ಸನ್‌ರೈಸರ್ಸ್ ವಿರುದ್ಧ ವಿರಾಟ್ ಅಬ್ಬರ: ಒಂದೇ ಪಂದ್ಯದಲ್ಲಿ ಕೊಹ್ಲಿ ಬರೆದ ದಾಖಲೆಗಳ ಪಟ್ಟಿ
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸಮಯೋಚಿತ ಪ್ರದರ್ಶನ ನೀಡಿದ ರಜತ್ ಪಾಟಿದಾರ್ ಪಡೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಮ್ಮ ಖ್ಯಾತಿಗೆ ತಕ್ಕ ಆಟವಾಡಿದ ವಿರಾಟ್ ಅಬ್ಬರಿಸಿದ್ದಾರೆ.
ಹೈದರಾಬಾದ್ ನೀಡಿದ್ದ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿ ಬೀಗಿತು. ಈ ವೇಳೆ ತಂಡದ ಸ್ಟಾರ್ ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ ಸಹ ತಮ್ಮ ಜವಾಬ್ದಾರಿಯ ಅರಿತು ಬ್ಯಾಟ್ ಮಾಡಿದರು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಈ ಇನಿಂಗ್ಸ್‌ನಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಈ ಅಮೋಘ ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

ರನ್‌ಗಳನ್ನು ಬೆನ್ನಟ್ಟುವಾಗ ವಿರಾಟ್ 4 ಸಾವಿರ ರನ್‌ಗಳನ್ನು ಪೂರೈಸಿದ್ದಾರೆ. ಈ ಮೊದಲು ಈ ಸಾಧನೆಯನ್ನು ಯಾವೊಬ್ಬ ಬ್ಯಾಟರ್ ಮಾಡಿರಲಿಲ್ಲ.
ಐಪಿಎಲ್‌ನಲ್ಲಿ ಚೇಸಿಂಗ್ ಮಾಡುವಾಗ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್
4027, ವಿರಾಟ್ ಕೊಹ್ಲಿ
3285, ಡೇವಿಡ್ ವಾರ್ನರ್
3238, ರೋಹಿತ್ ಶರ್ಮಾ
2843, ಶಿಖರ್ ಧವನ್
2832, ರಾಬಿನ್ ಉತ್ತಪ್ಪ
ರನ್ ಚೇಸ್ ಮಾಡುವಾಗ ವಿರಾಟ್ ಕೊಹ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಇವರು ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಮೀರಿ ನಿಂತರು. ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಅವರು ಐಪಿಎಲ್‌ನಲ್ಲಿ ರನ್‌ಗಳನ್ನು ಚೇಸ್ ಮಾಡುವಾಗ 20ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್ ಮಾಡಿ 50ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಪಟ್ಟಿ
21 ಬಾರಿ , ವಿರಾಟ್ ಕೊಹ್ಲಿ
20 ಬಾರಿ, ಡೇವಿಡ್ ವಾರ್ನರ್
20 ಬಾರಿ, ಶಿಖರ್ ಧವನ್
18 ಬಾರಿ, ಗೌತಮ್ ಗಂಭೀರ್
16 ಬಾರಿ, ರೋಹಿತ್ ಶರ್ಮಾ

ಹೈದರಾಬಾದ್ ವಿರುದ್ಧ ಹೆಚ್ಚು ರನ್
69 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ವಿರಾಟ್ ಕೊಹ್ಲಿ ಈಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ ಸನ್ ತಂಡದ ವಿರುದ್ಧ 874 ರನ್ ಗಳಿಸಿದ್ದಾರೆ. ಈ ಮೊದಲು ಈ ದಾಖಲೆ ಸಂಜು ಸ್ಯಾಮ್ಸನ್ ಅವರ ಹೆಸರಿನಲ್ಲಿತ್ತು. ಸಂಜು ಸ್ಯಾಮ್ಸನ್ ಹೈದರಾಬಾದ್ ವಿರುದ್ಧ 867 ರನ್ ಸಿಡಿಸಿದ್ದರು.
ವಿರಾಟ್ ಹೇಳಿದ್ದೇನು?
ಎಸ್‌ಆರ್‌ಎಚ್ ವಿರುದ್ಧ ಪಂದ್ಯದಲ್ಲಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಬೆಂಗಳೂರಿಗೆ ಮರಳಿರುವುದು ಖುಷಿ ನೀಡಿದೆ. ನಾನು ಟಿ20 ಫಾರ್ಮೆಟ್‌ನ ಕೊನೆಯ ಪಂದ್ಯವನ್ನು ಕಳೆದ ವರ್ಷದ ಐಪಿಎಲ್ ಫೈನಲ್‌ನಲ್ಲಿ ಆಡಿದ್ದೆ. ನಾನು ಉತ್ತಮ ಫಾರ್ಮ್‌ನಲ್ಲಿದ್ದು, ಫಿಟ್‌ನೆಸ್‌ಗಾಗಿ ಶ್ರಮಿಸಿದ್ದೇನೆ, ಆದ್ದರಿಂದ ನನ್ನ ಪ್ರದರ್ಶನ ಉತ್ತಮವಾಗುತ್ತದೆ. ನಾನು ಆಟವಾಡಲು ಬಂದಾಗಲೆಲ್ಲಾ, ನನ್ನ 120 ಪ್ರತಿಶತವನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ವಿರಾಟ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications