'ವಿಸ್ಡನ್ಸ್ ಲೀಡಿಂಗ್ ಕ್ರಿಕೆಟರ್ಸ್ 2018' ಪ್ರಶಸ್ತಿಗೆ ಕೊಹ್ಲಿ, ಮಂಧಾನ ಹೆಸರು

ನವದೆಹಲಿ, ಏಪ್ರಿಲ್ 10: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಹಿಳಾ ಏಕದಿನ ಕ್ರಿಕೆಟ್ ಮತ್ತು ಟಿ20ಯಲ್ಲಿ ಕಳೆದ ವರ್ಷ ಅತ್ಯಧಿಕ ರನ್ ಸಾಧನೆ ಮೆರೆದ ಭಾರತದ ಆಟಗಾರ್ತಿ ಸ್ಮೃತಿ ಮಂಧಾನ ಹೆಸರನ್ನು 2018ನೇ ವರ್ಷದ 'ವಿಸ್ಡನ್ಸ್ ಲೀಡಿಂಗ್ ಕ್ರಿಕೆಟರ್ಸ್' ಪ್ರಶಸ್ತಿಗೆ ಹೆಸರಿಸಲಾಗಿದೆ.
ಇಂಗ್ಲೆಂಡ್‌ನ ಜೋಸ್ ಬಟ್ಲರ್, ಸ್ಯಾಮ್ ಕರನ್, ಕೌಂಟಿ ಚಾಂಪಿಯನ್‌ಶಿಪ್ ವಿಜೇತ ನಾಯಕ ರೋರಿ ಬರ್ನ್ಸ್ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಟಮ್ಮಿ ಬ್ಯೂಮಾಂಟ್ ಹೆಸರುಗಳ ಜೊತೆ 'ವಿಸ್ಡನ್ ಫೈವ್ ಕ್ರಿಕೆಟರ್ಸ್ ಆಫ್ ದ ಈಯರ್' ಪ್ರಶಸ್ತಿಗೂ 30ರ ಹರೆಯದ ಕೊಹ್ಲಿ ಹೆಸರನ್ನು ಸೇರಿಸಲಾಗಿದೆ.
ಐಸಿಸಿ ವರ್ಷದ ಕ್ರಿಕೆಟಿಗ, ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟ್ ಆಟಗಾರ, ಐಸಿಸಿ ವರ್ಷದ ಏಕದಿನ ಕ್ರಿಕೆಟ್ ಆಟಗಾರ ಈ ಮೂರೂ ಪ್ರಶಸ್ತಿಗಳನ್ನು ಜಯಿಸಿರುವ ಕೊಹ್ಲಿ ವಿಸ್ಡನ್ ವರ್ಷದ ಮುಂಚೂಣಿ ಕ್ರಿಕೆಟಿಗ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಲಿದ್ದಾರೆ.
ಯುನೈಟೆಡ್ ಕಿಂಗ್‌ಡಮ್ ಪ್ರಕಟಿಸುವ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್ ತನ್ನ 156ನೇ ವಾರ್ಷಿಕ ಸಂಚಿಕೆಯಲ್ಲಿ ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಿದೆ. ಅಂತೂ, ಈ ಅಪರೂಪದ ಸಾಧನೆ ಮರೆದ ವಿಶ್ವದ ಏಕಮಾತ್ರ ಕ್ರಿಕೆಟಿಗ ಗೌರವಕ್ಕೆ ಕೊಹ್ಲಿ ಪಾತ್ರರಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications