Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

200 ಆಯ್ತು ಎಂದ ಮಯಾಂಕ್, 300 ಮಾಡಿಬಿಡು ಅಂದ ಕೊಹ್ಲಿ: ವಿಡಿಯೋ

Virat Kohli signals Mayank Agarwal to keep batting and go for a double ton

ಇಂದೋರ್, ನವೆಂಬರ್ 16: ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಈಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೇವಲ 12 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿರುವ ಮಯಾಂಕ್ 2 ದ್ವಿಶತಕಗಳನ್ನು ಬಾರಿಸಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ-ಬಾಂಗ್ಲಾ ಮೊದಲ ಟೆಸ್ಟ್‌ನಲ್ಲಿ 2ನೇ ದ್ವಿಶತಕ ಬಾರಿಸಿ ಮಯಾಂಕ್ ಗಮನ ಸೆಳೆದಿದ್ದರು.

ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ vs ಬಾಂಗ್ಲಾ ನಡುವಿನ ಮೊದಲ ಟೆಸ್ಟ್‌ನ ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಮಯಾಂಕ್ 330 ಎಸೆತಗಳಿಗೆ 243 ರನ್ ಬಾರಿಸಿದ್ದರು. ಇದರಲ್ಲಿ 28 ಬೌಂಡರಿ, 8 ಸಿಕ್ಸರ್‌ಗಳೂ ಸೇರಿದ್ದವು. ಅಂದ್ಹಾಗೆ ಆಟದ ನಡುವೆ ಮಯಾಂಕ್ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವಿನ ಸಂವಹನ ಪ್ರೇಕ್ಷರನ್ನು ಹೆಚ್ಚು ಸೆಳೆದಿತ್ತು.

ಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46119

ಶುಕ್ರವಾರದ (ನವೆಂಬರ್ 15) ದಿನದಾಟದಲ್ಲಿ 150 ರನ್‌ ಪೂರೈಸಿದ ಮಯಾಂಕ್ ಕೊಹ್ಲಿಯತ್ತ ದಿಟ್ಟಿಸಿ ಸಂಭ್ರಮ ಹಂಚಿಕೊಂಡರು. ಮಯಾಂಕ್ ಅವರತ್ತ ನೋಡಿದ ಕೊಹ್ಲಿ ದ್ವಿಶತಕ ಪೂರೈಸಿಬಿಡು ಎಂಬಂತೆ ಕೈ ಸನ್ನೆ ಮಾಡಿದ್ದರು. ಅದಕ್ಕೆ ಮಯಾಂಕ್ ಕೂಡ ಆಯ್ತೆಂಬಂತೆ ಪ್ರತಿಕ್ರಿಯಿಸಿದ್ದರು.

ಅದಾಗಿ ಕೊಂಚ ಹೊತ್ತಿನಲ್ಲಿ ಮಯಾಂಕ್ ದ್ವಿಶತಕ ಪೂರೈಸಿದರು. ಆ ಕ್ಷಣ ಕೊಹ್ಲಿಯತ್ತ ದಿಟ್ಟಿಸಿದ ಮತ್ತೆ ಅಗರ್ವಾಲ್ '200 ರನ್ ಹೊಡೆದುಬಿಟ್ಟೆ' ಎಂಬಂತೆ ಕೈ ಸನ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ವಿರಾಟ್, 'ಹಾಗೇ 300 ಹೊಡೆದುಬಿಡು ಅತ್ಲಾಗೆ,' ಎಂಬಂತೆ ಕೈ ಸನ್ನೆ ಮೂಲಕ ಮಯಾಂಕ್‌ರನ್ನು ಹುರಿದುಂಬಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಮಯಾಂಕ್-ಕೊಹ್ಲಿ ನಡುವಿನ ಈ ಸಂಭಾಷಣೆ, ಪ್ರೇಕ್ಷಕರ ಮನಸೂರೆಗೊಳಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ ಬಾರಿಸಿದ್ದರೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 493 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಈ ಪಂದ್ಯದಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಿದೆ.

Story first published: Saturday, November 16, 2019, 15:21 [IST]
Other articles published on Nov 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+