Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಒಂದು ಶತಕ ಬಾರಿಸುತ್ತಲೇ ಹಲವು ದಾಖಲೆ ಬರೆದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಭರ್ಜರಿ ಲಯಕ್ಕೆ ಮರಳಿದ್ದಾರೆ. ರಾಯ್‌ಪುರದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶತಕ ಬಾರಿಸಿದ್ದಾರೆ. ಈ ಮೂಲಕ ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಕೆಕೆಆರ್‌ ನೀಡಿದ್ದ 193 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್‌ ವಿರಾಟ್‌ ಕೊಹ್ಲಿ ಸೂಪರ್ ಬ್ಯಾಟಿಂಗ್ ನಡೆಸಿದರು. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದರು. ಇವರು ಎಲ್‌ಎಸ್‌ಜಿ ಹಾಗೂ ಮುಂಬೈ ಇಂಡಿಯನ್ಸ್‌ ವಿರುದ್ಧ ರನ್‌ ಕಲೆಹಾಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು. ಹೀಗಾಗಿ ಕೆಕೆಆರ್‌ ಪಂದ್ಯದಲ್ಲಿ ವಿರಾಟ್ ಅವರ ಮೇಲೆ ಒತ್ತಡವಿತ್ತು. ಆದರೆ ಈ ಒತ್ತಡವನ್ನು ವಿರಾಟ್‌ ಮೆಟ್ಟಿನಿಂತು ಬ್ಯಾಟ್ ಮಾಡಿದರು.

Virat Kohli

ಆರಂಭದಲ್ಲಿ ವಿರಾಟ್‌ ಒಂದು ರನ್‌ ಪಡೆಯುತ್ತಲೇ ಶತಕ ಬಾರಿಸಿದಂತೆ ಸಂಭ್ರಮಿಸಿದರು. ಇದಾದ ಬಳಿಕ ರೋವ್‌ಮನ್‌ ಪೊವೆಲ್‌ ಅವರು ವಿರಾಟ್‌ 21 ರನ್‌ ಆಗಿದ್ದಾಗ ಒಂದು ಕ್ಯಾಚ್ ಕೈ ಬಿಟ್ಟರು. ಈ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ವಿರಾಟ್‌ 60 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 105 ರನ್‌ ಬಾರಿಸಿ ಅಬ್ಬರಿಸಿದರು. ಈ ಮೂಲಕ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಒಂಬತ್ತು ಶತಕಗಳನ್ನು ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ವಿರಾಟ್‌ ಕೊಹ್ಲಿ ಈ ಶತಕದ ಸಹಾಯದಿಂದ ಆರೆಂಜ್ ಕ್ಯಾಪ್ ರೇಸ್‌ನಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಡಿದ 12 ಪಂದ್ಯಗಳಲ್ಲಿ ವಿರಾಟ್‌ 53ರ ಸರಾಸರಿಯಲ್ಲಿ 484 ರನ್‌ ಸಿಡಿಸಿದ್ದು ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್‌

ಹೆನ್ರಿಕ್ ಕ್ಲಾಸೆನ್ (ಎಸ್‌ಆರ್‌ಎಚ್‌), 12 ಪಂದ್ಯ, 508 ರನ್‌
ಸಾಯಿ ಸುದರ್ಶನ್‌ (ಜಿಟಿ), 12 ಪಂದ್ಯ, 501 ರನ್‌
ವಿರಾಟ್ ಕೊಹ್ಲಿ (ಆರ್‌ಸಿಬಿ), 12 ಪಂದ್ಯ, 484 ರನ್‌
ಅಭಿಷೇಕ್ ಶರ್ಮಾ (ಎಸ್‌ಆರ್‌ಎಚ್‌), 12 ಪಂದ್ಯ, 481 ರನ್‌
ಕೆಎಲ್ ರಾಹುಲ್ (ಡಿಸಿ), 12 ಪಂದ್ಯ, 477 ರನ್‌

ಐಪಿಎಲ್‌ನಲ್ಲಿ ಹೆಚ್ಚು ಪಂದ್ಯ ಆಡಿದ ಆಟಗಾರ

ಕೆಕೆಆರ್‌ ವಿರುದ್ಧ ಪಂದ್ಯದಲ್ಲಿ ವಿರಾಟ್ ಕಣಕ್ಕೆ ಇಳಿಯುತ್ತಿದ್ದಂತೆ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಈ ಮೂಲಕ ಇವರು ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮೀರಿ ನಿಂತರು. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ 278 ಪಂದ್ಯ ಆಡಿದ್ದಾರೆ.

ಡೇವಿಡ್ ವಾರ್ನರ್ ದಾಖಲೆ ಸಮ

ರಾಯ್‌ಪುರದಲ್ಲಿ ಶತಕ ಬಾರಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 10ನೇ ಶತಕ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ದಾಖಲೆಯ ಸಮಕ್ಕೆ ನಿಂತರು.

Virat Kohli

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್ಸ್‌

ಕ್ರಿಸ್‌ ಗೇಲ್‌, 22 ಶತಕ
ಬಾಬಾರ್ ಅಜಮ್, 13 ಶತಕ
ವಿರಾಟ್ ಕೊಹ್ಲಿ, 10 ಶತಕ
ಡೇವಿಡ್ ವಾರ್ನರ್, 10 ಶತಕ

ಗೇಲ್‌ ದಾಖಲೆ ಉಡೀಸ್‌

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮೂರಂಕಿ ಮುಟ್ಟುವ ಮೂಲಕ ವಿರಾಟ್‌ ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಿದರು. ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ವಿರಾಟ್ ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಲು 409 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಈ ಮೊದಲು ಈ ದಾಖಲೆ ವೆಸ್ಟ್‌ ಇಂಡೀಸ್ ತಂಡದ ದೈತ್ಯ ಆಟಗರ ಕ್ರಿಸ್‌ ಗೇಲ್ ಹೆಸರಿನಲ್ಲಿತ್ತು. ಇವರು 423 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Story first published: Thursday, May 14, 2026, 5:10 [IST]
Other articles published on May 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+