೈನಾ ಸ್ಪೋರ್ಟ್ಸ್ 18ಗೆ ತಿಳಿಸಿದರು.

ವಿರಾಟ್ ಕೊಹ್ಲಿ ಕಳೆದ 3 ಟಿ20 ವಿಶ್ವಕಪ್‌ಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಎಲ್ಲ ಟೂರ್ನಿಯಲ್ಲೂ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು.

ಇನ್ನು ಭಾರತ ತಂಡವು ಕಳೆದ 14 ತಿಂಗಳುಗಳಲ್ಲಿ ಹಲವಾರು ಯುವ ಆಟಗಾರರನ್ನು ಪ್ರಯತ್ನಿಸಿದೆ. ಅವರಲ್ಲಿ ಶುಭ್ಮನ್ ಗಿಲ್, ತಿಲಕ್ ವರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರಮಾಂಕದ ಅಗ್ರಸ್ಥಾನದಲ್ಲಿ ಬ್ಯಾಟ್ ಮಾಡಿದ್ದಾರೆ.

ಆದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಾಪಸ್ಸಾಗುವಿಕೆ ಆಯ್ಕೆಗಾರರನ್ನು ಮೆಚ್ಚಿಸಲು ಮತ್ತು ಐಸಿಸಿ ಪಂದ್ಯಾವಳಿಯ ಮುನ್ನ ತಮ್ಮನ್ನು ತಂಡದಲ್ಲಿ ಇರಿಸಿಕೊಳ್ಳಲು ಯುವ ಆಟಗಾರರ ಮೇಲೆ ಹೆಚ್ಚಿನ ಒತ್ತಡವನ್ನು ತರುತ್ತದೆ.

ವಿಶ್ವಕಪ್‌ನಲ್ಲಿನ ಪಿಚ್‌ಗಳು ಕಠಿಣ ಆಗಿರುತ್ತವೆ ಮತ್ತು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಅನುಭವವು ಸೂಕ್ತವಾಗಿ ಸಹಾಯಕ್ಕೆ ಬರುತ್ತದೆ ಎಂದು ಸುರೇಶ್ ರೈನಾ ಭಾವಿಸಿದರು.

"ನೀವು ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್ ಮೈದಾನಗಳನ್ನು ನೋಡಿದರೆ, ವಿಕೆಟ್ ಸ್ವಲ್ಪ ಟ್ರಿಕಿ ಆಗಿರುತ್ತದೆ. ಭಾರತ ತಂಡಕ್ಕೆ ರೋಹಿತ್ ಮತ್ತು ಕೊಹ್ಲಿ ಅನುಭವದ ಅಗತ್ಯವಿದೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 12000 ರನ್ ಗಳಿಸಲಿದ್ದಾರೆ," ಎಂದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಅನುಭವಿ ಆಟಗಾರರ ಇತ್ತೀಚಿನ ಫಾರ್ಮ್ ಅನ್ನು ಸುರೇಶ್ ರೈನಾ ಶ್ಲಾಘಿಸಿದರು. ಈ ಜೋಡಿಯು 11 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 765 ರನ್ ಮತ್ತು ರೋಹಿತ್ 597 ರನ್‌ಗಳೊಂದಿಗೆ ಪಂದ್ಯಾವಳಿಯ ಅಗ್ರ 2 ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು.

12000 ಟಿ20 ರನ್‌ಗಳನ್ನು ಪೂರೈಸುವ ಅಂಚಿನಲ್ಲಿರುವ ವಿರಾಟ್ ಕೊಹ್ಲಿಯನ್ನು 2007 ಮತ್ತು 2011ರ ವಿಶ್ವಕಪ್ ವಿಜೇತ ಆಟಗಾರ ಸುರೇಶ್ ರೈನಾ ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ 115 ಪಂದ್ಯಗಳಲ್ಲಿ 4008 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ತಮ್ಮ ಹೆಸರಿಗೆ ಒಂದು ಶತಕ ಮತ್ತು 52.73ರ ಸರಾಸರಿಯಲ್ಲಿ ಟಿ20 ದಾಖಲೆಯನ್ನು ಹೊಂದಿದ್ದಾರೆ.

Story first published: Thursday, January 11, 2024, 20:52 [IST]
Other articles published on Jan 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+