ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿ ಸುದ್ದಿಯಲ್ಲಿ ವಿರಾಟ್ ಕೊಹ್ಲಿ, ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟ್ ಮಾಡುವ ಮುನ್ನವೇ ಸುದ್ದಿಯಾಗಿದ್ದಾರೆ. ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ವಿರಾಟ್ ಶಾರ್ಪ್ ಕ್ಯಾಚ್ ಪಡೆದು ದಾಖಲೆ ಬರೆದಿದ್ದಾರೆ. ಅವರು ಬರೆದ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟ್ ಮಾಡಿ 46.3 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಆಸೀಸ್ ಪರ ಮ್ಯಾಟ್ ರೆನ್ಶಾ (56) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಟ್ರಾವಿಸ್ ಹೆಡ್ 29, ಮ್ಯಾಥ್ಯೂ ಶಾರ್ಟ್ 30 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಭಾರತದ ಪರ ಯುವ ವೇಗಿ ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದರು. ಉಳಿದಂತೆ ಆಫ್ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್‌ನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಇನಿಂಗ್ಸ್‌ನ 23ನೇ ಓವರ್‌ನ್ನು ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಲು ಮುಂದಾದರು. ಈ ವೇಳೆ ಓವರ್ ಮೂರನೇ ಎಸೆತದಲ್ಲಿ ಮ್ಯಾಥ್ಯೂ ಶಾರ್ಟ್, ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸ್ವಿಪ್ ಶಾಟ್ ಬಾರಿಸಲು ಮುಂದಾದರು. ಈ ವೇಳೆ ಅಲ್ಲಿಯೇ ನಿಂತು ಫಿಲ್ಡ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಚೆಂಡು, ತಮ್ಮ ಬಳಿ ಇರುತ್ತಿದೆ ಎಂಬುದನ್ನು ಗಮನಿಸಿದ ವಿರಾಟ್ ಚೆಂಡಿನ ಮೇಲಿನ ಕಣ್ಣು ತೆರೆಯಲೇ ಇಲ್ಲ. ಪರಿಣಾಮ ಶಾರ್ಪ್ ಕ್ಯಾಚ್ ಪಡೆದು ಬೀಗಿದರು.
ಇದೇ ಪಂದ್ಯದ 47ನೇ ಓವರ್‌ನಲ್ಲಿ ಕೂಪರ್ ಕಾನೋಲಿ ಅವರ ಕ್ಯಾಚ್ ಅನ್ನು ಹರ್ಷಿತ್ ರಾಣಾ ಖೆಡ್ಡಾ ತೋಡಿದರು. ಈ ಓವರ್‌ನ 2 ಎಸೆತದಲ್ಲಿ ಕೂಪರ್ ಕಾನೋಲಿ ಎಕ್ಸ್‌ಟ್ರಾ ಕವರ್ ಮೇಲೆ ಬಾರಿಸಲು ಮುಂದಾಗಿ ವಿರಾಟ್ ಕೊಹ್ಲಿ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಕೊಹ್ಲಿ ಆಸ್ಟ್ರೇಲಿಯಾದಲ್ಲಿ 38 ಕ್ಯಾಚ್, ಇಂಗ್ಲೆಂಡ್‌ನ ಇಯಾನ್ ಬೋಥಮ್ 37 ಕ್ಯಾಚ್ ಪಡೆದಿದ್ದರು. ಈ ದಾಖಲೆಯನ್ನು ವಿರಾಟ್ ಅಳಿಸಿ ಹಾಕಿದರು.
ವಿರಾಟ್ ಕೊಹ್ಲಿ ಈ ಕ್ಯಾಚ್ ಪಡೆಯುವ ಮೂಲಕ ಮತ್ತೊಂದು ದಾಖಲೆ ಬರೆದರು. ವಿಕೆಟ್ ಕೀಪರ್ ಅಲ್ಲದೆ ಫೀಲ್ಡರ್ ಒಬ್ಬ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಸಾಧನೆ ಸ್ಟೀವನ್ ಸ್ಮಿತ್ ಅವರ ಹೆಸರಿನಲ್ಲಿತ್ತು. ಇವರು ಇಂಗ್ಲೆಂಡ್ ವಿರುದ್ಧ 76 ಕ್ಯಾಚ್‌ಗಳನ್ನು ಪಡೆದಿದ್ದರು.
ವಿರಾಟ್ ಕೊಹ್ಲಿ (ಭಾರತ), 78 ಕ್ಯಾಚ್, ಆಸ್ಟ್ರೇಲಿಯಾ ವಿರುದ್ಧ
ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ), 77 ಕ್ಯಾಚ್, ಇಂಗ್ಲೆಂಡ್ ವಿರುದ್ಧ
ಮಹೇಲ್ ಜಯವರ್ಧನೆ (ಶ್ರೀಲಂಕಾ), 72 ಕ್ಯಾಚ್, ಇಂಗ್ಲೆಂಡ್ ವಿರುದ್ಧ
ಅಲನ್ ಬಾರ್ಡರ್ (ಆಸ್ಟ್ರೇಲಿಯಾ), 71 ಕ್ಯಾಚ್, ಇಂಗ್ಲೆಂಡ್ ವಿರುದ್ಧ
ಮಹೇಲ್ ಜಯವರ್ಧನೆ (ಶ್ರೀಲಂಕಾ), 68 ಕ್ಯಾಚ್, ಪಾಕಿಸ್ತಾನ ವಿರುದ್ಧ