Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

65 ರನ್‌ ಬಾರಿಸುತ್ತಲೇ ಹಲವು ದಾಖಲೆಗಳನ್ನು ಬರೆದ ಕಿಂಗ್ ಕೊಹ್ಲಿ

ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಎಲ್ಲರ ಚಿತ್ತ ಕದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿಯುತ್ತಿದ್ದಾಗಲೇ ಬಿಗ್‌ ಇನಿಂಗ್ಸ್‌ ಕಟ್ಟುವ ಸೂಚನೆ ನೀಡಿದ್ದರು. ಉತ್ತಮ ಫುಟ್ ವರ್ಕ್‌ ಪ್ರದರ್ಶಿಸಿದ ವಿರಾಟ್‌ ಆರಂಭದಲ್ಲಿ ಎದುರಾಳಿ ಬೌಲರ್‌ಗಳ ತಂತ್ರವನ್ನು ಅರಿತು ಆಡಿದರು. ಬಳಿಕ ಬಿಗ್ ಹಿಟ್‌ಗಳ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಇವರು ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ 65 ರನ್‌ ಬಾರಿಸಿ ಮಿಂಚಿದರು. ಈ ಮೂಲಕ ವಿರಾಟ್‌ ಹಲವು ದಾಖಲೆಗಳನ್ನು ಬರೆದರು.

Virat Kohli

ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ 4 ರನ್‌ ಬಾರಿಸುತ್ತಿದ್ದಂತೆ ಇಂಗ್ಲೆಂಡ್‌ನಲ್ಲಿ ಮೂರು ಫಾರ್ಮೆಟ್‌ಗಳನ್ನು ಕೂಡಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ಕರ್ನಾಟಕದ ಸ್ಟಾರ್ ಆಟಗಾರ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮೀರಿ ನಿಂತರು.

ವಿರಾಟ್‌ ದಾಖಲೆ

ಇಂಗ್ಲೆಂಡ್‌ನಲ್ಲಿ ವಿರಾಟ್‌ 14 ಬಾರಿ ಅರ್ಧಶತಕದ ಗಡಿಯನ್ನು ದಾಟಿದರು. ಈ ಮೂಲಕ ವೆಸ್ಟ್‌ ಇಂಡೀಸ್ ತಂಡದ ದಿಗ್ಗಜ ಆಟಗಾರ ವಿವ್ ರಿಚರ್ಡ್ಸ್ ದಾಖಲೆಯನ್ನು ಸರಿಗಟ್ಟಿದರು. ಇಂಗ್ಲೆಂಡ್‌ ನೆಲದಲ್ಲಿ ವಿರಾಟ್ ಆಡಿದ ಏಕದಿನ ಪಂದ್ಯದಲ್ಲಿ 14ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದರು.

ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ದಾಖಲೆ ಅಳಿಸಿದ Rohit Sharma

ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ದಾಖಲೆ ಅಳಿಸಿದ Rohit Sharma

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕುಮಾರ್ ಸಂಗಾಕ್ಕರ ಅಗ್ರಸ್ಥಾನದಲ್ಲಿದ್ದಾರೆ. ಇವರು ಇಂಗ್ಲೆಂಡ್‌ನಲ್ಲಿ 15 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಈ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ವಿರಾಟ್‌ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ, ಸಂಗಾಕ್ಕರ ದಾಖಲೆಯ ಸಮಕ್ಕೆ ನಿಲ್ಲಬಹುದು.

ಕೋಚ್‌ ಗಂಭೀರ್‌, ಟೀಮ್ ಇಂಡಿಯಾಕ್ಕೆ ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ಬಿಗ್ ವಾರ್ನಿಂಗ್

ಕೋಚ್‌ ಗಂಭೀರ್‌, ಟೀಮ್ ಇಂಡಿಯಾಕ್ಕೆ ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ಬಿಗ್ ವಾರ್ನಿಂಗ್

ವಿರಾಟ್‌ ಕೊಹ್ಲಿ ವಿದೇಶದಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಂಗಾ ದಾಖಲೆಯನ್ನು ಅಳಿಸಿ ಹಾಕಿದರು. 149 ಏಕದಿನ ಪಂದ್ಯದಲ್ಲಿ ವಿರಾಟ್‌ 5519 ರನ್‌ ಬಾರಿಸಿದ್ದಾರೆ. ಇನ್ನು ಕುಮಾರ್ ಸಂಗಾಕ್ಕರ 5518 ರನ್‌ ಬಾರಿಸಿದ್ದರು. ಈ ಪಟ್ಟಿಯಲ್ಲಿ ರಿಕ್ಕಿ ಪಾಂಟಿಂಗ್ (5090), ಸಚಿನ್ ತೆಂಡೂಲ್ಕರ್‌ (5065), ಎಂ ಎಸ್‌ ಧೋನಿ (4520) ಇದ್ದಾರೆ.

Story first published: Thursday, July 16, 2026, 23:09 [IST]
Other articles published on Jul 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+