ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಒಂದು ಬದಿಯಲ್ಲಿ ವಿಕೆಟ್‌ಗಳು ಪಟಪಟನೇ ಬೀಳುತ್ತಾ ಇದ್ದರೂ ಸಹ, ಇನ್ನೊಂದು ತುದಿಯಲ್ಲಿ ತಳವೂರಿ ನಿಂತಿದ್ದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪ್ರವಾಸಿ ತಂಡದ ಸರಣಿ ಗೆಲುವಿನ ಆಸೆಗೆ ದೊಡ್ಡ ಗೋಡೆಯಂತೆ ತಡೆಯಾಗಿ ನಿಂತಿದ್ದ ವಿರಾಟ್, ಮತ್ತೊಮ್ಮೆ ಗುರಿಯನ್ನು ಬೆನ್ನಟ್ಟಿದಾಗ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 93 ರನ್ ಸಿಡಿಸಿದ್ದರು. ಅಲ್ಲದೆ ಎರಡನೇ ಪಂದ್ಯದಲ್ಲಿ 23 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. ಆದರೆ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿರಾಟ್ ತಮ್ಮ ಕ್ಲಾಸ್ ಬ್ಯಾಟ್ ಮಾಡುವ ಮೂಲಕ ಆರ್ಭಟಿಸಿದರು. ಇಂದೋರ್‌ನಲ್ಲಿ ನೆರೆದಿದ್ದ ಅಭಿಮಾನಿಗಳ ಹಬ್ಬದೂಟವನ್ನು ಉಣಬಡಿಸಿದ ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 54ನೇ ಶತಕವನ್ನು ಬಾರಿಸಿದರು.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಚೇಸಿಂಗ್‌ನಲ್ಲಿ ಶತಕ ಬಾರಿಸುತ್ತಿದ್ದಂತೆ ದಾಖಲೆ ಬರೆದರು. ರನ್‌ಗಳನ್ನು ಗುರಿ ಹತ್ತಿದಾಗ ವಿರಾಟ್ 29ನೇ ಶತಕವನ್ನು ಸಿಡಿಸಿದರು. ವಿರಾಟ್ ಕೊಹ್ಲಿ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು.
ನ್ಯೂಜಿಲೆಂಡ್ ವಿರುದ್ಧ ಇಂದೋರ್ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ದೊಡ್ಡ ದಾಖಲೆಯನ್ನು ಬರೆದರು. ಈ ಶತಕದ ಮೂಲಕ ವಿರಾಟ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಶತಕದ ಮೂಲಕ ವಿರಾಟ್, ರಿಕ್ಕಿ ಪಾಂಟಿಂಗ್ ದಾಖಲೆಯನ್ನು ಅಳಿಸಿ ಹಾಕಿದರು. ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧ ಏಳನೇ ಶತಕವನ್ನು ಬಾರಿಸಿ ಆರ್ಭಟಿಸಿದರು.