ಕುಲದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ಕೊಹ್ಲಿ ಆಸೀಸ್‌ಗೆ ಸಂದೇಶ ರವಾನಿಸಿದರೆ?!


ಅಡಿಲೇಡ್, ಡಿಸೆಂಬರ್ 4: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಭಾರತ, ಸರಣಿಯನ್ನು ಗೆದ್ದೇ ತೀರುವ ಯೋಜನೆಯಲ್ಲಿದೆ. ಇತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಅಭ್ಯಾಸದ ವೇಳೆ ಬ್ಯಾಟ್ ಬೀಸುವ ಮೂಲಕ ಸರಣಿ ಕೈ ಬಿಡುವ ವಿಚಾರವಿಲ್ಲ ಎಂಬುನ್ನು ಸಾರಿದ್ದಾರೆ.
ಅಡಿಲೇಡ್ ನಲ್ಲಿ ಡಿಸೆಂಬರ್ 6ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಅಡಿಲೇಡ್ ನಲ್ಲಿ ಮಂಗಳವಾರ (ಡಿಸೆಂಬರ್ 4) ಭಾರತ ಅಭ್ಯಾಸ ನಡೆಸುತ್ತಿರುವಾಗ ಕುಲದೀಪ್ ಯಾದವ್ ಎಸೆತಕ್ಕೆ ಕೊಹ್ಲಿ ದೊಡ್ಡ ಹೊಡೆತ ಕೊಟ್ಟರು. ಈ ಮೂಲಕ ಕೊಹ್ಲಿ, ಪಂದ್ಯದ ವೇಳೆ ಅಮೋಘ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ್ದಾರೆ.
ನೆಟ್ ಅಭ್ಯಾಸದ ವೇಳೆ ಹೆಚ್ಚಾಗಿ ಕೌಶಲಯುತ ಹೊಡೆತದ ಕಡೆ, ವಿಭಿನ್ನ ಎಸೆತಗಳಿಗೆ ಹೊಂದಾಣಿಕೆಯ ಬ್ಯಾಟಿಂಗ್ ನಡೆಸುವ ಬಗ್ಗೆ ಬ್ಯಾಟ್ಸ್ಮನ್‌ಗಳು ಗಮನ ಹರಿಸೋದಿದೆ. ಆದರೆ ಮಂಗಳವಾರ (ಡಿಸೆಂಬರ್ 4) ನೆಟ್ ಅಭ್ಯಾಸದ ವೇಳೆ ಕೊಹ್ಲಿ, ಕುಲದೀಪ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತ ಕೊಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಐಸಿಸಿ ಅಗ್ರ ಸ್ಥಾನದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿ ವೇಳೆ ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಭಾರತ ಸರಣಿ ಗೆದ್ದರೆ ಅದೂ ಒಂದು ದಾಖಲೆಯಾಗಿ ಉಳಿಯಲಿದೆ. ಯಾಕೆಂದರೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಸರಣಿ ಗೆದ್ದಿರುವುದು ಅಪರೂಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications