Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

92 ದಿನಗಳ ಬಳಿಕ ಮೈದಾನಕ್ಕೆ ಇಳಿದ ಬುಮ್ರಾಗೆ ಸಿಕ್ಸರ್ ಬಾರಿಸಿ ಸ್ವಾಗತಿಸಿದ ವಿರಾಟ್ ಕೊಹ್ಲಿ

ಐಪಿಎಲ್‌ನಲ್ಲಿ ಸೋಮವಾರ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯಕ್ಕಾಗಿ ಮುಂಬೈ ಸಜ್ಜಾಗಿತ್ತು. ಈ ಪಂದ್ಯದ ವಿಶೇಷತೆ ಏನಪ್ಪಾ ಅಂದ್ರೆ ವಿಶ್ವದ ಸ್ಟಾರ್ ಆಟಗಾರರು ಮೈದಾನದಲ್ಲಿ ಎದುರಾದ್ರು. ತಮ್ಮ ವಿಶಿಷ್ಠ ಬೌಲಿಂಗ್‌ನಿಂದಲೇ ಎದುರಾಳಿಗಳನ್ನು ಕಾಡುವ ಜಸ್ಪ್ರಿತ್ ಬುಮ್ರಾ ಮುಂಬೈ ಪರ ಕಣಕ್ಕೆ ಇಳಿದ್ರೆ, ತಮ್ಮ ಕ್ಲಾಸಿಕ್‌ ಬ್ಯಾಟಿಂಗ್‌ನಿಂದ ಹೆಸರು ಮಾಡಿರು ವಿರಾಟ್‌ ಆರ್‌ಸಿಬಿ ಪರ ಕಣಕ್ಕೆ ಇಳಿದರು.

ವಿಶ್ವದ ಟಾಪ್‌ ಕ್ಲಾಸ್ ಆಟಗಾರರ ಮುಖಾಮುಖಿಯನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾದು ಕುಳಿತಿದ್ದರು. ಗಾಯದ ಸಮಸ್ಯೆಯಿಂದ ಮುಂಬೈ ಪರ ಆರಂಭಿಕ ನಾಲ್ಕು ಪಂದ್ಯಗಳನ್ನು ಆಡಿರದ ಜಸ್ಪ್ರಿತ್‌ ಬುಮ್ರಾ, ಆರ್‌ಸಿಬಿ ವಿರುದ್ಧ ಕಣಕ್ಕೆ ಇಳಿದರು. ಇವರ ಕೈಯಲ್ಲಿ ಬೌಲ್‌ ಹಾಗೂ ವಿರಾಟ್‌ ಕೈಯಲ್ಲಿ ಬ್ಯಾಟ್‌ ಇದ್ರೆ ಆ ವಾರ್‌ ನೋಡುವುದೇ ಕಣ್ಣಿಗೆ ಹಬ್ಬ. ಮೂರು ತಿಂಗಳಿನಿಂದ ಕ್ರಿಕೆಟ್‌ ಅಂಗಳದಿಂದ ದೂರ ಉಳಿದಿದ್ದ ಬುಮ್ರಾ ಆರ್‌ಸಿಬಿ ವಿರುದ್ಧ ಕಣಕ್ಕೆ ಇಳಿದ್ರು.

Virat Kohli Smashes Six to Welcome Jasprit Bumrah Back After 92 Days in Thrilling IPL Clash

ಜಸ್ಪ್ರಿತ್ ಬುಮ್ರಾ ಮುಂಬೈ ತಂಡ ಸೇರುತ್ತಾ ಇದ್ದಂತೆ ಜೋಶ್‌ ತುಂಬಿತ್ತು. ಇವರು ಪವರ್ ಪ್ಲೇನ್ ನಾಲ್ಕನೇ ಓವರ್‌ ಬೌಲ್‌ ಮಾಡಿದರು. ಇವರ ಮೊದಲ ಎಸೆತವನ್ನು ದೇವದತ್ ಪಡಿಕ್ಕಲ್‌ ಮಿಡ್ ಓನ್‌ಗೆ ತಳ್ಳಿ ಒಂದು ರನ್‌ ಪಡೆದರು. ವಿರಾಟ್‌ ಕೊಹ್ಲಿ ಸ್ಟ್ರೈಕ್‌ಗೆ ಬಂದರು. ಮದಜಗಳ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ವಿರಾಟ್ ಕೊಹ್ಲಿ ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಬಿಗ್‌ ಹಿಟ್ ಬಾರಿಸಿದರು. ಲಾಂಗ್‌ ಆನ್‌ ಮೇಲಿನಿಂದ ಸಿಕ್ಸರ್ ಬಾರಿಸಿದ ವಿರಾಟ್‌, ಬುಮ್ರಾ ಅವರಿಗೆ ಸ್ವಾಗತ ಕೋರಿದರು.

ಇನ್ನು ಜಸ್ಪ್ರಿತ್ ಬುಮ್ರಾ ತಮ್ಮ ಎರಡನೇ ಓವರ್‌ನ್ನು 11ನೇ ಓವರ್‌ನಲ್ಲಿ ಬೌಲ್ ಮಾಡಿದರು. ಈ ಓವರ್‌ ಮುಗಿದ ಮೇಲೆ ಇಬ್ಬರೂ ದಿಗ್ಗಜರು ಭುಜಕ್ಕೆ ಭುಜ ತಲುಗಿಸಿ ನಗುತ್ತಾ ಕಾಡಿದ್ರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವಿಕೆಟ್‌ ಬರ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಮಾಡಿದ ಬೌಲಿಂಗ್ ಗಮನ ಸೆಳೆದರು. 92 ದಿನಗಳ ಬಳಿಕ ಮೈದಾನಕ್ಕೆ ಬಳಿಕ ಜಸ್ಪ್ರಿತ್ ಬುಮ್ರಾ ವಿಕೆಟ್‌ ಪಡೆಯದೆ ನಿರಾಸೆಯನ್ನು ಅನುಭವಿಸಿದರು. ಇವರು 4 ಓವರ್‌ ಬೌಲ್‌ ಮಾಡಿ 29 ರನ್‌ ನೀಡಿದರು.

ವಿರಾಟ್‌ ಅಬ್ಬರ

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 42 ಎಸೆತಗಳಲ್ಲಿ ವಿರಾಟ್‌ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 67 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಇನ್ನು ರಜತ್‌ ಪಟಿದಾರ್ ಅವರ 64 ರನ್‌, ಜಿತೇಶ್‌ ಶರ್ಮಾ ಅಜೇಯ 40 ರನ್‌ಗಳ ಸಹಾಯದಿಂದ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್‌ ಸೇರಿಸಿತು.

Story first published: Monday, April 7, 2025, 22:34 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+