For Quick Alerts
ALLOW NOTIFICATIONS  
For Daily Alerts
 

T20 World Cup: ಸ್ಟ್ರೈಕ್‌ರೇಟ್ ಹೊರತಾಗಿ ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಮಹತ್ವ ತಿಳಿಸಿದ ಲಾರಾ!

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಏಕಾಂಗಿಯಾಗಿ ತನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಏಕೆಂದರೆ, 2024ರ ಐಪಿಎಲ್ ಮುಗಿಯುತ್ತಿದ್ದಂತೆಯೇ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಜೂನ್ 2ರಂದು ಪ್ರಾರಂಭವಾಗಲಿದ್ದು, ಇದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಆಯ್ಕೆಯ ಬಗ್ಗೆ ಯೋಚಿಸುತ್ತಿದ್ದಾರೆ.

Security breach during CM Siddaramaiah campaign video viral


ಇದೇ ವೇಳೆ ವಿರಾಟ್ ಕೊಹ್ಲಿ ಉಪಸ್ಥಿತಿಯು ಸ್ಟ್ರೈಕ್ ರೇಟ್ ಚರ್ಚೆಯನ್ನು ಮೀರಿದೆ ಎಂದು ವೆಸ್ಟ್ ಇಂಡೀಸ್‌ನ ಲೆಜೆಂಡ್ ಬ್ರಿಯಾನ್ ಲಾರಾ ಹೇಳಿದ್ದಾರೆ. ಅಲ್ಲದೆ, ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಗಳಿಸಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಇದು 2009ರಲ್ಲಿ ಆರ್‌ಸಿಬಿ ಪರ ಮನೀಶ್ ಪಾಂಡೆ ಅವರ ಶತಕದೊಂದಿಗೆ ಐಪಿಎಲ್‌ನ ಜಂಟಿ-ನಿಧಾನಗತಿಯ ಶತಕವಾಗಿದೆ.

"ಸ್ಟ್ರೈಕ್ ರೇಟ್ ಕ್ರಮಾಂಕದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು 130-140ರ ಆರಂಭಿಕ ಸ್ಟ್ರೈಕ್-ರೇಟ್ ಉತ್ತಮವಾಗಿದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುತ್ತಿದ್ದರೆ, ಆಗ 150 ಅಥವಾ 160ರ ಸ್ಟ್ರೈಕ್-ರೇಟ್‌ನಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ," ಎಂದು ಬ್ರಿಯಾನ್ ಲಾರಾ ತಿಳಿಸಿದರು.

"ಈ ಐಪಿಎಲ್‌ನಲ್ಲಿ ನೀವು ನೋಡಿದಂತೆ, ಇನ್ನಿಂಗ್ಸ್‌ನ ಕೊನೆಯ ಭಾಗದಲ್ಲಿ ಬ್ಯಾಟ್ಸ್‌ಮನ್‌ಗಳು 200ರ ಸ್ಟ್ರೈಕ್-ರೇಟ್‌ನಲ್ಲಿ ಬಾರಿಸುತ್ತಿದ್ದಾರೆ. ಆದರೆ ಕೊಹ್ಲಿಯಂತಹ ಆರಂಭಿಕ ಆಟಗಾರನಿಗೆ ಯಾವಾಗಲೂ 130ರ ರ ಸ್ಟ್ರೈಕ್-ರೇಟ್‌ನಲ್ಲಿ ಪ್ರಾರಂಭಿಸಿ, ಇನ್ನಿಂಗ್ಸ್‌ನುದ್ದಕ್ಕೂ ಬ್ಯಾಟ್ ಮಾಡುವ ಮೂಲಕ 160 ಅಥವಾ ಅದಕ್ಕಿಂತ ಹೆಚ್ಚಿನದರಲ್ಲಿ ಮುಗಿಸುವ ಅವಕಾಶವಿದೆ," ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಭಾಗವಹಿಸಿದ್ದ ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್‌ನಲ್ಲಿ ಬ್ರಿಯಾನ್ ಲಾರಾ ಹೇಳಿದರು.

"ನೀವು ನನ್ನನ್ನು ಕೇಳಿದರೆ, ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಗ್ರ ಮೂವರು ಆಟಗಾರರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಆಗಿರಬೇಕು. ಇನ್ನು ಆರ್‌ಸಿಬಿ ತಂಡಕ್ಕಾಗಿ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತರಾಗಬಾರದು, ಏಕೆಂದರೆ ಇದು ತಂಡದ ಪ್ರಯತ್ನವಾಗಿರಬೇಕು," ಎಂದು ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟರು.

Security breach during CM Siddaramaiah campaign video viral

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಇನ್ನಿಂಗ್ಸ್‌ ತೆರೆಯುವುದು ಆಕರ್ಷಕವಾಗಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಒಪ್ಪಿಕೊಂಡರು. ಆದರೆ ಅಗ್ರಸ್ಥಾನದಲ್ಲಿ ಅನುಭವಿ ಆಟಗಾರನೊಂದಿಗೆ ಕಿರಿಯ ಆಟಗಾರನನ್ನು ಜೋಡಿ ಮಾಡಲು ಭಾರತಕ್ಕೆ ಬಲವಾದ ಸಲಹೆ ನೀಡಿದರು.

"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಆರಂಭಿಕರಾಗಿ ಹೋಗುವುದು ಭಾರತಕ್ಕೆ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೂ, ನೀವು ಪ್ರಾರಂಭದಲ್ಲಿ ಸ್ವಲ್ಪ ಯುವ ಬ್ಯಾಟರ್‌ನ ಪಂಚ್ ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ".

"ಅನುಭವಿ ರೋಹಿತ್ ಶರ್ಮಾ ಅವರೊಂದಿಗೆ ಕಿರಿಯ ಆಟಗಾರ ಶುಭ್ಮನ್ ಗಿಲ್ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾರೆ ಮತ್ತು ಇನ್ನೊಬ್ಬ ಅನುಭವಿ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್‌ ಕಾಯ್ದುಕೊಳ್ಳುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ತಿಳಿಸಿದರು.

20,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿರುವ 54 ವರ್ಷದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ತಮ್ಮ ಕೈಯಲ್ಲಿರುವ ಅವಕಾಶದ ಮೇಲೆ ಗಮನ ಕೇಂದ್ರೀಕರಿಸಲು ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಸಲಹೆ ನೀಡಿದರು.

"ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಅಥವಾ ಶುಭ್ಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ ಅಥವಾ ರಿಯಾನ್ ಪರಾಗ್ ಸ್ವಲ್ಪ ಆತಂಕಕ್ಕೊಳಗಾಗಿರುವುದು ಸಹಜ. ತಾವು ಐಪಿಎಲ್‌ನಲ್ಲಿ ರನ್ ಗಳಿಸಿದರೆ, ಭಾರತದ ವಿಶ್ವಕಪ್ ತಂಡಕ್ಕೆ ಪ್ರವೇಶಿಸಬಹುದು ಎಂದು ಅವರಿಗೆ ತಿಳಿದಿದೆ. ಆದರೆ ನೀವು ಆ ಎರಡು ಆಲೋಚನೆಗಳನ್ನು ಪ್ರತ್ಯೇಕಿಸಬೇಕಿದೆ".

"ನನ್ನ ಆಟದ ದಿನಗಳಲ್ಲಿ ನಾನು ಅದರೊಂದಿಗೆ ಹೋರಾಡಿದೆ. ಯುವ ಆಟಗಾರರಿಗೆ ನನ್ನ ಸಲಹೆ ಏನೆಂದರೆ, ಐಪಿಎಲ್‌ನಲ್ಲಿ ಗಮನಹರಿಸಿ, ರನ್ ಗಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಮತ್ತು ಟಿ20 ವಿಶ್ವಕಪ್ ಆಯ್ಕೆ ತನ್ನಷ್ಟಕ್ಕೆ ತಾನು ನಡೆಯುತ್ತದೆ," ಎಂದು ಬ್ರಿಯಾನ್ ಲಾರಾ ತಿಳಿಸಿದರು.

Story first published: Tuesday, April 9, 2024, 10:35 [IST]
Other articles published on Apr 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+